ಶಾಲಾ ವಾಹನ ಪಲ್ಟಿ- 10 ಮಕ್ಕಳಿಗೆ ಗಾಯ

499

Get real time updates directly on you device, subscribe now.

ಕೊರಟಗೆರೆ: ಚಾಲಕನ ಆಯತಪ್ಪಿ ಖಾಸಗಿ ಶಾಲಾ ವಾಹನ ಕಾಶಪುರ ರಸ್ತೆಯ ತಿರುವಿನಲ್ಲಿ ಪಲ್ಟಿ ಹೊಡೆದು 10 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಗುರುವಾರ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಪಂ ವ್ಯಾಪ್ತಿಯ ಚಿಕ್ಕನಹಳ್ಳಿ ಎಸ್ವಿಜಿ ಖಾಸಗಿ ಶಾಲೆಯ ವಾಹನ ಕಾಶಪುರ ಕ್ರಾಸ್ ನಲ್ಲಿ ಚಲಿಸುವಾಗ ಅಪಘಾತ ಆಗಿದೆ.
ಗಾಯಗೊಂಡ ಮಕ್ಕಳನ್ನು ಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಸ್ಥಳೀಯರ ಸಹಕಾರದಿಂದ ಕೊರಟಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಮಧುಗಿರಿ ಡಿಡಿಪಿಐ ಕೃಷ್ಣಮೂರ್ತಿ ಮತ್ತು ಕೊರಟಗೆರೆ ಬಿಇಓ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!