ಅಪಘಾತ ತಪ್ಪಿಸಲು ರಸ್ತೆ ಗುಂಡಿ ಮುಚ್ಚಿ.. ರಫಿಕ್

175

Get real time updates directly on you device, subscribe now.


ತುಮಕೂರು: ನಗರದ ಬಹುತೇಕ ಪ್ರದೇಶದ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು, ಕೆಸರುಗದ್ದೆಯಂತಾಗಿರುವ ಈ ರಸ್ತೆಗುಂಡಿಗಳು ಬಲಿಗಾಗಿ ಕಾಯ್ದು ಕುಳಿತಿರುವ ಮೃತ್ಯುಕೂಪದಂತಿವೆ, ರಸ್ತೆಗಳ ಮಧ್ಯೆ ಗುಂಡಿಗಳಿವೆಯೋ ಅಥವಾ ಗುಂಡಿಗಳ ಮಧ್ಯೆ ರಸ್ತೆಗಳಿವೆಯೋ ಎನ್ನುವ ಸ್ಥಿತಿಯಲ್ಲಿದೆ, ಆದರೂ ಕೂಡ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿಲ್ಲ. ಈ ಗುಂಡಿಗಳು ಸ್ಮಾರ್ಟ್ ಸಿಟಿ ತುಮಕೂರು ಎಂಬ ಹೆಸರನ್ನೇ ಅಣಕಿಸುವಂತಿವೆ ಎಂದು ಡಾ.ರಫಿಕ್ ಅಹ್ಮದ್ ತಿಳಿಸಿದ್ದಾರೆ.
ದಿನಬೆಳಗಾದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದೇ ರಸ್ತೆಗಳಲ್ಲಿ ಸಂಚರಿಸುತ್ತಾರೆ, ಆದರೆ ಈ ವೇಳೆ ಇವರೆಲ್ಲಾ ಕಣ್ಣುಮುಚ್ಚಿ, ಓಡಾಡುತ್ತಾರೆಯೇ, ಪ್ರಯಾಣಿಕರ ಪಾಡು ಇವರಿಗೆ ಕಾಣುತ್ತಿಲ್ಲವೇ ಎಂದು ಮಾಜಿ ಶಾಸಕರು ಪ್ರಶ್ನಿಸಿದ್ದಾರೆ.
ನಗರದ ಹಲವೆಡೆ ರಸ್ತೆಗಳಲ್ಲಿರುವ ಗುಂಡಿಗಳ ಸಾಕ್ಷ್ಯಚಿತ್ರ ಸಂಗ್ರಹಿಸಿರುವ ಡಾ.ರಫಿಕ್ಅಹ್ಮದ್ರವರು ಪತ್ರಿಕೆಗೆ ನೀಡಿ ಈ ಮೂಲಕವಾದರು ಅಧಿಕಾರಿಗಳ ಕಣ್ತೆರೆಯುವಂತಾಗಲಿ ಎಂದು ಒತ್ತಾಯಿಸಿದ್ದಾರೆ.
ಈಗ ಮಳೆಗಾಲವಾದ್ದರಿಂದ ರಸ್ತೆಗಳ ಮೇಲೆ ನೀರು ನಿಂತು ಗುಂಡಿಗಳು ಕಾಣದೆ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ. ರಸ್ತೆ ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಪ್ರಾಣ ಹಾನಿಯಾಗುವ ಸಂಭವವೇ ಹೆಚ್ಚು. ರಸ್ತೆ ಅಪಘಾತವಾಗುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಡಲೇ ರಸ್ತೆಗಳ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಮಾಡುವಂತೆ ಡಾ.ರಫಿಕ್ ಅಹ್ಮದ್ ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!