ಕುಣಿಗಲ್: 21 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡ ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವ ಹಳೆ ರಾಷ್ಟ್ರೀಯ ಹೆದ್ದಾರಿ 48 ಮುಖ್ಯರಸ್ತೆ ಸಂಪೂರ್ಣ ಗುಂಡಿಗಳಿಂದ ತುಂಬಿದ್ದು, ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಿ ಗುಂಡಿ ಮುಚ್ಚುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಕಳೆದ ನಾಲ್ಕು ವರ್ಷದ ಹಿಂದೆ ಹಳೆ ರಾಷ್ಟ್ರೀಯ ಹೆದ್ದಾರಿ 48 ಯನ್ನು ಪಟ್ಟಣದ ನಾಗರಿಕರ ಮೂರು ದಶಕಗಳ ಹೋರಾಟದ ನಂತರ ಅಭಿವೃದ್ಧಿಗೊಳಸಲಾಗಿತ್ತು, ಇತ್ತೀಚೆಗೆ ಬಿದ್ದ ಬಾರಿ ಮಳೆಗೆ ಪಟ್ಟಣದ 1, 2, 3, 18, 12, 11, 19, 20, 21, 22, 23 ವಾರ್ಡ್ ಗೆ ಹೊಂದಿಕೊಂಡಂತೆ ಹಾದು ಹೋಗಿರುವ ಬಿ.ಎಂ.ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಾಗಿದ್ದು, ಬೈಕ್ ಸವಾರರು, ಆಟೋ ಚಾಲಕರು ಪರದಾಡುವಂತಾಗಿ ಸಾಕಷ್ಟು ಪ್ರಾಣಾಂತಿಕ ಅಪಘಾತ ಸಂಭವಿಸುತ್ತಿದ್ದು, ವಾಹನ ಸವಾರರು ಅಂಗವೈಕಲ್ಯಕ್ಕೆ ಗುರಿಯಾಗಿ, ಜನರು ಪರದಾಡುವಂತಾಗಿದ್ದಾರೆ. ಬಿ.ಎಂ.ರಸ್ತೆಯು ಲೋಕೋಪಯೋಗಿ ಇಲಾಖೆಯ ಅಧೀನದಲ್ಲೆ ಇದ್ದರೂ ರಸ್ತೆ ನಿರ್ವಹಣೆಯ ಹೊಣೆ ಪುರಸಭೆಗೆ ವಹಿಸಲಾಗಿದೆ. ರಸ್ತೆ ಗುಂಡಿ ಮುಚ್ಚುವ ಬಗ್ಗೆ ಎರಡೂ ಇಲಾಖೆಯವರು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವ ಕಾರಣ ಜನರು ಪರದಾಡುವಂತಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಕೆ.ರಮೇಶ್ ಆರೋಪಿಸಿದ್ದಾರೆ. ಶಾಸಕರು, ವಿರೋಧ ಪಕ್ಷದ ಜೆಡಿಎಸ್, ಬಿಜೆಪಿ ಮುಖಂಡರು ದಿನಾಲೂ ಇದೆ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ರಸ್ತೆ ದುರಸ್ತಿ ಬಗ್ಗೆ ಗಮನ ಹರಿಸದೆ ಇರುವುದು ನಿಜಕ್ಕೂ ಖೇದಕರ ಎಂದು ಯುವಕ ಶಿವು ಖಂಡಿಸಿದ್ದಾರೆ. ಮತ್ತಷ್ಟು ಅಪಘಾತ ಸಂಭವಿಸಿ ಯಾವುದೇ ಸಾವು ನೋವು ಆಗದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಅಗತ್ಯ ಕ್ರಮಕೈಗೊಂಡು ರಸ್ತೆಗುಂಡಿ ಮುಚ್ಚಿಸಿ ಕರ್ತವ್ಯಬದ್ಧತೆ ಮೆರೆಯೆಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿ ಮುಚ್ಚಿ
Get real time updates directly on you device, subscribe now.
Comments are closed.