ಬಿಜೆಪಿ ದೇಶವನ್ನು ಮಾರುವ ಸ್ಥಿತಿಗೆ ತಂದಿದೆ: ಎಂಟಿಕೆ

ಮಸಾಲ ಜಯರಾಂ ಪರ್ಸಂಟೇಜ್‌ ಗಿರಾಕಿ

150

Get real time updates directly on you device, subscribe now.

ಗುಬ್ಬಿ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರನ್ನು ಕಡು ಬಡತನಕ್ಕೆ ನೂಕುವಂತಹ ಕೆಲಸ ಮಾಡುತ್ತಿವೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.
ಗುಬ್ಬಿ ತಾಲೂಕಿನ ಸಿ.ಎಸ್‌.ಪುರ ಗ್ರಾಮದ ಸರ್ಕಲ್ ನಲ್ಲಿ ಎತ್ತಿನಗಾಡಿ ಮೂಲಕ ಮೆರವಣಿಗೆಯಲ್ಲಿ ಆಗಮಿಸಿ ಪ್ರತಿಭಟನೆ ಮಾಡಿ ಮಾತನಾಡಿ, ಅಚ್ಚೇ ದಿನ್‌ ಎಂದು ಹೇಳುತ್ತಲೇ ಇಡೀ ದೇಶವನ್ನೇ ಮಾರುವ ಸ್ಥಿತಿಗೆ ಬಿಜೆಪಿ ಸರ್ಕಾರ ತಂದು ಬಿಟ್ಟಿದೆ. ಹದಿನೈದು ಲಕ್ಷ ಹಣ ಕೊಡುತ್ತೇನೆ ಎಂದು ಬೆಳಗ್ಗೆ ಹೇಳಿದವರು ಹದಿನೈದು ಪೈಸೆ ಕೂಡ ಹಣ ಹಾಕಿಲ್ಲ, ಲಕ್ಷಾಂತರ ಉದ್ಯೋಗ ಕೊಡುತ್ತೇನೆ ಎಂದು ಹೇಳಿದವರು ಉದ್ಯೋಗವನ್ನು ಯುವಕರಿಂದ ಕಸಿದುಕೊಂಡಿದ್ದಾರೆ, ಪ್ರತಿನಿತ್ಯ ಜನರು ಊಟ ಮಾಡುವ ಪದಾರ್ಥಗಳ ಮೇಲೆ ದುಬಾರಿ ದರ ವಿಧಿಸುವ ಮೂಲಕ ಜನಸಾಮಾನ್ಯರು ಬದುಕುವುದೇ ದುಸ್ತರ ಮಾಡಿಬಿಟ್ಟಿದೆ ಎಂದು ಕಿಡಿಕಾರಿದರು.
ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ, ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಧಿಸುತ್ತಿರುವ ಟ್ಯಾಕ್ಸ್ ನಿಂದಲೇ ಪೆಟ್ರೋಲ್‌, ಡೀಸೆಲ್‌ ಹಾಗೂ ಗ್ಯಾಸ್‌ ದರ ದುಪ್ಪಟ್ಟಾಗಿದ್ದು ಕೂಲಿ ಮಾಡಿಕೊಂಡು ತಿನ್ನುತ್ತಿರುವವರ ಸ್ಥಿತಿ ಅಧೋಗತಿಗೆ ಇಳಿದಿದೆ, ಇಂತಹ ಸರ್ಕಾರವನ್ನು ಮುಂದೆ ಯಾವತ್ತೂ ಜನರು ಜಾರಿಗೆ ತರಬಾರದು, ಪ್ರಾದೇಶಿಕ ಪಕ್ಷಕ್ಕೆ ಜೀವ ನೀಡಿದಾಗ ಮಾತ್ರ ಜನರ, ರೈತರ ಸಮಸ್ಯೆ ಅರ್ಥ ಆಗುತ್ತದೆ ಮತ್ತು ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿದಂತಹ ಧೈರ್ಯ ಜೆಡಿಎಸ್‌ ಪಕ್ಷದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಮಾತ್ರ ಇತ್ತೆ ಹೊರತು ಯಾವುದೇ ಬಿಜೆಪಿ ಅಥವಾ ಕಾಂಗ್ರೆಸ್‌ ಸರ್ಕಾರಕ್ಕೆ ಇರಲಿಲ್ಲ ಎಂದು ತಿಳಿಸಿದರು.
ನಾನು ಸೋತಿರುವುದು ಸಿ.ಎಸ್‌.ಪುರ ಭಾಗದಲ್ಲಿ ಅಲ್ಲ. ದಂಡಿನಶಿವರ ಭಾಗದ ಜನರು ನನಗೆ ಒಂದಷ್ಟು ಕಡಿಮೆ ಮಟ್ಟದ ಮತಗಳನ್ನು ನೀಡಿದ್ದರಿಂದ ನಾನು ಸೋತಿದ್ದೇನೆ ಹೊರತು ಕಾರ್ಯಕರ್ತರು ಎಂದೂ ಸೋತಿಲ್ಲ, ನೀವು ಸೋಲುವುದು ಇಲ್ಲ, ಮುಂದಿನ ದಿನದಲ್ಲಿ ಮತ್ತೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ, ರೈತರ ಪರ ಸರ್ಕಾರ ಕೊಡಲು ನಾವು ಬದ್ಧವಾಗಿದ್ದೇವೆ,
ಇನ್ನೂ ಈ ಭಾಗದ ಶಾಸಕ ಮಸಾಲ ಜಯರಾಮ್‌ ಪರ್ಸಂಟೇಜ್‌ ಗಿರಾಕಿ ಆಗಿದ್ದು ಯಾವುದೇ ಕಾಮಗಾರಿ ಮಾಡಿದರೂ ಇಂತಿಷ್ಟು ಅಂತ ಪರ್ಸಂಟೇಜ್‌ ನೀಡಿದರೆ ಮಾತ್ರ ಬಂದು ಪೂಜೆ ಮಾಡುವ ಸ್ಥಿತಿಯಲ್ಲಿದ್ದಾರೆ, ನಾನು ಯಾವತ್ತೂ ಆ ಕೆಲಸ ಮಾಡಿರಲಿಲ್ಲ ಎಂದು ಮಸಾಲಾ ಜಯರಾಮ್‌ ವಿರುದ್ಧ ಕಿಡಿಕಾರಿದರು.
ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗೆ 24 ಕೋಟಿ ರೂ. ವೆಚ್ಚದಲ್ಲಿ ಅನುದಾನ ಬಿಡುಗಡೆಯಾಗಿದ್ದರೆ ಅದರಲ್ಲಿ ಕೋಟ್ಯಂತರ ಹಣದ ದಿಮ್ಮಿಯನ್ನು ಕೊಳ್ಳೆ ಹೊಡೆದಿದ್ದಾರೆ ಇವರು ಮತ್ತು ಇವರ ಗುತ್ತಿಗೆದಾರರು ಎಂದು ನೇರ ಆರೋಪ ಮಾಡಿದರು.
ಶಾಸಕರ ವಿರುದ್ಧ ಹೋದಂಥವರ ಮೇಲೆ ಅಟ್ರಾಸಿಟಿ ಕೇಸ್‌ ಹಾಕಿಸುವ ಮೂಲಕ ಅವರನ್ನು ಎದುರಿಸುವ ಕೆಲಸವನ್ನು ಈ ಶಾಸಕರು ಮಾಡುತ್ತಿದ್ದಾರೆ, ಜೆಡಿಎಸ್‌ ಪಕ್ಷಕ್ಕೆ ಬರುತ್ತೇನೆಂದು ಹೇಳಿ ಸುಮಾರು ಹನ್ನೆರಡು ಕೋಟಿ ಹಣವನ್ನ ಕುಮಾರಸ್ವಾಮಿ ಅವರಿಂದ ಪಡೆದ ಮಸಾಲ ಜಯರಾಮ್‌ ಎರಡೇ ದಿನಕ್ಕೆ ಉಲ್ಟಾ ಹೊಡೆದಿದ್ದಾರೆ, ಮಸಾಲಾ ಜಯರಾಮ್‌ ಯಾವುದೇ ಕೊಡುಗೆ ನೀಡಿಲ್ಲ, ಶಾಲೆ, ಕಾಲೇಜು, ಪಾಲಿಟೆಕ್ನಿಕ್ ನಂತಹ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಎಸ್‌.ಪುರ ಭಾಗದ ಮುಖಂಡರಾದ ಜೆಡಿಎಸ್‌ ಹೋಬಳಿ ಅಧ್ಯಕ್ಷ ಬೋರಪ್ಪನಹಳ್ಳಿ ಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ತಿಮ್ಮೇಗೌಡ, ಮುಖಂಡರಾದ ನರಸಿಂಹಮೂರ್ತಿ, ಕೆ.ರಾಮಣ್ಣ, ಈಶ್ವರ್‌ ಗೌಡ, ನವೀನ್‌ ಕುಮಾರ್‌, ಅವೇರಹಳ್ಳಿ ಪ್ರಕಾಶ್‌ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!