105 ಕೆರೆಗಳಿಗೆ ಎತ್ತಿನಹೊಳೆ ನೀರು: ಪರಮೇಶ್ವರ್

559

Get real time updates directly on you device, subscribe now.

ಕೊರಟಗೆರೆ: ಬಯಲುಸೀಮೆ ಪ್ರದೇಶದ ಜಿಲ್ಲೆಗಳ ರೈತಾಪಿವರ್ಗಕ್ಕೆ 28 ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆ ಸಹಕಾರಿ ಆಗಿದೆ. ಕೊರಟಗೆರೆ ಕ್ಷೇತ್ರದ 105 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ರೈತಾಪಿ ವರ್ಗಕ್ಕೆ ಅಂಕಿ ಅಂಶದ ಮಾಹಿತಿ ನೀಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹೊಳವನಹಳ್ಳಿ, ಕೋರಾ, ಕೋಳಾಲ ಮತ್ತು ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಬೆಂಡೋಣಿಯ ವಿಎಸ್‌ಎಸ್‌ಎನ್‌ ಕಟ್ಟಡದ ಉದ್ಘಾಟನೆ ಮತ್ತು 3 ಕೋಟಿ 50 ಲಕ್ಷ ವೆಚ್ಚದ ವಿವಿಧ ನೀರಾವರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸಹಕಾರಿ ರತ್ನ ಕೆ.ಎನ್‌.ರಾಜಣ್ಣ ನೇತೃತ್ವದ ಕಲ್ಪತರು ನಾಡಿನ ಡಿಸಿಸಿ ಬ್ಯಾಂಕ್‌ 2 ಸಾವಿರ ಕೋಟಿ ಲಾಭದಲ್ಲಿದೆ. ರೈತಾಪಿ ವರ್ಗ ಮತ್ತು ಬಡಜನತೆಯ ಪರವಾದ ಯೋಜನೆಗಳನ್ನು ರೂಪಿಸಿರುವ ತುಮಕೂರಿನ ಡಿಸಿಸಿ ಬ್ಯಾಂಕ್‌ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿ ರಾಷ್ಟ್ರ ಮನ್ನಣೆ ಗಳಿಸಿದೆ. ಕೊರಟಗೆರೆ ಕ್ಷೇತ್ರದಲ್ಲಿನ 18 ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಅನುಕೂಲಕರ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂದು ಸಂತಷ ವ್ಯಕ್ತಪಡಿಸಿದರು.
ಕೊರಟಗೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರಕೆರೆಶಂಕರ್‌ ಮಾತನಾಡಿ, ಕೊರಟಗೆರೆ ಕ್ಷೇತ್ರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ವಸತಿಶಾಲೆ, ರಸ್ತೆ ಅಭಿವೃದ್ಧಿ ಮತ್ತು ಚೆಕ್‌ ಡ್ಯಾಂಗಳ ನಿರ್ಮಾಣ ಆಗಿವೆ. ಸಮಗ್ರ ಅಭಿವೃದ್ಧಿಯ ವಿಚಾರದಲ್ಲಿ ಕೊರಟಗೆರೆ ಕ್ಷೇತ್ರ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಆಗಲಿದೆ. ಜನಪ್ರಿಯ ಶಾಸಕ ಡಾ.ಜಿ.ಪರಮೇಶ್ವರ್‌ ಕೊರಟಗೆರೆ ಕ್ಷೇತ್ರಕ್ಕೆ ಶಾಶ್ವತ ಅಭಿವೃದ್ಧಿ ಯೋಜನೆ ತರುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ಮಾಹಿತಿ ನೀಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹಿರೇತೊಟ್ಲುಕೆರೆ ಕೆರೆ ಅಭಿವೃದ್ಧಿಗೆ 20 ಲಕ್ಷ, ಓಬನಹಳ್ಳಿ ಅರಣ್ಯದಲ್ಲಿ ಚೆಕ್‌ ಡ್ಯಾಂಗೆ 50 ಲಕ್ಷ, ಬೆಂಡೋಣಿ ವಿಎಸ್‌ಎಸ್‌ಎನ್‌ ಕಟ್ಟಡ ಉದ್ಘಾಟನೆ, ಹೊಳವನಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ 60 ಲಕ್ಷ, ಅಳಾಲಸಂದ್ರ ಚೆಕ್‌ ಡ್ಯಾಂಗೆ 50 ಲಕ್ಷ ಮತ್ತು ಕೋಳಾಲದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ 60 ಲಕ್ಷ, ಚೆಕ್‌ ಡ್ಯಾಂಗೆ 70 ಲಕ್ಷ ಸೇರಿ ಒಟ್ಟು 3 ಕೋಟಿ, 50 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಡಾ.ಜಿ.ಪರಮೇಶ್ವರ್‌ ನೆರವೆರಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಉಪನಿರ್ದೇಶಕಿ ದೀಪಾಶ್ರೀ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹನುಮಾನ್‌, ಕೆಪಿಸಿಸಿ ಕಾರ್ಯದರ್ಶಿ ದಿನೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರಕೆರೆ ಶಂಕರ್‌, ಅಶ್ವತ್ಥನಾರಾಯಣ, ಜಯಮ್ಮ, ತಾಪಂ ಮಾಜಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಡಿಸಿಸಿ ಬ್ಯಾಂಕ್‌ ಮೇಲ್ವಿಚಾರಕ ಬೋರಣ್ಣ, ಬೆಂಡೋಣಿ ಅಧ್ಯಕ್ಷ ಶಿವಲಿಂಗಯ್ಯ, ಕೃಷಿ ಇಲಾಖೆ ನಿರ್ದೇಶಕ ನಾಗರಾಜು, ಜಿಪಂ ಎಇಇ ಮಂಜುನಾಥ, ಸಣ್ಣ ನೀರಾವರಿ ಎಇಇ ರಮೇಶ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!