ಗೋಡೆ ಕುಸಿದು ಕುರಿಗಳ ಸಾವು

351

Get real time updates directly on you device, subscribe now.

ಹುಳಿಯಾರು: ಭಾರಿ ಮಳೆಯಿಂದ ಗೋಡೆ ಕುಸಿದು ಬಿದ್ದ ಪರಿಣಾಮ ಎರಡು ಕುರಿ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಕಾರೆಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕಾರೆಹಳ್ಳಿ ನಿಂಗರಾಜ ಅವರಿಗೆ ಸೇರಿದ ಕುರಿ ಸಾವನ್ನಪ್ಪಿವೆ, ನಿರಂತರವಾಗಿ ಐದಾರು ದಿನಗಳಿಂದ ಮಳೆ ಸುರಿದ ಪರಿಣಾಮ ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದಿದೆ, ಪರಿಣಾಮ ಮನೆಯೊಳಗಿದ್ದ ಕುರಿ ಸಾವನ್ನಪ್ಪಿವೆ.
ಬದುಕು ಕಟ್ಟಿಕೊಳ್ಳಲು ಉಪಕಸುಬಾಗಿ ಕುರಿ ಸಾಕಾಣಿಕೆ ಮಾಡುತ್ತಿದ್ದ ನಿಂಗರಾಜು ಅವರಿಗೆ ಕುರಿಗಳ ಸಾವು ಭರಿಸಲಾಗದ ನಷ್ಟವಾಗಿದೆ. ಪಶು ಇಲಾಖೆಯು ಸರ್ಕಾರದ ಅನುಗ್ರಹ ಯೋಜನೆಯಲ್ಲಿ ಪರಿಹಾರ ಕೊಡಿಸುವಂತೆ ಲಿಂಗರಾಜು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!