ಮಳೆಗೆ ಮನೆ ಜಖಂ- ಹಲವರಿಗೆ ಗಾಯ

333

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಕೊತ್ತಗೆರೆ ಹೋಬಳಿಯ ಕುರಿಬೋರಯ್ಯನ ಪಾಳ್ಯದಲ್ಲಿ ಮಳೆಯಿಂದ ಮನೆ ಜಖಂಗೊಂಡು ಮನೆಯಲ್ಲಿದ್ದ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕುರಿಬೋರಯ್ಯನಪಾಳ್ಯದ ಹನುಮಂತಯ್ಯನವರಿಗೆ ಸೇರಿದ ಮನೆಯ ಸೀಮೆಂಟ್‌ ಶೀಟಿನ ಮೇಲ್ಚಾವಣಿ ಕುಸಿದ ಪರಿಣಾಮ ಮಕ್ಕಳಾದ ಆದ್ಯಶ್ರೀ (5) ಮತ್ತು ಅಕ್ಷಯ (7) ವರ್ಷ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸಮೀಪದ ಹೆಬ್ಬೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ತಹಶೀಲ್ದಾರ್‌ ಮಹಾಬಲೇಶ್ವರ್‌ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರದ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!