ಎಂಟಿಕೆ ಮರಳು ದಂಧೆಯ ಹರಿಕಾರ: ಮಸಾಲೆ

300

Get real time updates directly on you device, subscribe now.

ಗುಬ್ಬಿ: ತುರುವೇಕೆರೆ ತಾಲ್ಲೂಕಿನ ಕೆರೆಗಳಲ್ಲಿ ಮರಳು ದಂಧೆ ಮಾಡುವ ಮೂಲಕ ಹಣ ಮಾಡಿದವ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಬಿಟ್ಟರೆ ರೈತರ ಪರವಾಗಿ ಯಾವತ್ತೂ ಕೆಲಸ ಮಾಡಿಲ್ಲ ಎಂದು ಮಸಾಲಾ ಜಯರಾಮ್‌ ಕಿಡಿಕಾರಿದರು.
ಗುಬ್ಬಿ ತಾಲ್ಲೂಕಿನ ಸಿ.ಎಸ್‌.ಪುರ ಹೋಬಳಿ ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿಂಡಿಸ್ಕೆರೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, 2 ಬಾರಿ ಶಾಸಕರಾದರು ಯಾವುದೇ ಕೆರೆಗಳನ್ನು ತುಂಬಿಸದೆ ಶಿಂಷಾ ನದಿಯ ಒಡಲಿನಿಂದ ಬರುತ್ತಿದ್ದ ಮರಳನ್ನ ಮಾರಿಕೊಂಡು ಹಣ ಮಾಡಿದ್ದು ಬಿಟ್ಟರೆ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಬೇರೆಯವರಿಗೆ ಕಮಿಷನ್‌ ಕೊಟ್ಟು ನನ್ನ ಕಾರ್ಖಾನೆಯಲ್ಲಿ ಕೆಲಸ ಆ ಮಾಡಿಸುತ್ತೇನೆ ಹೊರತು ಇಲ್ಲಿ ಯಾವುದೇ ಗುತ್ತಿಗೆದಾರರಿಂದ ಕಮಿಷನ್‌ ಪಡೆಯುವ ಕೆಟ್ಟ ಚಾಳಿ ನನಗಿಲ್ಲ, ಆದರೆ ಈ ಮನುಷ್ಯ ಶಾಸಕನಾದ ಹತ್ತು ವರ್ಷಗಳ ಕಾಲ ಇದೇ ಕೆಲಸ ಮಾಡಿಕೊಂಡು ಬಂದಿರುವುದು ಇಡೀ ತಾಲ್ಲೂಕಿನ ಜನರಿಗೆ ಗೊತ್ತಿದೆ ಎಂದರು.
ತಾಲ್ಲೂಕಿನ ಜನರು ಸಂಪೂರ್ಣವಾಗಿ ಅವನನ್ನ ನಿರ್ಲಕ್ಷ್ಯ ಮಾಡಿದ್ದಾರೆ, ಹಾಗಾಗಿ ನಾನು ಬದುಕಿದ್ದೇನೆ ಎಂಬುದನ್ನು ತೋರಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತೇನೆಂದು ಹೇಳಿ ಜನರನ್ನು ಕರೆಸಿ ನನ್ನ ಅಭಿವೃದ್ಧಿ ಸಹಿಸಲು ಸಾಧ್ಯವಾಗದೆ ನನ್ನ ವಿರುದ್ಧ ಮಾತನಾಡುವ ಚಾಳಿ ಮಾಡಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಾನು ಕಲ್ಲಿನ ದಿಮ್ಮಿಗಳನ್ನು ತೆಗೆದುಕೊಂಡು ಹೋಗಿದ್ದೇನೆ ಎಂದು ಆರೋಪ ಮಾಡುವ ಕೃಷ್ಣಪ್ಪ ಬೇಕಾದರೆ ಇನ್ನೂ ಅಲ್ಲೇ ಸಾಕಷ್ಟು ಕಲ್ಲುಗಳು ಬಿದ್ದಿವೆ, ಅವುಗಳನ್ನು ನೀನು ಮತ್ತು ನಿನ್ನ ಶಿಷ್ಯರು ತೆಗೆದುಕೊಂಡು ಹೋಗಿ, ಪ್ರತಿ ತಿಂಗಳು 200 ಕೋಟಿಯಷ್ಟು ಸಾಂಬಾರ್‌ ಪದಾರ್ಥದ ವ್ಯವಹಾರ ಮಾಡುವ ನನಗೆ ಆ ಸ್ಥಿತಿ ಬಂದಿಲ್ಲ, ಆದರೆ ನೀನು ಮಾತ್ರ ಪ್ರತಿಭಟನೆ ಮಾಡುವ ಮೂಲಕ ಎಲ್ಲರನ್ನ ಹೆದರಿಸಿ ಕೃಷ್ಣಪ್ಪ ಆಗಿರುವುದು ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ, 2 ಸಾರಿ ಶಾಸಕನಾದರೂ ಕೆರೆಗಳನ್ನು ತುಂಬಿಸುವ ಪ್ರಯತ್ನವನ್ನೇ ಮಾಡಿಲ್ಲ, ಈ ಬಾರಿ ನಾವು ಶೇ.90 ಕೆರೆಯನ್ನು ತುಂಬಿಸುವ ಮೂಲಕ ಇಡೀ ತಾಲ್ಲೂಕು ಸಮೃದ್ದಿ ಮಾಡಿದ್ದೇವೆ, ಸುಮಾರು ಹದಿನೈದು ವರ್ಷದಿಂದ ತುಂಬಿರದೆ ಇದ್ದಂತಹ ಸಿ.ಎಸ್‌.ಪುರ ಕೆರೆ ತುಂಬಿದ್ದು ಇದನ್ನು ಕೃಷ್ಣಪ್ಪನಿಗೆ ಸಹಿಸಲು ಆಗುತ್ತಿಲ್ಲ, ಹಾಗಾಗಿ ಕೃಷ್ಣಪ್ಪ ಈ ರೀತಿ ಕೆಟ್ಟ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದರು.
ಇವರು ಯಾವ ಕೆಲಸ ಮಾಡಿ ಇಷ್ಟೊಂದು ದುಡ್ಡು ಮಾಡಿದ್ದಾರೆ ಎಂದು ಹುಡುಕುತ್ತಾ ಹೋದರೆ ಮಾಡಿರುವುದೇ ಮರಳು ದಂಧೆ ಹೊರತು ಬೇರೆ ಯಾವುದೂ ಅಲ್ಲ, ಇವರು ಹೇಮಾವತಿ ಹರಿಕಾರರಲ್ಲ, ಮರಳುದಂಧೆಯ ಹರಿಕಾರ ಎಂದೇ ಹೇಳಬಹುದು ಎಂದು ಕಿಡಿಕಾರಿದರು.
ಇಡೀ ತಾಲ್ಲೂಕಿನ ಜನರು ಇವರನ್ನು ಸಂಪೂರ್ಣವಾಗಿ ಮರೆತಿದ್ದಾರೆ, ಇನ್ನು ಇಪ್ಪತ್ತು ವರ್ಷಗಳ ಕಾಲ ನಾನು ಶಾಸಕನಾಗಿರುತ್ತೇನೆ, ನನ್ನ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆಯಾಗಿದೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್‌, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ನಾಗಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮೇಶ್‌, ಮುಖಂಡರಾದ ರಾಮಚಂದ್ರಪ್ಪ, ಈರಣ್ಣ, ಲೋಕೇಶ್‌, ಕೆಂಪರಾಜು, ವೆಂಕಟೇಶ್‌, ಶ್ರೀನಿವಾಸ್‌, ಮಹೇಶ್‌, ಸದಾಶಿವು ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!