ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಮಿತಿ ರಚನೆ

214

Get real time updates directly on you device, subscribe now.

ತುಮಕೂರು: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ರಚಿಸಿ ಸಾಮಾಜಿಕ ಸೇವೆ ಸೇರಿದಂತೆ ಎಲ್ಲಾ ವರ್ಗದಲ್ಲೂ ವಿಶೇಷ ಸಾಧನೆ ಮಾಡಿರುವವರನ್ನು ಗುರ್ತಿಸಿ ಅರ್ಹರಿಗೆ ಪ್ರಶಸ್ತಿ ನೀಡಲಾಗುವುದು ಸಚಿವ ಮಾಧುಸ್ವಾಮಿ ಎಂದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ವರುಣನ ಕೃಪೆಯಿಂದಾಗಿ ಹಾಗೂ ಹೇಮಾವತಿ ನೀರನ್ನು ಸಮಪರ್ಕವಾಗಿ ಬಳಸಿರುವುದರಿಂದ ನೀರು ಉಳಿಕೆಯಾಗಿದೆ. ಡಿಸೆಂಬರ್‌ ಮಾಸಾಂತ್ಯದವರೆಗೂ ನೀರು ಹರಿಯಲಿದ್ದು, ನೀರು ಹಂಚಿಕೆ ನಿಗದಿಯಾಗದ ಕೆರೆಗಳನ್ನೂ ತುಂಬಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ಸಂಬಂಧಿಸಿದ ಎಲ್ಲಾ ಶಾಸಕರನ್ನು ಕರೆದು ಸೂಕ್ತ ತಿರ್ಮಾನ ಕೈಗೊಳ್ಳಲಾಗುವುದು ಎಂದರು.
ಅಮಾನಿಕೆರೆ ಸೇರಿದಂತೆ ಇತರೆ ಕೆರೆಗಳಲ್ಲಿನ ಹೂಳು ತೆಗೆದು, ತೆಗೆದ ಹೂಳನ್ನು ವಿಲೇವಾರಿ ಮಾಡಲು ಜಾಗದ ಸಮಸ್ಯೆ ಎದುರಾಗಲಿದೆ. ಪ್ರತಿ ಕೆರೆಯಲ್ಲೂ 3 ಅಡಿಯಷ್ಟು ಮಣ್ಣು ತೆಗೆಯಬೇಕಾಗಿದ್ದು, ಹೂಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಚಿಂತನೆ ನಡೆಸಲಾಗುವುದು ಎಂದರು.
ಕೆರೆಗಳನ್ನು ತುಂಬಿಸುವುದರಿಂದ ವಾತಾವರಣ ತಂಪುಗೊಳ್ಳಲಿದೆ, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವುದರ ಜೊತೆಗೆ ಕಾಲ ಕಾಲಕ್ಕೆ ಉತ್ತಮ ಮಳೆಯಾಗಲಿದೆ. ಹೆಚ್ಚು ಕೆರೆಗಳನ್ನು ತುಂಬಿಸುವುದರಿಂದ ಕೊಳವೆ ಬಾವಿಗಳಲ್ಲಿ ಜಲ ಮರುಪೂರಣವಾಗಲಿದೆ. ಈಗಾಗಲೇ ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಕೆರೆಗಳನ್ನು ತುಂಬಿಸಿರುವ ಪರಿಣಾಮ ಹಲವು ಬೋರ್ ವೆಲ್ ಗಳಲ್ಲಿ ನೀರು ಉಕ್ಕುತ್ತಿದೆ ಎಂದರು.
ಕೆರೆಗಳನ್ನು ತುಂಬಿಸುವುದರ ಜೊತೆಗೆ ಸಾಂಪ್ರದಾಯಿಕ ನೀರಿನ ಮೂಲಗಳಾದ ಬಾವಿ, ಕಲ್ಯಾಣಿ ಸೇರಿದಂತೆ ತಲಪರಿಕೆಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!