ಅಪ್ರಾಪ್ತೆ ಮೇಲೆ ಅತ್ಯಾಚಾರ- ದೂರು ದಾಖಲು

252

Get real time updates directly on you device, subscribe now.

ಮಧುಗಿರಿ: ಅಪ್ರಾಪ್ತ ಯುವತಿಯ ಮೇಲೆ ಆಕೆಯ ಸೋದರ ಮಾವ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿಯ ತಾಯಿ ಮಧುಗಿರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಧುಗಿರಿ ಪುರಸಭೆ ವ್ಯಾಪ್ತಿಯ ಕರಡಿಪುರ ವಾಸಿ ಭಾಗ್ಯಮ್ಮರಿಗೆ 16 ವರ್ಷದ ಹಾಗೂ 14 ವರ್ಷದ ಇಬ್ಬರು ಹೆಣ್ಣುಮಕ್ಕಳು ಇರುತ್ತಾರೆ, 10 ವರ್ಷದ ಹಿಂದೆ ಇವರ ಗಂಡ ತೀರಿಹೋಗಿದ್ದು, ಅಂದಿನಿಂದಲೂ ಆಕೆಯ ತಮ್ಮ ಸೋಮಶೇಖರ್‌ ಅಕ್ಕನ ಮನೆಯಲ್ಲಿಯೇ ಇದ್ದುಕೊಂಡು ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದ, ಭಾಗ್ಯಮ್ಮನ ಹಿರಿಯ ಮಗಳು ಮೊದಲನೇಯ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದು , 5-6 ತಿಂಗಳಿಂದ ಆಕೆಯ ದೇಹಸ್ಥಿತಿಯಲ್ಲಿ ಆದ ಬದಲಾವಣೆ ಕಂಡ ತಾಯಿ ಭಾಗ್ಯಮ್ಮ 4 ದಿನಗಳಿಂದ ಹೊಟ್ಟೆ ನೋವು ಎಂದು ಒದ್ದಾಡುತ್ತಿದ್ದರಿಂದ ಅ. 07 ರಂದು ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ಮಗಳನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಿಗೆ ತೋರಿಸಿದಾಗ ವೈದ್ಯರು ಈಕೆ ಗರ್ಭಿಣಿಯಾಗಿರುತ್ತಾಳೆಂದು ತಿಳಿಸಿದ್ದಾರೆ. ಆಗ ಗಾಬರಿದ ತಾಯಿ ಮಗಳನ್ನು ವಿಚಾರ ಮಾಡಿದಾಗ ಮಾವ ಸೋಮಶೇಖರ ಯಾವತ್ತಿದ್ದರೂ ನಾನೇ ನಿನ್ನನ್ನು ಮದುವೆಯಾಗುವುದು ಎಂದು ಹೇಳಿ ನಾನು ಬೇಡ ಬೇಡ ಎಂದರೂ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾಗಿ ತಿಳಿಸಿದ್ದಾಳೆ, ಈ ಸಂಬಂಧ ತನ್ನ ತಮ್ಮ ಸೋಮಶೇಖರನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮಧುಗಿರಿ ಪೊಲೀಸ್‌ ಠಾಣೆಗೆ ಭಾಗ್ಯಮ್ಮ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!