ಯೋಜನೆಯ ರೂಪುರೇಷೆ ಬದಲಾದರೇ ಪ್ರತಿಭಟನೆ: ಪರಂ ಎಚ್ಚರಿಕೆ

ಕೊರಟಗೆರೆ ರೈತರಿಗೆ ಎತ್ತಿನಹೊಳೆ ಯೋಜನೆ ವರದಾನ

262

Get real time updates directly on you device, subscribe now.

ಕೊರಟಗೆರೆ: ಬಯಲುಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರಕ್ಕೆ ಎತ್ತಿನಹೊಳೆ ಯೋಜನೆ ವರದಾನ, ರಾಜ್ಯ ಸರಕಾರ ಪರಿಹಾರದ ನೆಪವೊಡ್ಡಿ ಸ್ಥಳಾಂತರ ಮಾಡುವ ಹುನ್ನಾರ ಮಾಡಿದರೆ ರೈತರ ಜೊತೆಗೂಡಿ ಹೋರಾಟ ಮಾಡುತ್ತೇನೆ ಎಂದು ಶಾಸಕ ಡಾ.ಜಿ.ಪರಮೇಶ್ವರ್‌ ಎಚ್ಚರಿಕೆ ನೀಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿ ತುಂಬಾಡಿ ಹೊಸಕೆರೆ, ಮಲ್ಲೇಕಾವು ಮತ್ತು ಚೆನ್ನಸಾಗರ ಚೆಕ್ ಡ್ಯಾಂಗಳಿಗೆ ಬುಧವಾರ ಗಂಗಾಪೂಜೆ ಮತ್ತು ಬಾಗಿನಾ ಅರ್ಪಿಸಿ ಮಾತನಾಡಿ, ಬಯಲುಸೀಮೆ ರೈತಾಪಿ ವರ್ಗದ ನೀರಿನ ಬವಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಯನ್ನು 13 ಸಾವಿರದ 500 ಕೋಟಿ ವೆಚ್ಚದಲ್ಲಿ ಪ್ರಾರಂಭವಾಗಿದೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನಾನು ಡಿಸಿಎಂ ಆಗಿದ್ದಾಗ ಸಮಾನ ಪರಿಹಾರಕ್ಕೆ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.
ಕೊರಟಗೆರೆ ಕ್ಷೇತ್ರದ ಚನ್ನರಾಯನದುರ್ಗ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮಾತ್ರ ಮಳೆಯಾಗಿದೆ, ಇನ್ನುಳಿದ ಕೋಳಾಲ ಮತ್ತು ಹೊಳವನಹಳ್ಳಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಿದೆ, ಪ್ರಾಕೃತಿಕ ಅಸಮತೋಲನ ಸಮಸ್ಯೆಯನ್ನು ನಾವೆಲ್ಲರೂ ಎದುರಿಸಬೇಕಿದೆ, ಮಳೆಯಿಂದ ಕೆರೆಕಟ್ಟೆ ತುಂಬಿದರೆ ಮಾತ್ರ ರೈತನ ಮುಖದಲ್ಲಿ ಸಂತಸ ಕಾಣಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ನಾಹಿದಾ, ತಾಪಂ ಇಓ ದೊಡ್ಡಸಿದ್ದಪ್ಪ, ಸಣ್ಣ ನೀರಾವರಿ ಎಇ ರಮೇಶ್‌, ತುಂಬಾಡಿ ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷ ಪ್ರಸನ್ನಕುಮಾರ್‌, ಕೆಪಿಸಿಸಿ ಕಾರ್ಯದರ್ಶಿ ದಿನೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರಕೆರೆ ಶಂಕರ್‌, ಅಶ್ವತ್‌ ನಾರಾಯಣ್‌, ಯುವಾಧ್ಯಕ್ಷ ವಿನಯ್‌, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರಾದ ಲಕ್ಷ್ಮೀಶ್‌, ಎಂಎನ್‌ಜೆ ಮಂಜುನಾಥ, ಕಿರಣಕುಮಾರ್‌, ಅರವಿಂದ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!