ಮಗಳನ್ನು ಹುಡುಕಲು ಹೋಗಿ ಶವವಾದ ಅಪ್ಪ

1,994

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಮಗಳ ಪ್ರೀತಿ ವಿಚಾರ ಪ್ರಶ್ನಿಸಿದ್ದಕ್ಕೆ ಹುಡುಗನ ಸಂಬಂಧಿಕರು ಹುಡುಗಿಯ ತಂದೆಯನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ತಮ್ಮಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ, ಆದರೆ ಹುಡುಗ, ಹುಡುಗಿ ಮಾತ್ರ ನಾಪತ್ತೆಯಾಗಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ತಮ್ಮಡಿಹಳ್ಳಿಯಲ್ಲಿನ 8ನೇ ತರಗತಿ ಯುವತಿಯನ್ನು ದುರ್ಗಾರಾಜ್ ಹಾಗೂ ಸತೀಶ್ ಎಂಬ ಯುವಕರು ಆಪರಿಸಿರುವ ಬಗ್ಗೆ ಯುವಕರ ಸಂಬಂಧಿಕರ ಬಳಿ ವಿಚಾರಿಸಲು ಹೋದ ಯುವತಿಯ ತಂದೆ ರಮೇಶ್ ನನ್ನು ಯುವಕರ ಸಂಬಂಧಿಗಳಾದ ಸಣ್ಣಕರಿಯಮ್ಮ ಹಾಗೂ ಮಲ್ಲಿಕಾರ್ಜುನಯ್ಯ ಅವಾಚ್ಯ ಶಬ್ದದಿಂದ ನಿಂದಿಸಿ ಗಲಾಟೆ ನಡೆಸಿ ರಮೇಶ್ ನ ಎದೆ ಭಾಗಕ್ಕೆ ಬಲವಾಗಿ ಗುದಿದ್ದು, ರಮೇಶ್ ನನ್ನು ಆಸ್ಪತ್ರೆಗೆ ತರುವ ಮಧ್ಯೆ ಸಾವನ್ನಪಿದ್ದಾರೆ. ಈ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಶಾಲೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಯುವತಿ ಮನೆಗೆ ಬಂದಿರಲಿಲ್ಲ, ರಮೇಶ್ ಹಾಗೂ ಇತರರು ಸ್ಕೂಲ್ ನಲ್ಲಿ ವಿಚಾರಿಸಿದಾದ ಶಾಲೆಗೆ ಯುವತಿ ಬಾರದ ಮಾಹಿತಿ ಸಿಕ್ಕಿತ್ತು, ಯುವಕರು ಮಗಳನ್ನು ಕರೆದುಕೊಂಡು ಹೋಗಿರುತ್ತಾರೆ ಎಂಬ ಅನುಮಾನದಲ್ಲಿ ತಮ್ಮಡಿಹಳ್ಳಿಯಲ್ಲಿರುವ ಯುವಕರ ಮಾವನ ಮನೆ ಬಳಿ ಹೋಗಿ ವಿಚಾರ ನಡೆಸಿದಾಗ, ಮನೆಯಲ್ಲಿ ಇದ್ದ ಸಣ್ಣ ಕರಿಯಮ್ಮ ಹಾಗೂ ಮಲ್ಲಿಕಾರ್ಜುನಯ್ಯ ಎಂಬುವವರು ಯುವತಿ ತಂದೆ ರಮೇಶ್ ಹಾಗೂ ತಾಯಿಗೆ ಅವಾಚ್ಯ ಶಬ್ದದಿಂದ ಬೈದು ಜಗಳವಾಡಿದ್ದಾರೆ. ಈ ವೇಳೆ ಎದೆ ಭಾಗಕ್ಕೆ ಬಲವಾಗಿ ಗುದ್ದಿದ್ದು ರಮೇಶ್ ಸಾವನಪ್ಪಿದ್ದಾನೆ.

Get real time updates directly on you device, subscribe now.

Comments are closed.

error: Content is protected !!