ಗುಬ್ಬಿ: ಈ ತಿಂಗಳ 25 ರಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಗುಬ್ಬಿಯಲ್ಲಿ ನಡೆಯುವ ಜೆಡಿಎಸ್ ಸಮಾವೇಶಕ್ಕೆ ಬೆಳಗ್ಗೆ 10.30 ಕ್ಕೆ ಆಗಮಿಸಲಿದ್ದು ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಜೆಡಿಎಸ್ ಸೇರ್ಪಡೆಯಾಗುತ್ತಿರುವ ಬಿ.ಎಸ್.ನಾಗರಾಜು ತಿಳಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಮಾರ ಸ್ವಾಮಿ ಯವರ ಜೊತೆಗೆ ಜಿಲ್ಲೆಯ ಜೆಡಿಎಸ್ ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲೆ, ತಾಲ್ಲೂಕು ಅಧ್ಯಕ್ಷರು ಆಗಮಿಸುತ್ತಿದ್ದಾರೆ, ನನ್ನ ಜೊತೆಯಲ್ಲಿ ಬೇರೆ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ತಿಳಿಸಿದ ಅವರು ಕುಮಾರಸ್ವಾಮಿ ಅವರು ಮಾಡಿರುವ ಜನಪರ ಯೋಜನೆಗಳು ಸಾಲ ಮನ್ನಾ ದಂತಹ ಯೋಜನೆಗಳನ್ನುಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಹಾಗಾಗಿ 2023ಕ್ಕೆ ಕುಮಾರಸ್ವಾಮಿ ಯವರು ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನರ ಕನಸು ಎಂದರು.
ಪಕ್ಷ ಸಂಘಟನೆ ಮಾಡಬೇಕು ಎಂದು ವರಿಷ್ಠರು ನನಗೆ ತಿಳಿಸಿದ್ದಾರೆ, ಹಾಗಾಗಿ ರಾಷ್ಟ್ರೀಯ ಪಕ್ಷ ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷ ಸೇರುತ್ತಿದ್ದೇನೆ, ದೇಶದಲ್ಲಿ ಪ್ರಾದೇಶಿಕ ಪಕ್ಷ ಇದ್ದಲ್ಲಿ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ, ದೇಶದ ಕೇರಳ, ತಮಿಳುನಾಡು, ಆಂಧ್ರ ರಾಜ್ಯಗಳು ಇಂದು ಹೆಚ್ಚಿನ ಅಭಿವೃದ್ಧಿ ಗಳಿಸಲು ಸಾಧ್ಯವಾಗಿರುವುದು ಪ್ರಾದೇಶಿಕ ಪಕ್ಷಗಳಿಂದ ಎಂದರು.
ಸಿ.ಎಸ್.ಹೋಬಳಿಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಕೆಲಸ ಮಾಡಿದ್ದು ಸುಮಾರು 50 ಕೋಟಿಯಷ್ಟು ಅನುದಾನ ತಂದು ಇಡೀ ಹೋಬಳಿಯನ್ನು ಮಾದರಿಯಾಗಿ ಮಾಡಿದ್ದೇನೆ, ಅಲ್ಲಿ ಮಣ್ಣಿನ ರಸ್ತೆಗಳೇ ಇಲ್ಲ, ಪ್ರತಿ ಗ್ರಾಮದಲ್ಲೂ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ, ಇನ್ನೂ ಪ್ರತಿ ಕೆರೆಗಳಿಗೂ ನೀರು ತುಂಬಿಸಿದ್ದೇವೆ, ಇಂಥ ಹತ್ತಾರು ಕೆಲಸ ಮಾಡಿರುವುದನ್ನು ಕಂಡು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶಿವಲಿಂಗಯ್ಯ, ಸುರೇಶ್ ಗೌಡ, ತಿಪ್ಪೂರು ಪ್ರಕಾಶ್, ಆರ್.ಎಸ್.ಗಂಗಾಧರ್ ಇನ್ನಿತರರು ಹಾಜರಿದ್ದರು.
ಅಭಿವೃದ್ಧಿ ಕೆಲಸ ಮಾಡಲು ಜೆಡಿಎಸ್ ಸೇರುತ್ತಿದ್ದೇನೆ: ನಾಗರಾಜು
Get real time updates directly on you device, subscribe now.
Next Post
Comments are closed.