ಶಾಲೆಗಳತ್ತ ಖುಷಿಯಾಗಿ ಹೆಜ್ಜೆ ಹಾಕಿದ ಮಕ್ಕಳು

204

Get real time updates directly on you device, subscribe now.

ಕುಣಿಗಲ್‌: 19 ತಿಂಗಳ ನಂತರ ಕಿರಿಯ ಪ್ರಾಥಮಿಕ ಶಾಲೆಗಳು ಆರಂಭಗೊಂಡಿದ್ದು ಮಕ್ಕಳು ಉತ್ಸಾಹದಿಂದ ಮೂಲೆಗಿಟ್ಟಿದ್ದ ಬ್ಯಾಗ್‌ ಏರಿಸಿಕೊಂಡು ಹೊರಟರು.
ಸರ್ಕಾರಿ ಶಾಲೆಗಳು ಸೇರಿದಂತೆ ಖಾಸಗಿ ಶಾಲೆಗಳಲ್ಲೂ ಎರಡನೆ ಹಂತದ ಶಾಲೆ ಆರಂಭವನ್ನು ಹಬ್ಬದ ರೀತಿ ಸಂಭ್ರಮಿಸಲಾಯಿತು. ಮೊದಲೆ ಸೂಚನೆ ಸಿಕ್ಕಿದ್ದರಿಂದ ಸರ್ಕಾರದ ಮಾರ್ಗದರ್ಶನದಂತೆ ಶಾಲಾ ಕೊಠಡಿಗಳನ್ನು ಸೋಂಕು ನಿವಾರಕ ಬಳಸಿ ಶುಚಿಗೊಳಿಸಿ, ಶಾಲೆಗಳ ಸ್ವಚ್ಛತೆಗೆ ಕಳೆದ ಕೆಲವಾರು ದಿನಗಳಿಂದ ಗ್ರಾಮ ಪಂಚಾಯಿತಿ, ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಅಗತ್ಯ ಸಿದ್ಧತೆ ನಡೆಸಿದ್ದರು. ಶಾಲಾ ಪ್ರವೇಶ ದ್ವಾರಕ್ಕೆ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಪೋಷಕರೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಿಟ್ಟು ಹೋಗಿದ್ದು ವಿಶೇಷವಾಗಿತ್ತು. ಕೆಲವಾರು ತಿಂಗಳಿನಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ ಖಾಸಗಿ ಶಾಲೆಗಳ ನೂರಾರು ಬಸ್‌ನ ಸಿಬ್ಬಂದಿ ಮೊಗದಲ್ಲಿ ಮಂದಹಾಸ ಮೂಡಿತ್ತು. ಕೆಲ ಶಾಲೆಗಳಲ್ಲಿ ಮಕ್ಕಳಿಗೆ ನೋಟ್ ಪುಸ್ತಕ, ಲೇಖನ ಸಾಮಾಗ್ರಿ ನೀಡಿ ಸ್ವಾಗತಿಸಿದರೆ, ಇನ್ನು ಕೆಲ ಶಾಲೆಗಳಲ್ಲಿ ಹೂವು ನೀಡುವ ಮೂಲಕ ಸ್ವಾಗತಿಸಲಾಯಿತು. ತಾಲೂಕಿನಲ್ಲಿ ಎಲ್ಲಾ ಕಿರಿಯ ಪ್ರಾಥಮಿಕ ಶಾಲೆಗಳು ಕಾರ್ಯಾರಂಭ ಮಾಡಿದ್ದವು.

Get real time updates directly on you device, subscribe now.

Comments are closed.

error: Content is protected !!