ಕೊರಟಗೆರೆ: ಕರ್ನಾಟಕ ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಿಲುಕಿರುವ ರೈತರ ನೆರವಿಗೆ ರಾಜ್ಯ ಸರಕಾರ ತಕ್ಷಣ ಸಹಾಯಹಸ್ತ ಹಾಗೂ ಪರಿಹಾರ ನೀಡಬೇಕಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಗ್ರಹ ಮಾಡಿದರು.
ಕೊರಟಗೆರೆ ಪಟ್ಟಣದ ಜಂಪೇನಹಳ್ಳಿ ಕೆರೆಯು ಸತತ ಮಳೆಯಿಂದ ತುಂಬಿ ಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ಪಪಂ ನಿಂದ ಸೋಮವಾರ ಏರ್ಪಡಿಸಲಾಗಿದ್ದ ಕೆರೆಗೆ ಗಂಗಾಪೂಜೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕರ್ನಾಟಕ ರಾಜ್ಯದ ಆಯ್ದ ಪ್ರದೇಶದಲ್ಲಿ ಮಾತ್ರ ಮಳೆ ಬೀಳುತ್ತಿದೆ. ಅರ್ಧಭಾಗ ಹೆಚ್ಚು ಮಳೆಯಾಗಿ ಜನರಿಗೆ ಸಮಸ್ಯೆ ಆಗಿದೆ. ಇನ್ನುಳಿದ ಕಡೆಯಲ್ಲಿ ಮಳೆಯಾಗದೆ ಕೃಷಿ ಬೆಳೆಗಳು ನಾಶವಾಗಿವೆ. ಕೊರಟಗೆರೆ ಕ್ಷೇತ್ರವನ್ನು ಬಡಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಬೆಳೆವಿಮೆ ಬಿಡುಗಡೆಯ ಜೊತೆ ರೈತರಿಗೆ ಸರಕಾರದಿಂದ ಸಹಾಯಹಸ್ತ ನೀಡಬೇಕಿದೆ ಎಂದು ಒತ್ತಾಯ ಮಾಡಿದರು.
ಕಂದಾಯ ಇಲಾಖೆ ಮತ್ತು ಜೆಟ್ಟಿಅಗ್ರಹಾರ ಗ್ರಾಪಂಯಿಂದ ನಿರ್ಲಕ್ಷದಿಂದ 15 ವರ್ಷದಿಂದ ಕೆರೆಯ ಅರ್ಧಭಾಗ ಈಗಾಗಲೇ ಒತ್ತುವರಿಗೆ ಬಲಿಯಾಗಿದೆ. ಕೆರೆ ಅಂಗಳದಲ್ಲಿ ಅನಧಿಕೃತವಾಗಿ ಕಟ್ಟಡಗಳು ನಿರ್ಮಾಣ ಆಗಿವೆ. ತಕ್ಷಣ ಜಂಪೇನಹಳ್ಳಿ ಕೆರೆಯ ಸರ್ವೇ ನಡೆಸಿ ಸರಕಾರದ ದಾಖಲೆಯಂತೆ ಕೆರೆಯ ಜಾಗವನ್ನು ಉಳಿಸುವಂತಹ ಪ್ರಯತ್ನವನ್ನು ತಹಶೀಲ್ದಾರ್ ಮಾಡಬೇಕಿದೆ ಎಂದು ಆದೇಶ ಮಾಡಿದರು.
ಜಂಪೇನಹಳ್ಳಿ ಕೆರೆ ಅಂಗಳದಲ್ಲಿ ನಿರ್ಮಾಣವಾಗಿದ್ದ ಅರಣ್ಯ ಇಲಾಖೆಯಿಂದ ವಿಕ್ಷಣಾ ಮಂದಿರ ನಾಶವಾಗಿದೆ. ಅನುಮತಿ ಪಡೆಯದೇ ಎತ್ತಿನಹೊಳೆ ಅಧಿಕಾರಿವರ್ಗ ಕೋಡಿಯನ್ನು ಹೊಡಿಯುವ ಕೆಲಸ ಮಾಡಿದ್ದಾರೆ. ಕೆರೆಯ ಏರಿ ಮತ್ತು ಕೋಡಿಯ ಮೇಲೆ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಿ ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಕಾಪಾಡಬೇಕಿದೆ ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಪಪಂ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ಭಾರತಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್.ನಟರಾಜ್, ಮುಖ್ಯಾಧಿಕಾರಿ ಲಕ್ಷ್ಮಣ್, ಸದಸ್ಯರಾದ ಲಕ್ಷ್ಮೀನಾರಾಯಣ್, ಓಬಳರಾಜು, ನಾಗರಾಜು, ಪ್ರದೀಶಕುಮಾರ್, ಪುಟ್ಟನರಸಪ್ಪ, ಹೇಮಲತಾ, ಬಲರಾಮಯ್ಯ, ಪುಟ್ಟನರಸಪ್ಪ, ಗೋವಿಂದರಾಜು ಗ್ರಾಪಂ ಸದಸ್ಯ ಮಂಜು, ಮುಖಂಡರಾದ ಮೀನು ಮಂಜಣ್ಣ, ಕಾರು ಮಹೇಶ್ ಇತರರು ಇದ್ದರು.
ಜಂಪೇನಹಳ್ಳಿ ಕೆರೆಗೆ ಗಂಗಾಪೂಜೆ ಮಾಡಿ ಬಾಗಿನ ಅರ್ಪಿಸಿದ ಪರಂ
ಸರ್ಕಾರ ಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲಿ
Get real time updates directly on you device, subscribe now.
Next Post
Comments are closed.