ಪಾರ್ಕ್‌ ಅಭಿವೃದ್ಧಿಗೆ ನಿರ್ಲಕ್ಷ್ಯ- ಸದಸ್ಯರ ಆಕ್ರೋಶ

190

Get real time updates directly on you device, subscribe now.

ಕುಣಿಗಲ್‌: ಪುರಸಭೆ ಪಾರ್ಕ್‌ ಅಭಿವೃದ್ಧಿಗೊಳಿಸುವಂತೆ ಪ್ರತಿಭಟನೆ ಮಾಡಿ ಮನವಿ ನೀಡಿದ್ದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ನಾಗಣ್ಣ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಪುರಸಭೆಯ ನೂತನ ಸಭಾಂಗಣದಲ್ಲಿ ಅಧ್ಯಕ್ಷ ನಾಗೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭಕ್ಕೆ ಪ್ರತಿಭಟನೆ ಮಾಡಿ ಮನವ ನೀಡಿದ್ದರೂ ಪಾರ್ಕ್‌ ಸ್ವಚ್ಛಗೊಳಿಸಿಲ್ಲ, ಪಟ್ಟಣದ ಜನತೆಗೆ ಪುರಸಭೆ ಪೂರೈಕೆ ಮಾಡಲಾಗುತ್ತಿರುವ ನೀರು ಕಲುಷಿವಾಗಿ ಜನ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ, ಆದರೆ ಅಧಿಕಾರಿಗಳು ಏನು ಮಾಡುತ್ತಿಲ್ಲ ಎಂದರು.
ಇದಕ್ಕೆ ಸಹಮತ ಸೂಚಿಸಿದ ಸದಸ್ಯೆ ಜಯಲಕ್ಷ್ಮೀ, ಆಸ್ಮ ಪರಿಸರ ವಿಭಾಗ, ಕುಡಿಯುವ ನೀರು ವಿಭಾಗ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.
ಮುಖ್ಯಾಧಿಕಾರಿ ರವಿಕುಮಾರ ಪ್ರತಿಕ್ರಿಯಿಸಿ ಸಿಬ್ಬಂದಿ ಕೊರತೆ ಇದ್ದರೂ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರು ಪೂರೈಕೆ ತಪಾಸಣೆ ಮಾಡಿಸಲಾಗಿದೆ ಎಂದರು. ಸದಸ್ಯರು ವರದಿ ಕೇಳಿದಾಗ ಅಧಿಕಾರಿಗಳು ತರಿಸುವ ಸಬೂಬು ಹೇಳಿದರು.
ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಆಸ್ತಿ ತೆರಿಗೆ ವಿಪರೀತವಾಗಿ ಏರಿಕೆಯಾಗಿದ್ದು, ಖಾಲಿ ನಿವೇಶನಕ್ಕೆ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವ ನಿರ್ಣಯ ಕೈಗೊಂಡಿದ್ದು ಇದಕ್ಕೆ ಸಂಬಂಧಿಸಿದ ದಾಖಲೆ ಮಂಡಿಸುವಂತೆ ಸದಸ್ಯರಂಗಸ್ವಾಮಿ ಒತ್ತಾಯಿಸಿದರು. ಅಧಿಕಾರಿಗಳು ನಿರ್ಣಯ ಅಂಗೀಕರಿಸಿ ಮೇಲಾಧಿಕಾರಿಗಳಿಗೆ ಕಳಿಸಲಾಗಿದೆ ಎಂದಿದ್ದು, ದಾಖಲೆ ಮಂಡಿಸದ ಬಗ್ಗೆ ಸದಸ್ಯರಾದ ರಂಗಸ್ವಾಮಿ, ಅರುಣ್ ಕುಮಾರ್‌, ಶ್ರೀನಿವಾಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸದಸ್ಯರು ನಿರ್ಣಯ ಬರೆಸಿದರು ಅದರ ಅನುಪಾಲನೆ ಮಾಡದ ಮೇಲೆ ಸಭೆಗೆ ಏಕೆ ಬರಬೇಕು ಎಂದರು. ಇದಕ್ಕೆ ಅಸಹಾಯಕತೆ ವ್ಯಕ್ತಪಡಿಸಿದ ಅಧ್ಯಕ್ಷ ನಾಗೇಂದ್ರ, ತಾವು ಹೇಳಿದರೂ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ, ಅಧಿಕಾರಿಗಳು ಏನು ಮಾಡೋದು ಎಂದರು.
ಪಟ್ಟಣದಲ್ಲಿ ಇ-ಖಾತೆ ಮಾಡಲು ವಿಳಂಬ ಮಾಡುತ್ತಿರುವ ಬಗ್ಗೆ ಸದಸ್ಯ ಶ್ರೀನಿವಾಸ ಮಾತನಾಡಿ, ಪುರಸಭೆ ಆಸ್ತಿ ಅತಿಕ್ರಮಣ ಮಾಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸದಸ್ಯೆ ಜಯಲಕ್ಷ್ಮೀ, ಪುರಸಭೆಯ ಹಿಂದಿನ ಸಭಾಂಗಣದಲ್ಲಿ ಉತ್ತಮ ಗುಣಮಟ್ಟದ ಪೀಠೋಪಕರಣಗಳ ಸಮರ್ಪಕ ನಿರ್ವಹಣೆ ಮಾಡದ ಬಗ್ಗೆ ಸದಸ್ಯ ಅರುಣಕುಮಾರ್‌, 11ನೇ ವಾರ್ಡ್ ನ ಕೆಲ ಪ್ರದೇಶವನ್ನು ಸ್ಲಂಬೋರ್ಡ್ ಗೆ ಸೇರಿಸುವಂತೆ ನಿರ್ಣಯ ಕೈಗೊಂಡಿದ್ದರೂ ಕ್ರಮವಾಗದ ಬಗ್ಗೆ ಸದಸ್ಯ ರಂಗಸ್ವಾಮಿ, 22ನೇ ವಾರ್ಡ್ ನಲ್ಲಿ ಅಂಗನವಾಡಿ, ಲೈಬ್ರರಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವ ಬಗ್ಗೆ ನಿರ್ಣಯವಾದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ಧೋರಣೆ ಬಗ್ಗೆ ಸದಸ್ಯರು ತೀವ್ರ ವಾಗ್ವಾದ ನಡೆಸಿದರು.
ಪುರಸಭೆಯ ವಿವಿಧ ವಾರ್ಡ್ ಗಳಲ್ಲಿನ ಪುರಸಭೆ ಜಾಗ ರಕ್ಷಣೆ ನಿಟ್ಟಿನಲ್ಲಿ ಜಾಗ ಗುರುತಿಸದಿರುವ ಬಗ್ಗೆ ಚರ್ಚೆ ನಡೆದು, ಮುಖ್ಯಾಧಿಕಾರಿ ರವಿಕುಮಾರ್‌ ಮುಂದಿನ ಸಭೆಯಲ್ಲಿ ಸಂಪೂರ್ಣ ವಿವರ ಮಂಡಿಸುವ ಭರವಸೆ ನೀಡಿದರು. ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!