ಬಂಡೆ ಬ್ಲಾಸ್ಟ್- ದಿಕ್ಕಾಪಾಲಾಗಿ ಓಡಿದ ರೈತರು

385

Get real time updates directly on you device, subscribe now.

ಮಧುಗಿರಿ: ಎತ್ತಿನಹೊಳೆ ಕಾಮಗಾರಿ ಸಂಬಂಧ ಬಂಡೆಯನ್ನು ಹಾಡುಹಗಲೇ ಬ್ಲಸ್ಟ್ ಮಾಡಿದ ಕಾರಣ ದಾರಿ ಹೋಕರು ಮತ್ತು ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ಕಲ್ಲಿನ ಚೂರುಗಳು ಸಿಡಿದು ರೈತರು ದಿಕ್ಕಾಪಾಲಾಗಿ ಓಡಿದ ಘಟನೆ ತಾಲ್ಲೂಕಿನ ಬಸವನಹಳ್ಳಿ ಸಮೀಪ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗದ ಬೈಪಾಸ್‌ ರಸ್ತೆಯ ಜಮೀನುಗಳಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಈ ಬ್ಲಸ್ಟ್ ನಿಂದಾಗಿ ಕಳೆದ 3 ದಿನಗಳಿಂದ ಭೂಮಿ ನಡುಗಿದ ಜೊತೆಗೆ ಹಾಡಹಗಲೇ ಮಧ್ಯಾಹ್ನ 1.20 ಕ್ಕೆ ಬಂಡೆ ಬ್ಲಸ್ಟ್ ಮಾಡಲು ಉಪಯೋಗಿಸಿದ ರಾಸಾಯನಿಕ ವಸ್ತುವಿನ ತೀವ್ರತೆ ಹೆಚ್ಚಾಗಿದ್ದ ಕಾರಣ ಸುಮಾರು ಐದರಿಂದ ಹತ್ತು ಕೆಜಿ ತೂಕದ ಕಲ್ಲುಗಳು ಬೈಪಾಸ್‌ ರಸ್ತೆಗೆ ಸಿದಿಡಿದೆ.
ಬೈಪಾಸ್‌ ರಸ್ತೆಯಲ್ಲಿ ಸೀಬೆ ಕಾಯಿ ವ್ಯಾಪಾರ ಮಾಡುತ್ತಿದ್ದ ಬೈರಪ್ಪ ಎಂಬುವವರ ವಾಹನಕ್ಕೂ ಮತ್ತು ಅವರಿಗೂ ಕಲ್ಲುಗಳು ತಗುಲಿವೆ, ಅಲ್ಲದೆ ಕಲ್ಲಿನ ಚೂರುಗಳು ಸುತ್ತಮುತ್ತಲ ಪ್ರದೇಶದಲ್ಲಿ ಹರಡಿಕೊಂಡಿದೆ.
ಆರ್‌ಟಿಓ ಇಲಾಖೆಯ ನಿವೃತ್ತ ನೌಕರ ಪ್ರತ್ಯಕ್ಷದರ್ಶಿಗಳಾಗಿದ್ದು ಬಂಡೆಯ ಸಿಡಿತಕ್ಕೆ ಹೆದರುವಂತಾಗಿದೆ, ಈ ಬಗ್ಗೆ ಪೊಲೀಸರು ಸಂಬಂಧ ಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದೇ ವೇಳೆ ಡಿವೈಎಸ್ಪಿ ರಾಮಕೃಷ್ಣಯ್ಯ ಡಿಪೋ ಎದುರುಗಡೆಯಿರುವ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದಾಗ ಪತ್ರಕರ್ತರು ಗಮನ ಸೆಳೆದಾಗ ಹಾಡಹಗಲಲ್ಲೇ ಬ್ಲಾಸ್ಟ್ ಮಾಡುವಂತಿಲ್ಲ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮಧುಗಿರಿ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದರು.

Get real time updates directly on you device, subscribe now.

Comments are closed.

error: Content is protected !!