ಮಳೆ ಅಬ್ಬರ- ರಸ್ತೆಗಳೆಲ್ಲಾ ಜಲಾವೃತ

393

Get real time updates directly on you device, subscribe now.

ಕುಣಿಗಲ್: ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಪಟ್ಟಣದ 18ನೇ ವಾರ್ಡ್ ನ ಹೌಸಿಂಗ್ ಬೋರ್ಡ್ ಪ್ರದೇಶದ ವಿವಿಧ ಬೀದಿ ಜಲಾವೃತವಾಯಿತು.
ಕಳೆದ ಕೆಲ ದಿನಗಳಿಂದಲೂ ನಿರಂತರ ಮಳೆ ಬಿಟ್ಟು ಬಿಟ್ಟು ಬರುತ್ತಿದ್ದು, ಬುಧವಾರ ಸಂಜೆ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಕೆರೆ ಪ್ರದೇಶಕ್ಕೆ ಮಳೆ ನೀರು ಸೇರದಂತೆ ನಿರ್ಮಿಸಲಾಗಿರುವ ಮುಖ್ಯ ಚರಂಡಿಯನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವಲ್ಲಿ ಪುರಸಭೆ ನಿರ್ಲಕ್ಷ್ಯ ವಹಿಸಿದೆ ಕೆಳಭಾಗದ ಮನೆಗಳು ಸೇರಿದಂತೆ ರಸ್ತೆಗಳು ಜಲಾವೃತವಾಗಲು ಕಾರಣ ಎಂದು ಪುರಸಭೆ ಸದಸ್ಯ ಶ್ರೀನಿವಾಸ ಆರೋಪಿಸಿದ್ದು, ಈಗಾಗಲೇ ಪುರಸಭೆ ಅಧಿಕಾರಿಗಳಿಗೆ ಚರಂಡಿ ಸ್ವಚ್ಛಗೊಳಿಸುವ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮವಹಿಸಿಲ್ಲ, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ವಹಿಸಬೇಕೆಂದಿದ್ದಾರೆ. ಬುಧವಾರ ಬೆಳಗಿನಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಹಬ್ಬಾಚರಣೆಗೆ ಅಡಚಣೆಯಾಗಿದ್ದು ಬೀದಿ ಬದಿ ವ್ಯಾಪಾರಿಗಳು ಪರದಾಡುವಂತಾಗಿದೆ.

Get real time updates directly on you device, subscribe now.

Comments are closed.

error: Content is protected !!