ಜಿಲ್ಲಾಧಿಕಾರಿಗಳೇ ನಮಗೆ ಮದುವೆ ಮಾಡಿಸಿ ಫ್ಲೀಸ್

ಅರ್ಜಿ ವಿಚಾರ ತಮಾಷೆಯಾದ್ರೂ ಗಂಭೀರ ಸಮಸ್ಯೆ!

1,005

Get real time updates directly on you device, subscribe now.


ಚೇತನ್
ಚಿಕ್ಕನಾಯಕನಹಳ್ಳಿ:
ತಾಲೂಕಿನ ಲಕ್ಮಗೊಂಡನಹಳ್ಳಿ ಗ್ರಾಪಂನಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮದುವೆಯಾಗಲು ಹೆಣ್ಣು ಸಿಗದಂತಾಗಿದೆ, ದೇಶದ ಬೆನ್ನೆಲುಬು ರೈತ ಎಂದು ಬಾಯಿ ಮಾತಿಗೆ ಹೇಳಿದರೆ ಸಾಲದು ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ ಸರ್ಕಾರದ ಮಟ್ಟದಲ್ಲಿ ಇದರ ಬಗ್ಗೆ ಚರ್ಚೆಯಾಗಿ ಒಂದು ಕಾರ್ಯಕ್ರಮ ರೂಪಿಸಬೇಕು ಎಂದು ಯುವಕರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ತಾಲೂಕಿನ ಲಕ್ಮಕೊಂಡನಹಳ್ಳಿ ನಡೆದ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ಇವುಗಳಲ್ಲಿ ಯುವಕರ ಅರ್ಜಿ ಎಲ್ಲಾರ ಗಮನ ಸೆಳೆಯಿತು. ಈ ಅರ್ಜಿಯಲ್ಲಿ ಮೊದಲ ಅಕ್ಷರಗಳೇ ಅವಿವಾಹಿತರಿಗೆ ವಿವಾಹ ಮಾಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಲಕ್ಮಗೊಂಡನಹಳ್ಳಿ ಆಜುಬಾಜು ಯುವಕರ ಭಿನ್ನಹವಾಗಿದೆ. ಲಕ್ಮಗೊಂಡನಹಳ್ಳಿ ಹಾಗೂ ತಿಮ್ಮಾಲಪುರ ಗ್ರಾಮದಲ್ಲಿನ ರೈತಾಪಿ ವರ್ಗದ ಗಂಡು ಮಕ್ಕಳಿಗೆ ಮದುವೆ ಆಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ, ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಯುವರೈತರನ್ನು ಮದುವೆಯಾಗಲು ಒಪ್ಪುತ್ತಿಲ್ಲ ಆದರಿಂದ ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಬಗೆಹರಿಸಬೇಕು ಎಂಬುವುದು ಯುವಕರ ಮನವಿ ಮನವಿಯಾಗಿತ್ತು.

ಗಂಭೀರ ಸಮಸ್ಯೆ!: ಯುವಕರ ಅರ್ಜಿ ಕೆಲವರಿಗೆ ತಮಾಷೆಯಾಗಿ ಕಂಡರೂ ಸಹ ಇದು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ, ಸರ್ಕಾರ ಯುವಕರು ಹೆಚ್ಚು ಕೃಷಿಯಲ್ಲಿ ತೊಡಗಿಕೊಳ್ಳಬೇಕು, ಸ್ವಯಂ ಉದ್ಯೋಗದಲ್ಲಿ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಹಲವಾರು ಯೋಜನೆಗಳನ್ನು ರೂಪಿಸುತ್ತದೆ ಆದರೇ ಯುವಕರು ಜೀವನ ಕಟ್ಟಿಕೊಳ್ಳಲು ದಿನನಿತ್ಯ ಶ್ರಮ ಹಾಕುತ್ತಾರೆ. ಆದರೇ ಯುವ ರೈತರಿಂದ ತಾಳಿ ಕಟ್ಟಿಸಿಕೊಳ್ಳಲು ಇಂದಿನ ಬಹುತೇಕ ಯುವತಿಯರು ಮನಸ್ಸು ಮಾಡುವುದಿಲ್ಲ. ಇದು ಯುವತಿಯರ ತಪ್ಪಲ್ಲ, ಕೃಷಿ ಪ್ರಧಾನ ದೇಶದಲ್ಲಿ ಕೃಷಿಕರಿಗೆ ಬೆಲೆ ಇಲ್ಲದಂತಾಗಿದ್ದು ಹಾಗೂ ಜೀವನಕ್ಕೆ ಭದ್ರತೆ ಸಿಗದಂತಾಗಿರುವುದು, ಹಳ್ಳಿಗಳಲ್ಲಿ ಯುವ ರೈತರಿಗೆ 30 ರಿಂದ 35 ವರ್ಷ ಕಳೆದರು ಸಹ ಮದುವೆಯಾಗುವುದು ಮರೀಚಿಕೆಯಾಗಿದೆ. ದಿನನಿತ್ಯ ತೋಟ, ಹೊಲಗಳಲ್ಲಿ ದುಡಿಯುವ ಯುವಕರಿಗೆ ನೆಮ್ಮದಿ ಇಲ್ಲದಂತಾಗಿದೆ. ಈ ಸಮಸ್ಯೆ ಎಲ್ಲಾ ರೈತ ಕುಟುಂಬಗಳಲ್ಲಿ ಇದ್ದು ಕೆಲವರು ತಮ್ಮ ಸಮಸ್ಯೆಯನ್ನು ನೇರವಾಗಿ ವ್ಯಕ್ತಪಡಿಸುತ್ತಾರೆ ಇನ್ನೂ ಕೆಲವರು ಸುಮ್ಮನಾಗುತ್ತಾರೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಯುವ ರೈತರನ್ನು ಮದುವೆಯಾದರೆ ಪ್ರೋತ್ಸಹ ಧನ ನೀಡಬೇಕು ಇಲ್ಲವಾದರೆ ಅವರು ಬೆಳೆಯುವ ಬೆಳೆಗೆ ನಿಗದಿತ ಬೆಲೆ ಸಿಗುವಂತೆ ಮಾಡಬೇಕು ಹಾಗೂ ರೈತ ಕುಟುಂಬಕ್ಕೆ ಅರ್ಥಿಕ ಭದ್ರತೆ ಸಿಗುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಇಲ್ಲವಾದರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಸರ್ಕಾರವೇ ಪರೋಕ್ಷವಾಗಿ ಬೆಂಬಲ ಸೂಚಿಸುವಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Get real time updates directly on you device, subscribe now.

Comments are closed.

error: Content is protected !!