ಎಚ್ ಎ ಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಿ: ಪರಂ

254

Get real time updates directly on you device, subscribe now.

ಗುಬ್ಬಿ: ಎಚ್ ಎ ಎಲ್‌ ಘಟಕದಲ್ಲಿ ಬಹುತೇಕ ಎಲ್ಲಾ ಕಾಮಗಾರಿ ಮುಗಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು ನಮ್ಮ ಜಿಲ್ಲೆಯಲ್ಲಿ ಘಟಕ ನಿರ್ಮಾಣವಾಗಿರುವುದರಿಂದ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಬಿದರೆಹಳ್ಳ ಕಾವಲ್ ನಲ್ಲಿ ನಿರ್ಮಾಣವಾಗುತ್ತಿರುವ ಎಚ್ ಎ ಎಲ್‌ ಘಟಕಕ್ಕೆ ಕಾಂಗ್ರೆಸ್‌ ಮುಖಂಡರ ತಂಡ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾವಗಾರಿ ವೀಕ್ಷಣೆ ಮತ್ತು ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಒತ್ತಾಯ ಮಾಡಿ ಮಾತನಾಡಿ, ಮುಂದಿನ ವರ್ಷದ ಜೂನ್‌, ಜುಲೈ ವೇಳೆಗೆ ನರೇಂದ್ರ ಮೋದಿಯವರೇ ಎಚ್ ಎ ಎಲ್‌ ಘಟಕಕ್ಕೆ ಭೇಟಿ ನೀಡಿ ಘಟಕ ಉದ್ಘಾಟನೆ ಮಾಡಲಿದ್ದಾರೆ ಮತ್ತು ಮೊದಲ ಹೆಲಿಕಾಪ್ಟರ್‌ ಇಲ್ಲಿಂದ ಹಾರಾಟ ಮಾಡುವ ಭರವಸೆಯನ್ನು ಎಚ್ ಎ ಎಲ್‌ ಅಧಿಕಾರಿಗಳು ನೀಡಿದ್ದಾರೆ ಎಂದರು.
5 ವರ್ಷದ ಹಿಂದೆ ಪ್ರಧಾನ ಮಂತ್ರಿ ಮೋದಿಯವರು ಎಚ್ ಎ ಎಲ್‌ ಘಟಕಕ್ಕೆ ಭೂಮಿ ಪೂಜೆ ಮಾಡಿದ್ದರು, ಈಗಾಗಲೇ 5 ವರ್ಷ ಕಳೆದರು ಉದ್ಘಾಟನೆಯಾಗಿಲ್ಲ, ಹಾಗಾಗಿ ಇದರ ಬಗ್ಗೆ ಮಾಹಿತಿ ಪಡೆದಿದ್ದು 2022 ಜೂನ್‌ ವೇಳೆಗೆ ಉದ್ಘಾಟನೆಯ ಭರವಸೆ ಸಿಕ್ಕಿದೆ. ಬಹುತೇಕ ಎಲ್ಲಾ ಕಾಮಗಾರಿ ಘಟಕದಲ್ಲಿ ಮುಗಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು ನಮ್ಮ ಜಿಲ್ಲೆಯಲ್ಲಿ ಘಟಕ ನಿರ್ಮಾಣವಾಗಿರುವುದರಿಂದ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದರು.
ಈ ಜಿಲ್ಲೆಯ ನಿರುದ್ಯೋಗಿಗಳು, ತಾಂತ್ರಿಕ, ಐಟಿಐ, ಡಿಪ್ಲೋಮಾ ಇನ್ನಿತರೆ ಪದವಿ ಪಡೆದವರಿಗೆ ಹೆಚ್ಚು ಕೆಲಸ ಇಲ್ಲಿ ಪಡೆಯಬಹುದಾಗಿದ್ದು, ವಿದ್ಯಾರ್ಥಿಗಳು ಉದ್ಯೋಗ ವಿನಿಮಯ ಕೇಂದ್ರದಲ್ಲಿ ತಮ್ಮ ನೋಂದವಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಘಟಕಕ್ಕೆ ಇನ್ನೂ 500 ಎಕರೆಯಷ್ಟು ಜಾಗದ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದು, ಮುಂದಿನ ದಿನದಲ್ಲಿ ಇದೇ ಜಾಗದಲ್ಲಿ ಏರ್‌ ಕ್ರಾಪ್ಟ್ ಕೂಡ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ನಮ್ಮ ಮುಂದಿನ ಸಭೆಯು ಬೆಂಗಳೂರಿನ ಎಚ್ ಎ ಎಲ್‌ ಕೇಂದ್ರದಲ್ಲಿ ಉನ್ನತ ಅಧಿಕಾರಿಗಳ ಜೊತೆ ಮಾತುಕತೆ ಮಾಡಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಹಾಗೂ ಈ ಭಾಗದ ಅಭಿವೃದ್ಧಿ ವಿಚಾರದ ಬಗ್ಗೆ ಮಾತುಕತೆ ಮಾಡಲಾಗುತ್ತದೆ ಎಂದು ತಿಳಿಸಿದರು.
ರಾಜಕೀಯವಾಗಿ ರಾಜ್ಯದಲ್ಲಿ ಸಾಕಷ್ಟು ಶಾಸಕರು, ಕಾರ್ಯಕರ್ತರು ಬಿಜೆಪಿ, ಜೆಡಿಎಸ್‌ ಪಕ್ಷವನ್ನು ಬಿಟ್ಟು ನಮ್ಮ ಪಕ್ಷಕ್ಕೆ ಬರುವುದು ಖಚಿತವಾಗಿದೆ, ತುಮಕೂರು ಜಿಲ್ಲೆಯಲ್ಲಿಯು ಸಾಕಷ್ಟು ಶಾಸಕರು ಬರುತ್ತಾರೆ, ಆದರೆ ಈಗ ಯಾರು ಬರುತ್ತಾರೆ ಯಾರ ಹೆಸರನ್ನು ಸಹ ನಾವು ಹೇಳುವುದಿಲ್ಲ, ನಮ್ಮೆಲ್ಲ ಕಮಿಟಿಯಲ್ಲಿ ಇದರ ಬಗ್ಗೆ ಚರ್ಚೆ ನಡೆದ ನಂತರ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದರು.
ಬಿಜೆಪಿ ಸರಕಾರದ ದುರಾಡಳಿತವನ್ನು ಜನ ಸಾಮಾನ್ಯರು ಅನುಭವಿಸಿದ್ದಾರೆ, ಹಾಗಾಗಿ ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಣಿಗಲ್‌ ಶಾಸಕ ಡಾ.ರಂಗನಾಥ್‌, ಪಾವಗಡ ಶಾಸಕ ವೆಂಕಟರಮಣಪ್ಪ, ಎಂಎಲ್‌ಸಿ ಕಾಂತರಾಜು, ಮಾಜಿ ಶಾಸಕರಾದ ಷಡಕ್ಷರಿ, ಷಫಿಅಹ್ಮದ್‌, ಮುಖಂಡ ಮುರುಳಿಧರ್‌ ಹಾಲಪ್ಪ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಮಕೃಷ್ಣ, ತಾಲ್ಲೂಕು ಕಾಂಗ್ರೆಸ್‌ ಅಧ್ಯಕ್ಷ ನರಸಿಂಹಯ್ಯ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಸಿದ್ದರಾಮಯ್ಯ, ತಾಲೂಕು ಮುಖಂಡರಾದ ಶ್ರೀನಿವಾಸ್ ವೀರಣ್ಣ ಗೌಡ, ದಿನೇಶ್‌, ಶಿವಕುಮಾರ್‌, ಭರತ್ ಗೌಡ, ಮಂಜುನಾಥ್‌, ನಾರಾಯಣ್‌, ಪುಟ್ಟಲಿಂಗಯ್ಯ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!