ಅಲೆಮಾರಿಗಳ ಸಮಸ್ಯೆ ನಿವಾರಣೆಗೆ ಐಕ್ಯತಾ ಸಮಾವೇಶ

152

Get real time updates directly on you device, subscribe now.

ಕುಣಿಗಲ್‌: ಪ.ಜಾತಿ, ಪ.ಪಂಗಡ ಅಲೆಮಾರಿಗ ಜನಾಂಗದವರು ಎದುರಿಸುತ್ತಿರುವ ಸಮಸ್ಯೆಗಳ ಪರಿಣಾಮಕಾರಿ ನಿವಾರಣೆ ನಿಟ್ಟಿನಲ್ಲಿ ಚರ್ಚಿಸಲು ಐಕ್ಯತಾ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ತಾಲೂಕು ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಅಧ್ಯಕ್ಷ ಆನಂದ್‌ ಅಲೆಮಾರಿ ಹೇಳಿದರು.
ಕುಣಿಗಲ್‌ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಎಸ್ಸಿ, ಎಸ್ಟಿ, ಅಲೆಮಾರಿ ಸಮುದಾಯಗಳ ಸಭೆ ಕರೆಯಲಾಗಿದ್ದು ತಾಲೂಕಿನ ಎಸ್ಸಿ, ಎಸ್ಟಿ, ಅಲೆಮಾರಿಗಳ ಸಮುದಾಯಗಳ ಪ್ರಮುಖರ ಸಭೆಯಲ್ಲಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಗಳಾದ ಕೊರಮ, ಸಿಳ್ಳೆಕ್ಯಾತ, ದೊಂಬರ, ಹಂದಿಜೋಗಿ ಸಮುದಾಯಗಳಿಂದ ತಾಲೂಕಿನಲ್ಲಿ ಸುಮಾರು ಎಂಟು ಸಾವಿರ ಜನಸಂಖ್ಯೆ ಇದೆ, ನಮ್ಮ ಸಮುದಾಯಗಳು ಸ್ವತಂತ್ರ ಬಂದು ಸುಮಾರು 70 ವರ್ಷಗಳೇ ಕಳೆದರೂ ಮೂಲಭೂತ ಸೌಕರ್ಯ ಕಾಣದೆ, ಅವಕಾಶಗಳಿಂದ ವಂಚಿತರಾಗಿ ಅಲೆಮಾರಿಗಳಾಗಿ ಜೀವನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯಗಳು ಸಂಘಟಿತವಾಗಿ ಹೋರಾಟ ಮಾಡುವ ಅಗತ್ಯತೆ ಇದೆ, ಈ ನಿಟ್ಟಿನಲ್ಲಿ ಮೊದಲು ಜನಾಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿವಾರಿಸಬೇಕೆಂದು ಚರ್ಚಿಸಲು ಐಕ್ಯತಾ ಸಮಾವೇಶ ಸಹಕಾರಿಯಾಗಲಿದೆ ಎಂದರು.
ಮಹಾಸಭಾದ ಖಜಾಂಚಿ ಸುರೇಶ್‌, ಕಾರ್ಯದರ್ಶಿ ರವಿಕುಮಾರ್‌, ಕಾರ್ಯಾಧ್ಯಕ್ಷ ಲಕ್ಷ್ಮಿ ನರಸಿಂಹ, ಉಪಾಧ್ಯಕ್ಷರಾದ ಮಾರುತಿ, ಗಿರೀಶ್‌, ಭರತ್‌, ಕಾಂತರಾಜು ಹಾಗೂ ಗಂಗವೆಂಕಟಣ್ಣ, ಸ್ವಾಮಿ, ಪುತ್ತರಾಜಣ್ಣ ಹಾಗೂ ಸಮುದಾಯದ ಮುಖಂಡರು ಇತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!