ವಡವೆ, ಮೇಕೆಗಳ ಕಳವು

280

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಅಮೃತೂರು ಪೊಲೀಸ್‌ ಠಾಣೆ ವ್ಯಾಪ್ತಿಯ ದೊಡ್ಡ ಮಧುರೆ ಗ್ರಾಮದಲ್ಲಿ ಕುರಿ ಮೇಕೆ ಕಳ್ಳತನ ಮಾಡಲು ಬಂದಿದ್ದ ದುಷ್ಕರ್ಮಿಗಳು ಮಹಿಳೆಯೊಬ್ಬರ ಮಾಂಗಲ್ಯ ಸರ ಅಪಹರಿಸಿ ಬೇರೆಡೆ ಮೂರು ಮೇಕೆಗಳನ್ನು ಕಳವು ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ದೊಡ್ಡಮಧುರೆ ಗ್ರಾಮದಲ್ಲಿ ಭಾನುವಾರ ರಾತ್ರಿ ಗ್ರಾಮದ ಹಲವಾರು ಕೊಟ್ಟಿಗೆಗೆ ನುಗ್ಗಿರುವ ಕಳ್ಳರು ಕುರಿ ಮೇಕೆ ಸಿಗದೆ ಇದ್ದ ಕಾರಣ ಕೊಟ್ಟಿಗೆ ಸಮೀಪದಲ್ಲಿ ಮಲಗಿದ್ದ ಇಂದಿರಮ್ಮ ಎಂಬಾಕೆಯ 40 ಗ್ರಾಮ ಚಿನ್ನದ ವಡವೆ ಕಳುವು ಮಾಡಿ, ನಂತರ ಸಮೀಪದಲ್ಲೆ ಇದ್ದ ಪರಶುರಾಮ್‌ ಎಂಬುವರಿಗೆ ಸೇರಿದ ಮೂರು ಮೇಕೆ ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

Get real time updates directly on you device, subscribe now.

Comments are closed.

error: Content is protected !!