ಪ್ರತಿ ಮನೆ ಮನೆಯಲ್ಲೂ ಪುಸ್ತಕ ಭಂಡಾರ ತೆರೆಯಿರಿ:ಎಚ್.ಎನ್.ಕೆ

226

Get real time updates directly on you device, subscribe now.

ಮಂಚೇನಹಳ್ಳಿ: ತಾಲ್ಲೂಕು ಚುಸಾಪ ಘಟಕದ ವತಿಯಿಂದ ಮಂಚೇನಹಳ್ಳಿ ಬಳಿಯ ಹನುಮಂತಪುರದಲ್ಲಿ ಹಳ್ಳಿಗೊಂದು ಕನ್ನಡ ಕಾರ್ಯಕ್ರಮ ಏರ್ಪಡಿಸಿದ್ದು, ನಿವೃತ್ತ ಪ್ರಾಂಶುಪಾಲ ಸಾ.ನಾ.ಲಕ್ಷ್ಮಣ ಗೌಡ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ಉಳಿಯಬೇಕಿದೆ, ಉಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಎಚ್.ಎನ್. ಕಿರಣ್ ಕುಮಾರ್ ಮಾತನಾಡಿ, ಹಲವು ದಶಕಗಳಿಂದ ಈ ಕಾಲಘಟ್ಟದವರೆಗೂ ಭಾಷೆ ಸಮೃದ್ಧವಾಗಿ ಬೆಳದಿದೆ, ಇಂದಿನ ಯುವಕರು ಜಗತ್ತಿನ ವಿದ್ಯಮಾನಗಳನ್ನು ಕಣ್ಣರಳಿಸಿ ನೋಡಬೇಕಿದೆ. ಆಫ್ಘನ್ ನಲ್ಲಿ ತಾಲಿಬಾನ್ ನಡೆಸಿದ ಅಟ್ಟಹಾಸ ಒಳ್ಳೆಯ ಬೆಳವಣಿಗೆ ಅಲ್ಲ. ಅಕ್ಷರ ಜ್ಞಾನದಿಂದ ಇವೆಲ್ಲವನ್ನೂ ತಿಳಿಯ ಬಹುದಾಗಿದ್ದು, ಅನಕ್ಷರಸ್ಥ ನಿಗಿಂತ ಅಕ್ಷರಸ್ಥ ವಿಭಿನ್ನ ವಾಗಿ ಯೋಚಿಸಬಲ್ಲ, ಇಂದು ಜಗತ್ತಿಗೆ ಮಾನವೀ ಯ ಸ್ಪರ್ಷದ ಮುಲಾ ಮು ಹಚ್ಚಬೇಕಿದೆ, ಜೊತೆಗೆ ಪ್ರತಿ ಮನೆಯಲ್ಲಿ ಯೂ ಒಂದು ಪುಸ್ತಕ ಭಂಡಾರ ಇಟ್ಟುಕೊ ಳ್ಳುವ ಹವ್ಯಾಸ ಬೆಳಸಿಕೊಳ್ಳಲು ಸಲಹೆ ನೀಡಿದರು.
ಸಾಹಿತಿ ಎಂ.ಆರ್ ನಾಗರಾಜ ರಾವ್ ಮಾತನಾಡಿ, ವಿದ್ಯಾರ್ಥಿಗಳು ಪುಟ್ಟ ಕವನಗಳನ್ನು ಬರೆಯುವ ಮೂಲಕ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ತಿಳಿಸಿದರು. ಪ್ರಗತಿ ಪರ ರೈತರಾದ ನಾರಾಯಣ ಗೌಡ ಮಾತನಾಡಿ, ಬೇರೆಯ ರಾಜ್ಯದಲ್ಲಿನ ಕನ್ನಡ ಪ್ರೀತಿಯನ್ನು ಉದಾಹರಣೆಯೊಂದಿಗೆ ತಿಳಿಸಿದರು.
ಚುಸಾಪ ಅಧ್ಯಕ್ಷೆ ಪ್ರಭಾನಾರಾ ಯಣಗೌಡ ಮಾತನಾಡಿ, ಹಳ್ಳಿಯಲ್ಲಿ ಇಂತಹ ಕನ್ನಡ ಕಾರ್ಯಕ್ರಮ ನಡೆಯುತ್ತಿರುವುದು, ಸಂತೋಷದ ಸಂಗತಿ ಎಂದರು. ಜಿಕೆವಿಕೆ ಮಕ್ಕಳು ಸ್ವರಚಿತ ಕವನ ವಾಚಿಸಿದರು, ಚುಸಾಪದಿಂದ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಹಾಲು ಉತ್ಪಾದಕ ಸಂಘದ ಅಧ್ಯಕ್ಷರು, ಗ್ರಾಮದ ಹಿರಿಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!