ಕೊರಟಗೆರೆ: ಒಂಟಿ ಮಹಿಳೆಯನ್ನೇ ಟಾರ್ಗೆಟ್ ಮಾಡಿಕೊಂಡು ಕೊಲೆಯ ಬೆದರಿಕೆ ಹಾಕಿ ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಅಂತರ್ ರಾಜ್ಯ ಕಳ್ಳರನ್ನು ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ಮತ್ತು ಪಿಎಸೈ ನಾಗರಾಜು ನೇತೃತ್ವದ ಪೊಲೀಸರ ತಂಡ ಬಂಧಿಸಿ 3 ಪ್ರತ್ಯೇಕ ಪ್ರಕರಣ ಬೇದಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಕಪ್ಪು ಬಣ್ಣದ ಪಲ್ಸರ್ ಬೈಕ್ ನಲ್ಲಿ ಓಡಾಡುತ್ತಿದ್ದ ಅಪರಿಚಿತ ವ್ಯಕ್ತಿಗಳನ್ನು ಪೊಲೀಸ್ ಕ್ರೈಂ ಸಿಬ್ಬಂದಿ ಮೋಹನಕುಮಾರ್, ಸಿದ್ದಲಿಂಗ ಪ್ರಸನ್ನ ಮತ್ತು ಸೈಯದ್ ರಿಫತ್ ಅಲಿ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿದೆ ಬಂದಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮಡಕಶಿರಾ ತಾಲೂಕು ಯರಬೊಮ್ಮನಹಳ್ಳಿ ಗ್ರಾಮದ ವಾಸಿಯಾದ ರಂಗಪ್ಪನ ಮಗನಾದ ನಾಗಯ್ಯ ಮತ್ತು ಗೋಪಯ್ಯನ ಮಗನಾದ ಶಿವಣ್ಣ ಬಂಧಿತ ಆರೋಪಿಗಳು. ಮಧುಗಿರಿ ಮತ್ತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂಟಿ ಮಹಿಳೆಯ 3 ಪ್ರತ್ಯೇಕ ಸರಗಳ್ಳತನ ಪ್ರಕರಣವನ್ನು ಕೊರಟಗೆರೆ ಪೊಲೀಸರ ತಂಡ ಬೇದಿಸಿದ್ದಾರೆ.
ಮಧುಗಿರಿ ಪಟ್ಟಣದ ಹೆಚ್‌ಪಿ ಪೆಟ್ರೋಲ್ ಬಂಕ್, ನೃಪತುಂಗ ಸರ್ಕಲ್ ಮತ್ತು ಕೊರಟಗೆರೆ ತಾಲೂಕಿನ ದಾಸರಹಳ್ಳಿ ಬಳಿಯಲ್ಲಿ ಒಂಟಿ ಮಹಿಳೆಗೆ ಕೊಲೆ ಬೆದರಿಕೆ ಹಾಕಿ ಕಳ್ಳತನ ಮಾಡಿದ್ದ ಈ ಕಳ್ಳರಿಂದ 6 ಲಕ್ಷ ಮೌಲ್ಯದ 150 ಗ್ರಾಂ ಚಿನ್ನ, ಎರಡು ದ್ವಿಚಕ್ರ ವಾಹನ, 2 ಮೊಬೈಲ್ ವಶಕ್ಕೆ ಪಡೆದು ಇಬ್ಬರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಅಂತರ್ ರಾಜ್ಯ ಕಳ್ಳರ ಬಂಧನ
Get real time updates directly on you device, subscribe now.
Prev Post
Next Post
Comments are closed.