ಬೆಳೆಯೊಂದಿಗೆ ಉಪ ಉತ್ಪನ್ನ ತಯಾರಿಸಿ

ಹಣ್ಣು ಮಾಗಿಸುವ ಘಟಕ ಉದ್ಘಾಟಿಸಿದ ಸಚಿವ ಮಾಧುಸ್ವಾಮಿ ಹೇಳಿಕೆ

356

Get real time updates directly on you device, subscribe now.

ಗುಬ್ಬಿ: ರೈತರು ಬೆಳೆಯುವ ಪ್ರತಿ ಬೆಳೆಗೂ ಉಪ ಉತ್ಪನ್ನ ತಯಾರು ಮಾಡುವ ಕೆಲಸವನ್ನು ವೈಜ್ಞಾನಿಕವಾಗಿ ಮಾಡಿದಾಗ ರೈತರು ಬೆಳೆದ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತಾಲೂಕಿನ ಹೇರೂರು ಗ್ರಾಮದಲ್ಲಿ ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ಹಾಪ್‌ ಕಾಮ್ಸೌ ವತಿಯಿಂದ ಹಣ್ಣು ಮಾಗಿಸುವ ಘಟಕ ಮತ್ತು ಶೀತಲ ಘಟಕದ ಉದ್ಘಾಟನೆ ಹಾಗೂ ಹಣ್ಣು ತರಕಾರಿ ಮಾರಾಟದ ಮಳಿಗೆ ನಿರ್ಮಾಣ ದ ಶಂಕು ಸ್ಥಾಪನೆ ಕಾರ್ಯ ಉದ್ಘಾಟಿಸಿ ಮತನಾಡಿ, ಇಂತಹ ಘಟಕಗಳು ಮುಂದಿನ ದಿನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಮಾಡಿದರೆ ಒಳ್ಳೆಯದೆ, ಅದರ ಬಗ್ಗೆ ಸರ್ಕಾರ ಕೂಡ ಚಿಂತನೆ ಮಾಡುತ್ತದೆಕ ಇನ್ನೂ ಈ ಘಟಕವನ್ನು ಖಾಸಗಿ ಅಥವಾ ಎನ್‌ಜಿಓ, ಎಫ್‌ಎಓಗಳ ಮೂಲಕವೂ ಈ ಯೋಜನೆ ಮಾಡಬಹುದಾಗಿದೆ, ಮಾಡಲು ಮುಂದೆ ಬಂದರೆ ಸರ್ಕಾರದಿಂದ ಸಬ್ಸಿಡಿ ಸಹ ನೀಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಇಂತಹ ನೂರಾರು ಘಟಕಗಳು ಬೇಕಾಗಿವೆ, ಇದರಿಂದ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಸಂರಕ್ಷಣೆ ಹಾಗೂ ಹೆಚ್ಚು ಲಾಭ ಪಡೆಯಲು ಅನುಕೂಲವಾಗುತ್ತದೆ, ಇತ್ತೀಚೆಗೆ ಎಲ್ಲಾ ರೀತಿಯ ಹಣ್ಣುಗಳನ್ನು ಹಣ್ಣು ಮಾಡಲು
ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಲಾಗುತ್ತಿದೆ, ಅದನ್ನು ರೈತರು ಬಳಕೆ ಮಾಡಬೇಡಿ, ಇಲ್ಲಿರುವ ಘಟಕದಲ್ಲಿ ಹಣ್ಣು ಮಾಡುವ ಘಟಕ ಸಹ ಮಾಡಲಾಗಿದೆ, ಇದನ್ನು ಬಳಸಿಕೊಳ್ಳಿ, ತಾಲೂಕಿನಲ್ಲಿ ತೆಂಗು, ಅಡಿಕೆ, ಮಾವು, ಹಲಸು ಹೀಗೆ ಪ್ರತಿ ಹಣ್ಣುಗಳನ್ನು ಹೆಚ್ಚು ಬೆಳೆಯಲಾಗುತ್ತದೆ, ಹಾಗಾಗಿ ತಾಲೂಕಿನಲ್ಲಿ ಇಂಥ ಘಟಕಗಳು ಹೆಚ್ಚು ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ತಾಲೂಕಿನಲ್ಲಿ 36 ಸಾವಿರ ಹೆಕ್ಟೇರ್‌ ತೆಂಗು, 20 ಸಾವಿರ ಅಡಿಕೆ ಬೆಳೆಯಲಾಗುತ್ತಿದೆ, ಹಾಗಾಗಿ ತಾಲೂಕಿನಲ್ಲಿ ತೋಟಗಾರಿಕೆ ಹೆಚ್ಚು ಬೆಳವಣಿಗೆಯಾಗುತ್ತಿದೆ, ತುಮಕೂರು ಜಿಲ್ಲೆಯಲ್ಲಿ ತೆಂಗು ಬೆಳೆಯಲು ಅನುಕೂಲವಾಗಿದೆ, ಆದರೆ ಇಲ್ಲಿ ಇತ್ತೀಚೆಗೆ ಅಡಿಕೆ ಪ್ರಮಾಣ ಹೆಚ್ಚುತ್ತಿದ್ದು ಅಡಿಕೆ ಬೆಳೆ ಮುಂದಿನ ದಿನದಲ್ಲಿ ಕಷ್ಟಕರವಾಗುವ ಸಾಧ್ಯತೆ ಇದೆ, ಇನ್ನೂ ಪ್ರಧಾನಿ ಮೋದಿಯವರು ರೈತರ ಹಿತ ಕಾಪಾಡಲು ರೈತನ ಮನೆ ಬಾಗಿಲಿಗೆ ಬೆಳೆದ ಬೆಳೆಗಳನ್ನು ಸರಕಾರವೇ ತೆಗೆದುಕೊಂಡು ಹೋಗುವ ಯೋಜನೆ ಮಾಡಿದ್ದಾರೆ, ಆದರೆ ಅದನ್ನು ಕೆಲವರು ವಿರೋಧ ಮಾಡುತ್ತಿದ್ದಾರೆ, ಇದು ಒಳ್ಳೆಯದಲ್ಲ, ಮಧ್ಯವರ್ತಿಗಳ ಹಾವಳಿ ತಪ್ಪಬೇಕು, ಸರ್ಕಾರವೇ ನೇರವಾಗಿ ಕೊಂಡುಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಪ್‌ ಕಾಮ್ಸೌ ಅಧ್ಯಕ್ಷ ವಿಜಯ್ ಕುಮಾರ್‌, ತೋಟಗಾರಿಕಾ ನಿರ್ದೇಶಕ ರಘು, ಮಾಜಿ ತಾಲೂಕು ಪಂಚಾಯತ್‌ ಸದಸ್ಯ ಚಂದ್ರಶೇಖರ್‌ ಬಾಬು, ತಾಲೂಕು ತೋಟಗಾರಿಕೆ ಸಹ ನಿರ್ದೇಶಕ ರಾಜಪ್ಪ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!