ವಾಸು ಕಾಂಗ್ರೆಸ್ ಗೆ ಬಂದ್ರೆ ಅವರೇ ಅಭ್ಯರ್ಥಿ

ಶಾಸಕ ಶ್ರೀನಿವಾಸ್ ಗೆ ಬಹಿರಂಗ ಆಹ್ವಾನ ನೀಡಿದ ಸಿದ್ದರಾಮಯ್ಯ

293

Get real time updates directly on you device, subscribe now.

ಗುಬ್ಬಿ: ಶ್ರೀನಿವಾಸ್‌ ಕಾಂಗ್ರೆಸ್‌ ಸೇರಿದ್ರೆ ಅವರೇ ನಮ್ಮ ಮುಂದಿನ ಕಾಂಗ್ರೆಸ್‌ ಕ್ಯಾಂಡಿಡೇಟ್‌ ಎಂದು
ಬಹಿರಂಗವಾಗಿಯೇ ಸಿದ್ಧರಾಮಯ್ಯ ಘೋಷಣೆ ಮಾಡುವ ಮೂಲಕ ಗುಬ್ಬಿಯ ರಾಜಕೀಯ ಗೊಂದಲಕ್ಕೆ ತೆರೆ ಎಳೆದರು.
ಗುಬ್ಬಿಯಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ಶ್ರೀನಿವಾಸ್‌ ಕೊರೊನಾ ವೇಳೆ ಜನರಿಗೆ ಸ್ಪಂದಿಸಿದ್ದಾರೆ, ಅದಕ್ಕೆ ಇಷ್ಟು ಜನಪ್ರಿಯ ಆಗಿರೋದು, ನಾಲ್ಕು ಬಾರಿ ಎಂ.ಎಲ್.ಎ ಮಾಡೀದ್ದೀರಿ, ಐದನೇ ಬಾರಿನೂ ಮಾಡ್ತೀರಾ, ಎರಡ್ಮೂರು ಸಾರಿ ಕಾಂಗ್ರೆಸ್‌ ಗೆ ಬಾ ಅಂತ ಕರೆದೆ, ಇವ್ರು ಇಲ್ಲಣ್ಣ ಬರಲ್ಲಾ, ಜೆಡಿಎಸ್ ನಲ್ಲೇ ಇರ್ತೀನಿ ಅಂದ್ರು, ಹೇ ಯಾಕಪ್ಪ ಜೆಡಿಎಸ್‌ ಮುಳುಗೋ ಹಡಗು ಅಂತ ಹೇಳಿದ್ದೆ, ಜೆಡಿಎಸ್ ನವ್ರು ಅವಕಾಶವಾದಿಗಳು, ಮೊನ್ನೆ ಏನೋ ಕುಮಾರಸ್ವಾಮಿ ಬಂದಿದ್ನಂತೆ ಇಲ್ಲಿಗೆ, ವಾಸುಗೆ ಗೊತ್ತಿಲ್ಲದೇ ಬಂದು ಇಲ್ಲಿ ಸಭೆ ಮಾಡವ್ರಂತೆ, ಆ ಕುಮಾರಸ್ವಾಮಿಗೆ ಏನಾದ್ರೂ ಹೇಳಿದ್ರೆ ಜಾತಿ ಬಣ್ಣ ಕಟ್ಟಿಬಿಡ್ತಾನೆ, ನಾನು ಮನುಷ್ಯ, ಎಲ್ಲಾ ಜಾತಿಯನ್ನೂ ಪ್ರೀತಿಸ್ತೇನೆ ಎಂದು ಹೆಚ್‌ಡಿಕೆಗೆ ಕುಟುಕಿದರುಯ.
ಅಕ್ಕಿ, ಹಾಲು ಎಲ್ಲವನ್ನೂ ಕೊಟ್ಟೆ, ಏನಾದ್ರೂ ಒಂದೇ ಜಾತಿಗೆ ಕೊಟ್ನಾ? ಸಿದ್ದರಾಮಯ್ಯ ಮೇಲೆ ಜಾತಿ ಬಣ್ಣ ಕಟ್ಟಿಬಿಡೋದು, ಹಸಿವನ್ನ ನೀಗಿಸಬೇಕೆಂದು 1 ಕೋಟಿ 20 ಲಕ್ಷ ಕುಟುಂಬಗಳಿಗೆ ಅಕ್ಕಿ ಕೊಟ್ಟೆ, ಕೇಂದ್ರ ಸರ್ಕಾರದ್ದು ಅಕ್ಕಿ ಅಂತಾ ಬಿಜೆಪಿಯವ್ರು ಹೇಳ್ತಾರೆ, ಹಾಗಾದ್ರೇ ಗುಜರಾತ್‌ ನಲ್ಲಿ ಕೊಟ್ಟಿಲ್ಲಾ, ಮಾತೆತ್ತಿದ್ರೆ ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಬಿಜೆಪಿ ಅಂತಾರೆ, ಅದು ನರಕ, ನರಕ ಎಂದರು.
ಶ್ರೀನಿವಾಸ್‌ರನ್ನ ಜೆಡಿಎಸ್‌ನಿಂದ ಆಚೆ ದಬ್ಬುತ್ತಿದ್ದಾರೆ, ಏನಪ್ಪಾ ವಾಸು ಈಗಾದರೂ ಕಾಂಗ್ರೆಸ್‌ ಗೆ ಬರ್ತೀಯಾ ಎಂದು ವೇದಿಕೆಯಲ್ಲೇ ಶ್ರೀನಿವಾಸ್‌ ಗೆ ಕಾಂಗ್ರೆಸ್‌ ಸೇರಲು ಸಿದ್ದರಾಮಯ್ಯ ಆಹ್ವಾನ ನೀಡಿದರು. ನಾಲ್ಕು ಸಾರಿ ಎಂ.ಎಲ್.ಎ ಆಗಿರೋ ಅವನಿಗೆ ತೀರ್ಮಾನ ಮಾಡಲು ಬಿಡೋಣ, ಏನಾದರೂ ಇರಲಿ, ನಾನು ಆಹ್ವಾನ ನೀಡಿದ್ದೇನೆ, ಕಾಂತರಾಜ ಈಗಾಗಲೇ ಬರೋಕೆ ತೀರ್ಮಾನ ಮಾಡಿದ್ದಾರೆ, ನಮ್ಮನೆಗೆ ಬಂದಿದ್ದ, ಬಾ ಎಂದೆ, ಬರ್ತೀನಿ ಅಂದಿದ್ದಾನೆ ಎಂದರು.
ಸರ್ಕಾರದ ನಿರ್ಲಕ್ಷಕ್ಕೆ ಲಕ್ಷಾಂತರ ಜನರು ಸಾವನ್ನಪ್ಪಿದರು, ರಾಜ್ಯದಲ್ಲೂ ಕೊರೊನಾಗೆ 4 ಲಕ್ಷ ಸತ್ತರು, ಪೂರ್ವ ಸಿದ್ಧತೆ ಮಾಡಿಕೊಳ್ಳದೆ ರಾಜ್ಯ ಸರ್ಕಾರ ಜನರ ಸಾವಿಗೆ ಕಾರಣವಾಯ್ತು, ಬೆಡ್‌, ವೆಂಟಿಲೇಟರ್‌, ಆಕ್ಸಿಜನ್, ಆ್ಯಂಬುಲೆನ್ಸ್ ಯಾವುದನ್ನು ಸರಿಯಾದ ಸಮಯದಲ್ಲಿ ಕೊಡಲಿಲ್ಲ, ಇದರಿಂದ ಅದೆಷ್ಟೋ ಕುಟುಂಬಗಳು ಸಾವಿನ ದವಡೆಗೆ ಸೇರಿದವು,
ಚಾಮರಾಜನಗರಲ್ಲಿ 36 ಜನರು ಸಾವನ್ನಪ್ಪಿದರು ಸತ್ತವರ ಸಂಖ್ಯೆಯನ್ನ ಮುಚ್ಚಿ ಹಾಕಲು ಪ್ರಯತ್ನ ಮಾಡಿದರು, ಮಾಧ್ಯಮಗಳಿಗೆ ಸುಧಾಕರ್‌ ಮೂರೇ ಜನ ಸತ್ತಿದ್ದಾರೆ ಎಂದು ಸುಳ್ಳು ಹೇಳಿದರು, ಬಳಿಕ ನಾನು ಖುದ್ದು ಅಲ್ಲಿಗೆ ಹೋದೆ, ಅಲ್ಲಿನ ವೈದ್ಯರೇ ಕೊಟ್ಟ ಮಾಹಿತಿ ಪ್ರಕಾರ 36 ಜನರು ಸಾವನ್ನಪ್ಪಿದ್ರು, ಇದಕ್ಕೆಲ್ಲಾ ಬಿಜೆಪಿ ಸರ್ಕಾರ ಕಾರಣ ಎಂದು ಆಕ್ರೋಶ ಹೊರಹಾಕಿದರು.
ಯುವಕರಿಗೆ ಕೆಲಸ ಕೊಡ್ತೀವಿ ಅಂತಾ ಹೇಳಿ ಈಗ ಪಕೋಡಿ ಮಾರಿ ಅಂತಾರೆ, ಮನಮೋಹನ್‌ ಸಿಂಗ್‌ ಇದ್ದಾಗ ಡೀಸೆಲ್‌ ಬೆಲೆ 47, ಪೆಟ್ರೋಲ್‌ 69 ಇತ್ತು, ಮೋದಿ ಅಚ್ಚೇದಿನ್‌ ಆಯೇಗಾ, ಅಚ್ಚೇ ದಿನ್‌ ಆಯೇಗಾ ಅಂತಾರೆ, ಕಹಾ ಆಯೇಗಾ ಅಚ್ಚೇದಿನ್, ಜನ ಸುಮ್ಮನೇ ಇದ್ದಾರೆ ಅಂತಾ ಖೂಬಾ ಹೇಳ್ತಾರೆ, ದಯಮಾಡಿ ಕೈಜೋಡಿಸಿ ಕೇಳ್ತೇನೆ, ಈ ಸರ್ಕಾರವನ್ನ ಒದ್ದು ಓಡಿಸಿ, ಸಿಂದಗಿ ಮತ್ತು ಹಾನಗಲ್‌ನಲ್ಲಿ ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗಳನ್ನ ನಿಲ್ಲಿಸಿದ್ರು, ಮುಸ್ಲಿಂರಿಗೆ ಟಿಕೆಟ್‌ ಕೊಡಬೇಡಿ ಅಂತ ಹೇಳಲ್ಲಾ, ಹಾಸನದಲ್ಲಿ ಕೊಡಿ, ಮೈಸೂರಲ್ಲಿ ಕೊಡಿ, ಮಂಡ್ಯದಲ್ಲಿ ಕೊಡಿ, ವಾಸು ಅವರಿಂದ ಗುಬ್ಬಿಯಲ್ಲಿ ಜೆಡಿಎಸ್‌ ಇತ್ತು, ವಾಸು ಇಲ್ಲಾಂದ್ರೆ ಜೆಡಿಎಸ್‌ ಎಲ್ಲಿರುತ್ತೆ ಎಂದು ಪ್ರಶ್ನಿಸಿದರು.
ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ನಾನೇ ಕಾರಣ ಎನ್ನುವ ಕುಮಾರಸ್ವಾಮಿಯವರು ಯಾವ ದೇವಾಲಯಕ್ಕೆ ಕರೆದರೂ ಬಂದು ಪ್ರಮಾಣ ಮಾಡುತ್ತೇನೆ, ಅವರು ಮಾಡಲಿ ಎಂದು ಸವಾಲು ಹಾಕಿದರು. ಕೇವಲ ಸುಳ್ಳು ಹೇಳುತ್ತಾ ಅಳುವುದನ್ನೇ ರೂಢಿಸಿಕೊಂಡು ಜನರನ್ನು ಮರುಳುಗೊಳಿಸುವ ತಂತ್ರ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಶಾಸಕರಾಗಿದ್ದರೂ ನನ್ನನ್ನು ಕಡೆಗಣಿಸಿ ಗುಬ್ಬಿಯಲ್ಲಿ ಸಮಾವೇಶ ಮಾಡಿರುವ ಜೆಡಿಎಸ್‌ ನವರಿಗೆ ಏನನ್ನಬೇಕು ತಿಳಿಯುತ್ತಿಲ್ಲ, ಸ್ವಾಭಿಮಾನ ಇರುವ ಯಾವುದೇ ವ್ಯಕ್ತಿಯು ಇಂತಹ ಪಕ್ಷದಲ್ಲಿ ಇರಲು ಇಚ್ಚಿಸುವುದಿಲ್ಲ, ಇನ್ನು ಕೆಲವೇ ದಿನಗಳಲ್ಲಿ ಕಾರ್ಯಕರ್ತರ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ.ಮುರಳೀಧರ್‌, ಡಾ.ನಾಗಭೂಷಣ್‌, ಕಾಂಗ್ರೆಸ್ ನ ಮಾಜಿ ಶಾಸಕರಾದ ಕೆ.ಎನ್‌.ರಾಜಣ್ಣ, ಜಯಚಂದ್ರ, ಎಚ್‌.ಎಂ.ರೇವಣ್ಣ, ವಿಧಾನಪರಿಷತ್‌ ಸದಸ್ಯ ಬೆಮೆಲ್‌ ಕಾಂತರಾಜು, ಯುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಜೇಂದ್ರ, ಹಿಂದುಳಿದ ವರ್ಗಗಳ ಅಧ್ಯಕ್ಷ ರಾಜಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪಸ್ವಾಮಿ ,ಉಪಾಧ್ಯಕ್ಷೆ ಮಹಾಲಕ್ಷ್ಮಿ, ಪಟ್ಟಣ ಪಂಚಾಯಿತಿ ಸದಸ್ಯರು, ಮುಖಂಡರು ಇದ್ದರು.

Get real time updates directly on you device, subscribe now.

Comments are closed.

error: Content is protected !!