ಜೆಡಿಎಸ್‌ ಸಮಾವೇಶಕ್ಕೆ ನಾನು ಹೋಗಲ್ಲ- ಕಾರ್ಯಕರ್ತರು ಹೋಗಲ್ಲ

ಪಕ್ಷದಿಂದ ಕತ್ತು ಹಿಡಿದು ತಳ್ಳುತ್ತಿದ್ದಾರೆ: ಶ್ರೀನಿವಾಸ್

247

Get real time updates directly on you device, subscribe now.

ಗುಬ್ಬಿ: ಗುಬ್ಬಿ ಪಟ್ಟಣದಲ್ಲಿ ಜೆಡಿಎಸ್‌ ಸಮಾವೇಶವನ್ನು ಅ.25 ರಂದು ಆಯೋಜನೆ ಮಾಡಿದ್ದರು ಸಹ ಗುಬ್ಬಿಯ ಜೆಡಿಎಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅದರಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವ ಮೂಲಕ ಕಾರ್ಯಕ್ರಮಕ್ಕೆ ಚಕ್ಕರ್‌ ಕೊಡುವ ನಿರ್ಧಾರಕ್ಕೆ ಬಂದಿದ್ದಾರೆ.
ಗುಬ್ಬಿ ತಾಲ್ಲೂಕಿನ ಗಂಗನಹಳ್ಳಿ, ಕೊಪ್ಪ ಗೇಟ್‌, ಶಿವಸಂದ್ರ ಭಾಗದಲ್ಲಿ ಅಂಗನವಾಡಿ ಕಟ್ಟಡಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸ್ವಾಭಿಮಾನವಾಗಿ ಬದುಕುತ್ತಿರುವ ನನಗೆ ಇಂತಹ ಕಾರ್ಯಕ್ರಮ ಅವಶ್ಯಕತೆ ನನಗಿಲ್ಲ, ಯಾರೋ ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ತಾವು ಹೋಗಬಾರದು ಎಂದು ನಮ್ಮ ಕಾರ್ಯಕರ್ತರು ಹೇಳಿರುವುದರಿಂದ ನಾನು ಆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ, ನಮ್ಮ ಕಾರ್ಯಕರ್ತರು ಸಹ ಹೋಗುವುದಿಲ್ಲ ಎಂದರು.
ನಾನು ಸಹ ಜೆಡಿಎಸ್‌ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಕೆ ನೀಡಿಲ್ಲ, ನನ್ನ ಹಾಗೂ ವರಿಷ್ಠರ ನಡುವೆ ಒಂದಷ್ಟು ಬೇಸರವಿರುವುದು ನಿಜ, ಅದನ್ನು ಸರಿಪಡಿಸಿಕೊಂಡು ನಾನು ಇಲ್ಲಿ ಮುಂದುವರಿಯಬೇಕು ಎಂದು ಕೊಂಡವನು, ಆದರೆ ಅವರಿಗೆ ನಾನು ಬೇಕಾಗಿಲ್ಲ, ನಾನು ಇರುತ್ತೇನೆ ಎಂದು ಹೇಳಿದರು ಅವರೆ ಕತ್ತು ಹಿಡಿದು ತಳ್ಳುತ್ತಿದ್ದಾರೆ, ಕಳೆದ ಬುಧವಾರ ಸಮಯ ನಿಗದಿ ಮಾಡಿ ಬರುತ್ತೇನೆ ಎಂದು ಹೇಳಿದರೂ ಬೇರೊಂದು ದಿನ ಬನ್ನಿ ಎಂದು ಹೇಳಿದವರು ಮತ್ತೆ ನನ್ನನ್ನು ಕರೆದಿಲ್ಲ, ಸ್ಥಳೀಯ ಶಾಸಕ ನಾನು ಇಲ್ಲೇ ಇದ್ದರೂ ಇನ್ನೊಬ್ಬ ವ್ಯಕ್ತಿಯನ್ನು ತಂದು ಗುಬ್ಬಿ ಕ್ಷೇತ್ರಕ್ಕೆ ಬಿಟ್ಟಿದ್ದಾರೆ ಜೆಡಿಎಸ್‌ ಸಮಾವೇಶ ಮಾಡುತ್ತೇನೆಂದು ಹೊರಟಿದ್ದಾರೆ.
ಜೆಡಿಎಸ್‌ ಪಕ್ಷದ ಮುಖಂಡರಿಗೆ 123 ಸಂಖ್ಯೆಯಲ್ಲಿ ಗೆಲ್ಲುತ್ತೇವೆ ಎಂಬುದು ಮಾತಿಗಷ್ಟೆ, ಅವರಿಗೆ ಬೇಕಿರುವುದು ಕೇವಲ 20 ರಿಂದ 25 ಸೀಟು ಮಾತ್ರ, ಹಾಗಾಗಿ ಗೆಲ್ಲುವಂತಹ ವ್ಯಕ್ತಿಯನ್ನು ದೂರವಿಡುವ ಕೆಲಸ ಮಾಡುತ್ತಿದ್ದಾರೆ ಎಂದು ನೇರವಾಗಿ ಜೆಡಿಎಸ್‌ ವರಿಷ್ಠರ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಯುವ ಜೆಡಿಎಸ್‌ ಅಧ್ಯಕ್ಷ ವೆಂಕಟೇಶ್‌, ಗ್ರಾಮ ಪಂಚಾಯತಿ ಸದಸ್ಯರು, ಸಿಡಿಪಿಓ ಮಂಜುನಾಥ್‌, ಎಸಿಡಿಪಿಓ ಕೃಷ್ಣಮೂರ್ತಿ, ಆ ಭಾಗದ ಜೆಡಿಎಸ್‌ ಮುಖಂಡರು, ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!