ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ

142

Get real time updates directly on you device, subscribe now.

ಕುಣಿಗಲ್‌: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ವಿವಿಧ ಸಂಘಟನೆಗಳು ಸೋಮವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಗುಡ್ಡಯ್ಯ ಮಾತನಾಡಿ, ತಾಲೂಕಿನ ಹೇಮಾವತಿ ನೀರಿನ ಪಾಲು ಬೇರೆ ತಾಲೂಕಿನ ಪಾಲಾಗುತ್ತಿದೆ. ಯಾವುದೇ ರಾಜಕಾರಣಿಗಳು ಚಕಾರ ಎತ್ತದೆ ನೀರಿನ ವಿಷಯದಲ್ಲಿ ತಾಲೂಕಿಗೆ ಅನ್ಯಾಯ ಮಾಡುತ್ತಿದ್ದಾರೆ. ಸಮರ್ಪಕ ಅವಧಿಯಲ್ಲಿ ನೀರಾವರಿ ಯೋಜನೆ ರೂಪಿಸದೆ, ಸಮರ್ಪಕ ಪ್ರಮಾಣದ ನೀರು ಹರಿಸದೆ ಹೇಮಾವತಿ ಹೆಸರಲ್ಲಿ ಬರೀ ಗುತ್ತಿಗೆ ಕಾಮಗಾರಿಗೆ ಮೀಸಲು ಮಾಡಿದ್ದಾರೆ. ತಾಲೂಕು ಕಚೇರಿಯಲ್ಲಿ ರೈತರ ಕೆಲಸ ನಿಗದಿತ ಅವಧಿಯಲ್ಲಿ ಆಗುತ್ತಿಲ್ಲ, ಪ್ರಭಾವಿ ವ್ಯಕ್ತಿಗಳದ್ದಾದರೆ ಅಧಿಕಾರಿಗಳೇ ಅವರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಿಕೊಟ್ಟು ಬರುತ್ತಿದ್ದಾರೆ, ಬಡ ರೈತರು ಪರದಾಡುವಂತಾಗಿದೆ ಎಂದರು.
ಜಿಲ್ಲಾಧ್ಯಕ್ಷ ಯೋಗೇಶಗೌಡ ಮಾತನಾಡಿ, ತಾಲೂಕಿನಲ್ಲಿ ಗೋಮಾಳಕ್ಕೆ ಜಾಗ ಮೀಸಲು ಇಡಬೇಕು, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಉಳುಮೆ ಚೀಟಿ ನೀಡಿ, ಪೋಡಿ ಮಾಡಬೇಕು, ಯಶಸ್ವಿನಿ ಯೋಜನೆ ಪುನರ್‌ ಆರಂಭಿಸಬೇಕು, ಸಾರ್ವಜನಿಕ ಆಸ್ಪತ್ರೆಯನ್ನು ಸುಸಜ್ಜಿತ ಆಸ್ಪತ್ರೆಯನ್ನಾಗಿಸಲು ಕ್ರಮ ಕೈಗೊಳ್ಳಬೇಕು, ರಾಗಿ ಬೆಳೆಗೆ ಕ್ವಿಂಟಾಲ್ ಗೆ 4800 ಬೆಂಬಲ ಬೆಲೆ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕು, ರೈತರು ಬೆಳೆದ ಉತ್ಪನ್ನಗಳ ಮಾರಾಟ ಮಾಡಲು ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣ ಮಾಡಬೇಕು, ರೇಷ್ಮೆಗೂಡಿಗೆ ಕೆಜಿಗೆ 600 ರೂ. ದರ ನಿಗದಿ ಮಾಡಬೇಕು, ರೈತರು ಬಳಸುವ ಕೃಷಿ ಯಂತ್ರಗಳ ಸಬ್ಸಿಡಿ ಹಣ ರೈತರ ಖಾತೆಗೆ ಜಮೆಯಾಗುವಂತೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಲಿಂಗರಾಜು, ಛಾಯದೇವಮ್ಮ, ಶಾಂತಕುಮಾರಿ, ವೆಂಕಟೇಶ, ಕೃಷ್ಣಪ್ಪ, ಗಿರೀಶ, ರಾಜೇಶ, ಜಗದೀಶ್‌, ಶಿವಣ್ಣ, ರಮೇಶ, ದಲಿತ ನಾರಾಯಣ ಇತರರು ಇದ್ದರು. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!