ವಾಲ್ಮೀಕಿ ರಾಮಾಯಣ ಸರ್ವ ಕಾಲಕ್ಕೂ ಶ್ರೇಷ್ಠ

216

Get real time updates directly on you device, subscribe now.

ತುಮಕೂರು: ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣ ಕಾವ್ಯ ಈ ಭೂಮಿ ಇರುವವರೆಗು ಪ್ರಸ್ತುತವಾಗಿರುತ್ತದೆ ಎಂದು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಹೆಚ್‌.ಸಿ.ಹನುಮಂತಯ್ಯ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ವಾಲ್ಮೀಕಿ ಮಹರ್ಷಿಗಳ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹೋದರ ಪ್ರೇಮ, ರಾಜ್ಯಾಡಳಿತ, ಸರ್ವರಿಗೂ ಸಮಾನ ಅವಕಾಶ ಎಂಬ ಸಂವಿಧಾನ ಆಶಯಕ್ಕೆ ಪೂರಕವಾಗಿ ಐದು ಸಾವಿರ ವರ್ಷಗಳ ಹಿಂದೆಯೇ ರಾಮಾಯಣ ರೂಪುಗೊಂಡಿದ್ದು, ರಾಮಾಯಣದಲ್ಲಿರುವ ಅಂಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತಗೊಳ್ಳುತ್ತಾ ಹೋಗುತ್ತದೆ ಎಂದರು.
ವಾಲ್ಮೀಕಿ ಮಹರ್ಷಿಗಳು ಸೃಷ್ಟಿಸಿದ ರಾಮನ ಪಾತ್ರ, ರಾಮಾಯಣ ಬೆಳೆದಂತೆಲ್ಲಾ ರಾಮ ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮ ಎಂಬ ಹತ್ತಾರು ಗೌರವ ಸೂಚಕ ಸಂಕೇತಗಳಿಂದ ಕರೆಯಿಸಿಕೊಳ್ಳುವಷ್ಟು ಪ್ರಬುದ್ದವಾಗುತ್ತಾ ಸಾಗುತ್ತದೆ. ತಂದೆ, ತಾಯಿಯ ಮಾತಿಗೆ ನೀಡುವ ಗೌರವ, ರಾಮ, ಸೀತೆಯೊಂದಿಗೆ ಕಾಡಿಗೆ ತೆರಳುವ ಲಕ್ಷ್ಮಣನ ಸಹೋದರ ಪ್ರೇಮ, ಹೆಂಡತಿಗೆ ಅಗ್ನಿ ಪರೀಕ್ಷೆಗೆ ಗುರಿಪಡಿಸುವುದು, ಲೋಕಾಪವಾದಕ್ಕೆ ಅಂಜಿ ತುಂಬು ಗರ್ಭಿಣಿಯನ್ನು ಕಾಡಿಗೆ ಅಟ್ಟುವ ರಾಮನ ರಾಜ ನಡೆಗಳು, ಪ್ರಬುದ್ದ ಆಡಳಿತದ ಸಂಕೇತವಾಗಿವೆ. ಕೆಲವು ಸಂಗತಿಗಳನ್ನು ಹೊರತು ಪಡಿಸಿದರೆ, ರಾಮಾಯಣದ ಹಲವಾರು ಸಂಗತಿಗಳು ಇಂದಿನ ಕಲ್ಯಾಣ ರಾಜ್ಯಕ್ಕೂ ಅನ್ವಯಿಸುತ್ತವೆ ಎಂದು ಹೆಚ್‌.ಸಿ.ಹನುಮಂತಯ್ಯ ನುಡಿದರು.
ರಾಮಾಯಣದಲ್ಲಿ ನೀಡಿದ ಲಕ್ಷ್ಮಣದ ಸಹೋದರ ಪ್ರೇಮ, ಅಂಜನೇಯನ ಸ್ವಾಮಿ ನಿಷ್ಠೆ, ಲವ, ಕುಶರ ಛಲ ಇನ್ನೂ ಅನೇಕ ಸಂದೇಶಗಳನ್ನು ಭಾರತೀಯರು ಚಾಚು ತಪ್ಪದೆ ಪಾಲಿಸಿದರೆ, ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ. ರಾಮ ರಾಜಕೀಯ ಲಾಭಕ್ಕಾಗಿ ನಮ್ಮನಾದರೆ ಸಾಲದು, ಅತನ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ, ಆಗ ಮಾತ್ರ ರಾಜರಾಜ್ಯದ ಕನಸು ನನಸಾಗಲಿದೆ ಎಂದು ಹೆಚ್‌.ಸಿ.ಹನುಮಂತಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ನರಸಿಂಹಯ್ಯ, ಜಿಲ್ಲಾ ಕಾರ್ಯದರ್ಶಿ ಎಂ.ವಿ.ಶ್ರೀನಿವಾಸ್‌ ವೀರಣ್ಣಗೌಡ, ಪುರುಷೋತ್ತಮ್‌ ಬಾಬು, ಸುಜಾತ, ಕೈದಾಳ ರಮೇಶ್‌, ಯಶೋಧ, ರವಿಕುಮಾರ್‌, ಕೆಂಪರಾಜು, ಸುಬ್ರಮಣ್ಯ, ಭಾಗ್ಯಮ್ಮ, ಸೌಭಾಗ್ಯ, ದೇವರಾಜು, ವಸಂತಕುಮಾರ್‌, ಕವಿತಾ ಶೆಟ್ಟಿ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!