ಹುಳಿಯಾರು: ಚಿಕ್ಕನಾಯನಕನಹಳ್ಳಿ ತಾಲೂಕಿನ ಅಂತರ್ಜಲ 1000 ಅಡಿಗೆ ಕುಸಿದಿದೆ. 1000 ಅಡಿ ಕೊರೆದರೂ ನೀರು ಸಿಗುವುದೇ ಕಷ್ಟ ಎನ್ನುವಂತಾಗಿದೆ. ಆದರೆ ಇಲ್ಲೊಂದು ಕೊಳವೆ ಬಾವಿಯಲ್ಲಿ ಮಳೆಗಾಲ ಬದರೆ ಸಾಕು ನೀರು ಉಕ್ಕಿ ಹರಿಯುತ್ತದೆ.
ಅಚ್ಚರಿಯಾದರೂ ಇದು ಸತ್ಯ, ಹುಳಿಯಾರು ಹೋಬಳಿಯ ಬೈರಾಪುರ ಗೊಲ್ಲರಹಟ್ಟಿಯ ಬಾಲರಾಜು ಅವರ ಕೊಳವೆಬಾವಿ ಈ ಅಚ್ಚರಿಯ ಕೇಂದ್ರವಾಗಿದೆ. ಇವರು ಕೊಳವೆಬಾವಿ ಕೊರೆಸಿದ ಮೂರ್ನಾಲ್ಕು ವರ್ಷಗಳಿಂದಲೂ ಈ ಅಚ್ಚರಿ ನಡೆಯುತ್ತಿದೆ.
ಕೊಳವೆಬಾವಿ ಕೊರೆಸಿದಾಗ 15 ಅಡಿಗೆ ನೀರು ಸಿಕ್ಕಿತ್ತು, ಆದರೂ ಕೊರೆಯುವಂತೆ ತಿಳಿಸಿದ ಮೇರೆಗೆ ಕೊರೆದಾಗ 13 ಕಡೆ ಜಲ ಕಿಂಡಿ ಸಿಕ್ಕಿ ನೀರು ಹೆಚ್ಚುತ್ತಲೇ ಹೋಯಿತು, 360 ಅಡಿಗಳಷ್ಟು ಆಳಕ್ಕೆ ಕೊರೆಯುವಷ್ಟರಲ್ಲಿ ಕೊರೆಯಲಾಗದಂತೆ ನೀರು ಚಿಮ್ಮಿದ ಪರಿಣಾಮ ಸ್ಥಗಿತಗೊಳಿಸಲಾಗಿತ್ತು ಎನ್ನುತ್ತಾರೆ ಬಾಲರಾಜು.
ಬೇಸಿಗೆ ಕಾಲದಲ್ಲಷ್ಟೆ ಇವರು ಮೋಟರ್ ಮೂಲಕ ನೀರು ಹೊರ ತೆಗೆಯುತ್ತಾರೆ. ಉಳಿದಂತೆ ಮಳೆಗಾಲದಲ್ಲಿ ಬರೋಬ್ಬರಿ 3 ತಿಂಗಳು ಮೋಟರ್ ಅವಶ್ಯಕತೆಯಿಲ್ಲದೆ ನೀರು ಉಕ್ಕಿಹರಿಯುತ್ತಿರುತ್ತದೆ. 1200 ಅಡಿಕೆ ಹಾಗೂ 300 ತೆಂಗು ಬೆಳೆಸಿರುವ ಇವರು ಹಾಗಲಕಾಯಿ, ಈರೆಕಾಯಿ ಸೇರಿದಂತೆ ಕಾಯಿಪಲ್ಯವನ್ನೂ ಬೆಳೆಯುತ್ತಿದ್ದಾರೆ.
ಕೊಳವೆ ಬಾವಿಯಲ್ಲಿ ಉಕ್ಕುತ್ತಿದೆ ಜೀವಜಲ
Get real time updates directly on you device, subscribe now.
Prev Post
Comments are closed.