ಗುಬ್ಬಿ: ಹಾಗಲವಾಡಿ ಕೆರೆಗೆ ನೀರು ಹಾದುಹೋಗುವ ನಾಲೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ಮುಂದಿನ ತಿಂಗಳ 15 ರೊಳಗೆ ಕೆಲಸ ಮುಗಿಯುತ್ತದೆ, ನಂತರ ಅಲ್ಲಿಗೂ ನೀರು ಹರಿಸಲಾಗುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಗಂಟೆಪಾಳ್ಯ ಹಾಗೂ ಬ್ಯಾಡಗೆರೆಯ ಆಜಮ್ಮನಹಳ್ಳಿ ಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಗಂಗಾಪೂಜೆ ನೆರವೇರಿಸಿ ಮಾತನಾಡಿ, ಬಹುತೇಕ ತಾಲ್ಲೂಕಿನ ಎಲ್ಲಾ ಕೆರೆಗಳು ತುಂಬಿರುವುದರಿಂದ ರೈತರಿಗೆ ಅನುಕೂಲವಾಗಿದೆ, ಹೇಮಾವತಿ ನಾಲೆಯಲ್ಲಿ ನೀರು ಹರಿಯುತ್ತಿದ್ದು, ಈ ಬಾರಿ ಹೆಚ್ಚಿನ ಮಳೆ ಬಿದ್ದ ಕಾರಣ ಸಾಕಷ್ಟು ಕೆರೆಗಳು ತುಂಬಿವೆ ಎಂದ ಅವರು ರಾಜಕೀಯ ಎಂದ ಮೇಲೆ ಹೋಗುವವರು ಹೋಗುತ್ತಿರುತ್ತಾರೆ ಬರುವವರು ಬರುತ್ತಿರುತ್ತಾರೆ, ಆದರೆ ನಮ್ಮ ಕಾರ್ಯಕರ್ತರು ನಮ್ಮ ಮುಖಂಡರು ಯಾವಾಗಲೂ ನನ್ನ ಜೊತೆಯಲ್ಲಿದ್ದು, ಅವರು ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದೇ ರೀತಿ ನಾನು ನಡೆದು ಕೊಳ್ಳುತ್ತೇನೆ, ನಾನು ಯಾವತ್ತೂ ಯಾರನ್ನೂ ಕೂಡ ದ್ವೇಷ ಮಾಡಿಲ್ಲ, ನನಗೆ ಎಲ್ಲರೂ ಬೇಕು ಎಂದರು.
ದೇವೇಗೌಡರು ಗುಬ್ಬಿಗೆ ಬರುತ್ತಾರೆ, ಪ್ರವಾಸಿ ಮಂದಿರದಲ್ಲಿ ಮಾತನಾಡಬಹುದು ಎಂದುಕೊಂಡಿದ್ದೆ, ಆದರೆ ಅವರು ಗುಬ್ಬಿಗೆ ಬರಲೇ ಇಲ್ಲ ನಾನು ತುಮಕೂರು ಕಡೆಗೆ ಹೋಗುವುದಕ್ಕೆ ನನ್ನ ಕಚೇರಿಯಲ್ಲಿ ಸಾಕಷ್ಟು ಸಾರ್ವಜನಿಕರು ಇದ್ದ ಕಾರಣ ತುಮಕೂರು ಕಡೆ ತೆರಳಲು ಸಾಧ್ಯವಾಗಲಿಲ್ಲ ಎಂದರು.
ಹಲವು ಬಾರಿ ನಾನೇ ಮೇಲೆ ಬಿದ್ದು ಕುಮಾರಸ್ವಾಮಿ ಅವರ ಮನೆಗೆ ತೆರಳಿದ್ದೇನೆ, ಮಾತನಾಡಲಿಲ್ಲ ಅಂದಮೇಲೆ ನಾನು ಏನು ಮಾಡಲಿ, ನನಗೆ ಯಾವುದೇ ಮಾಹಿತಿ ಇಲ್ಲದೆ ನನ್ನ ಕ್ಷೇತ್ರದಲ್ಲಿಯೇ ಸಮಾವೇಶ ಮಾಡುತ್ತಾರೆ ಎಂದ ಮೇಲೆ ಬಹುತೇಕ ಅವರಿಗೆ ನಾನು ಪಕ್ಷದಲ್ಲಿ ಇರುವುದು ಇಚ್ಛೆಯಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್, ಹೇರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ವೆಂಕಟೇಶ್, ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಮಂಜುನಾಥ್, ರಮೇಶ್, ಮುಖಂಡರಾದ ಸುರೇಶ, ಲೋಕೇಶ್, ಮುಖಂಡರಾದ ಶಿವಣ್ಣ, ರಾಜಣ್ಣ ಇನ್ನಿತರರು ಹಾಜರಿದ್ದರು.
ನನಗೆ ಮಾಹಿತಿ ನೀಡದೆ ನನ್ನ ಕ್ಷೇತ್ರದಲ್ಲೇ ಸಮಾವೇಶ ಮಾಡಿದ್ರು: ಶ್ರೀನಿವಾಸ್
ಮನೆಗೆ ಹೋಗಿ ಮಾತಾಡ್ಸಿದ್ರು ಹೆಚ್‌ಡಿಕೆ ಮಾತಾಡ್ಲಿಲ್ಲ
Get real time updates directly on you device, subscribe now.
Next Post
Comments are closed.