ಕುಣಿಗಲ್: ಗೃಹಬಳಕೆ ಸಿಲೆಂಡರ್ ಬಳಸಿ ಸಾರ್ವಜನಿಕ ಆಟೋರಿಕ್ಷ ಚಾಲನೆ ಮಾಡಲಾಗುತ್ತಿದ್ದ ವಿವಿಧ ಆಟೋ ರಿಕ್ಷಾಗಳ ಮೇಲೆ ದಿಡೀರ್ ದಾಳಿ ನಡೆಸಿದ ಸಾರಿಗೆ ಅಧಿಕಾರಿ ಸದ್ರುಲ್ಲಾ ಶರೀಫ್, 15 ಆಟೋ ರಿಕ್ಷಾಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ಪೊಲೀಸ್ ಇಲಾಖೆಗೆ ನೀಡಿದ್ದಾರೆ.
ಎಲ್‌ಪಿಜಿ ಇಂಧನ ಬಳಸಿ ಚಾಲನೆ ಮಾಡುವ ಆಟೋ ರಿಕ್ಷಾಗಳಿಗೆ ಸುರಕ್ಷಿತ ರೀತಿಯಲ್ಲಿ ಟ್ಯಾಂಕ್ ವ್ಯವಸ್ಥೆಗೊಳಿಸಲಾಗಿದ್ದು ಇಂತಹ ಆಟೋಗಳಿಗೆ ಪಟ್ಟಣದಲ್ಲಿ ಗ್ಯಾಸ್ ಬಂಕ್ ಸಹ ವ್ಯವಸ್ಥೆ ಇದ್ದರೂ ಸಾಕಷ್ಟು ಮಂದಿ ನಿಯಮ ಬಾಹಿರವಾಗಿ ಗೃಹಬಳಕೆ ಅನಿಲ ಬಳಸಿ ಅಸುರಕ್ಷಿತ ರೀತಿಯಲ್ಲಿ ಸಿಲೆಂಡರ್ ಅಳವಡಿಸಿಕೊಂಡು ಸಾರ್ವಜನಿಕ ಸಾಗಾಣೆ ಮಾಡುತ್ತಿದ್ದು ಇದರಿಂದ ಪರಿಸರಕ್ಕೂ, ಪ್ರಯಾಣಿಕರು ಮಾರಕವಾಗಿದ್ದು ಮುಂದಿನ ದಿನಗಳಲ್ಲಿ ಆಟೋರಿಕ್ಷಾ ಚಾಲಕರು, ಮಾಲೀಕರು ಸಾರಿಗೆ ನಿಯಮಗಳಿಗೆ ಒಳಪಟ್ಟು ಅನುಮತಿಕರಿಸಿದ ಇಂಧನ ಅಳವಡಿಸಿ ವಾಹನ ಸಂಚಾರ ಮಾಡಬೇಕಿದೆ. ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ಗೃಹಬಳಕೆ ಸಿಲೆಂಡರ್ ಬಳಕೆ- ಆಟೋಗಳು ವಶಕ್ಕೆ
Get real time updates directly on you device, subscribe now.
Prev Post
Comments are closed.