ಕುಣಿಗಲ್: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ಜೊತೆಯಲ್ಲಿ ಮಠ ಮಾನ್ಯಗಳು ಸೇವೆ ಸಲ್ಲಿಸಿದಾಗ ಸಮಾಜದ ಏಳಿಗೆಯಾಗುತ್ತದೆ ಎಂದು ಶ್ರೀಬಸವೇಶ್ವರ ಮಠದ ಗುರೂಜಿ ಡಾ.ಧನಂಜಯ ಸ್ವಾಮಿ ಹೇಳಿದರು.
ಶನಿವಾರ ಬಿದನಗೆರೆ ಸತ್ಯಶನೈಶ್ಚರ ಕ್ಷೇತ್ರದಲ್ಲಿ ಶ್ರೀಮಠದ ವತಿಯಿಂದ ನಿರ್ಗತಿಕರು, ವೃದ್ಧರಿಗೆ ಅನಾಥಾಶ್ರಮ, ವೃದ್ಧಾಶ್ರಮ ಉದ್ಘಾಟಿಸಿ, ಸಮಾಜದಲ್ಲಿ ಹಲವು ಕಾರಣಗಳಿಂದ ಮನುಷ್ಯ ಸಮಸ್ಯೆಗೆ ಸಿಲುಕಿ ಬಳಲುತ್ತಾ ನಿರ್ಗತಿಕನಾಗುತ್ತಾನೆ, ಇನ್ನು ಸಂಸ್ಕಾರಯುತ ಶಿಕ್ಷಣದ ಕೊರತೆಯಿಂದ ಎಲ್ಲರೂ ಇದ್ದರೂ ಯಾರು ಇಲ್ಲದವರಂತೆ ವಯೋವೃದ್ಧರು ಜೀವನದ ಸಂಧ್ಯಾಕಾಲದಿ ಅತಂತ್ರರಾಗುತ್ತಾರೆ, ಇಂತಹ ನೊಂದ ಜೀವಿಗಳಿಗೆ ಕೈಲಾದ ಮಟ್ಟಿಗೆ ಆಸರೆಯಾಗಲು ಶ್ರೀಮಠ ವೃದ್ಧಾಶ್ರಮ, ಅನಾಥಶ್ರಮದಲ್ಲಿ ಆಸರೆ ಕಲ್ಪಿಸಲಾಗುವುದು, ಶ್ರೀಮಠದ ವತಿಯಿಂದ ನಿರ್ಮಿಸಲಾಗಿರುವ 165ಅಡಿ ಎತ್ತರದ ಪಂಚಮುಖಿ ಆಂಜನೇಯ ಸ್ವಾಮಿ ವಿಗ್ರಹ ಬರುವ ಫೆಬ್ರವರಿ ಮಾಹೆಯಲ್ಲಿ ಉದ್ಘಾಟಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ಕ್ಷೇತ್ರದ ವ್ಯವಸ್ಥಾಪಕ ನಿರ್ದೇಶಕ ಅನಿಲ್, ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಮೊದಲ ಹಂತದಲ್ಲಿ ನೂರು ಮಂದಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಉಪಾಧ್ಯಕ್ಷ ಹರ್ಷ, ಖಜಾಂಚಿ ಶ್ರೀಧರ್, ನಿರ್ದೇಶಕ ರಾಘವೇಂದ್ರ ಇತರರು ಇದ್ದರು.
ಮಠಮಾನ್ಯಗಳು ಸಮಾಜ ಸೇವೆ ಮಾಡಲಿ
Get real time updates directly on you device, subscribe now.
Next Post
Comments are closed.