ಕನ್ನಡ ಭಾಷೆ ನಮ್ಮೆಲ್ಲರ ಜೀವನಾಡಿ: ತಹಶೀಲ್ದಾರ್

399

Get real time updates directly on you device, subscribe now.

ಕುಣಿಗಲ್‌: ಮಾತಾಡ್‌ ಮಾತಾಡ್‌ ಕನ್ನಡ ಸರಣಿ ಕಾರ್ಯಕ್ರಮದ ಅಂಗವಾಗಿ ತಾಲೂಕು ಆಡಳಿತದ ವತಿಯಿಂದ ಪ್ರಮುಖ ಕನ್ನಡ ಗೀತ ಗಾಯನ ಕಾರ್ಯಕ್ರಮ ಪಟ್ಟಣದ ಮಹಾತ್ಮಗಾಂಧಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಯಿತು.
ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂರು ಗೀತೆಗಳ ಮುದ್ರಿತ ಪ್ರತಿ ನೀಡಿ ಏಕಕಾಲದಲ್ಲಿ ಹಾಡಲಾಯಿತು. ಮಕ್ಕಳೊಂದಿಗೆ ತಹಶೀಲ್ದಾರ್‌ ಮಹಾಬಲೇಶ್ವರ, ಬಿಇಒ ತಿಮ್ಮರಾಜಯ್ಯ, ಕೃಷಿ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ ಇತರೆ ಅಧಿಕಾರಿಗಳು ಹಾಡುವ ಮೂಲಕ ಮಕ್ಕಳಲ್ಲಿ ಕನ್ನಡ ಭಾಷಾ ಗೀತೆಯ ಪ್ರಾಮುಖ್ಯತೆ ಮನವರಿಕೆ ಮಾಡಿಕೊಟ್ಟರು.
ಮೂರೂ ಗೀತೆಗಳ ಗಾಯನದ ನಂತರ ಮಕ್ಕಳಿಗೆ ಶುಭಕೋರಿ ಮಾತನಾಡಿದ ತಹಶೀಲ್ದಾರ್‌ ಮಹಾಬಲೇಶ್ವರ, ಕನ್ನಡ ಭಾಷೆ ಬರಿ ಭಾಷೆಯಲ್ಲ ಅದು ಕನ್ನಡಿಗರ ಜೀವನಾಡಿ, ಬದುಕು, ಜೀವನ ಬೆಸೆಯುವ ಮಾಧ್ಯಮವಾಗಿದೆ. ಸರ್ಕಾರ ಈ ಬಾರಿ ಕನ್ನಡಮ್ಮನ ಹಬ್ಬವನ್ನು ನವೆಂಬರ್‌ ಮಾಹೆಯ ಮುಂಚಿತವಾಗಿ ಒಂದು ವಾರ ಕನ್ನಡಿಗರನ್ನು ಬೆಸೆಯುವ, ನಾಡುನುಡಿ ವೈಭವೀಕರಿಸುವ ಹಾಡುಗಳನ್ನು ಏಕಕಾಲದಲ್ಲಿ ಹಾಡುವ ಮೂಲಕ ಸರ್ವರಲ್ಲೂ ಕನ್ನಡತನ ಜಾಗೃತಗೊಳಿಸುವ ಮಹತ್ತರ ಕಾರ್ಯ ಹಮ್ಮಿಕೊಂಡಿದೆ. ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ ಕನ್ನಡಿಗರು ಒಗ್ಗಟ್ಟಾಗಿ ಶ್ರಮಿಸಿದ್ದರು. ತಾಲೂಕಿನಲ್ಲಿ ಶೇ.80 ರಷ್ಟು ಮಂದಿ ಲಸಿಕೆ ಪಡೆದಿದ್ದರೆ ಉಳಿಕೆಯವರು ಎರಡೂ ಡೋಸ್‌ ಲಸಿಕೆ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪೋಷಕರ ಮನ ಒಲಿಸಬೇಕೆಂದರು, ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!