ಬೇಕರಿ ಬೀಗ ಮುರಿದ ಕಳ್ಳರು- ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

184

Get real time updates directly on you device, subscribe now.

ಗುಬ್ಬಿ: ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಕಳ್ಳರು ಅಂಗಡಿಗಳ ಬೀಗ ಮುರಿದು ಕಳವು ಮಾಡಿರುವ ಘಟನೆ ಈಚೆಗೆ ನಡೆದಿವೆ. ಬುಧವಾರ ತಡರಾತ್ರಿ ಪಟ್ಟಣದಲ್ಲಿ ಕಳ್ಳತನ ಮಾಡಲು ಮುಂದಾದ ಕಳ್ಳರನ್ನು ಹಿಡಿಯಲು ಪೊಲೀಸರು ಮತ್ತು ಸಾರ್ವಜನಿಕರು ಸಾಕಷ್ಟು ಪ್ರಯತ್ನ ಮಾಡಿದರೂ ಕ್ಷಣದಲ್ಲೇ ಕಳ್ಳರು ಕಣ್ಮರೆಯಾದ ಘಟನೆ ನಡೆದಿದೆ.
ಎಂ.ಜಿ.ರಸ್ತೆಯಲ್ಲಿನ ಶ್ರೀಉಡುಪಿ ಬೇಕರಿಯ ಬೀಗ ಮುರಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಿ.ಹೆಚ್.ರಸ್ತೆಯ ಬ್ರಾಹ್ಮಣರ ಬೀದಿಯಲ್ಲಿ ಅಂಗಡಿ ಕಳವು ಮಾಡಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಕಳ್ಳರನ್ನು ಗಮನಿಸಿದ ಸ್ಥಳೀಯರು ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಹಲವು ಮನೆಗಳಿಗೆ ನುಗ್ಗಲು ಪ್ರಯತ್ನಿಸಿದ ಕಳ್ಳರು ಮನೆ ಮಾಳಿಗೆ ಮೇಲೆ ಓಡಿ ತಪ್ಪಿಸಿಕೊಂಡಿದ್ದಾರೆ.
ಈ ಇಬ್ಬರು ಕಳ್ಳರನ್ನು ನಾಗರಿಕರು ಮತ್ತು ಪೊಲೀಸರು ಹಿಡಿಯಲು ಪ್ರಯತ್ನಿಸಿದ್ದಾರೆ, ಆದರೆ ಅಲ್ಲಿಂದ ಕಾಲ್ಕಿತ್ತ ಇಬ್ಬರು ಕಳ್ಳರನ್ನು ಅಟ್ಟಾಡಿಸಿದ್ದಾರೆ. ಹಲವು ಹೆಂಚಿನ ಮನೆ, ಶೀಟಿನ ಮನೆ ಮೇಲೆ ಓಡಾಡಿ ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾರೆ. ಸಾರ್ವಜನಿಕರೊಬ್ಬರು ತಮ್ಮ ಬಳಿ ಇದ್ದ ನಾಡ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಕೂಡಾ ನಡೆದಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ಮೊಬೈಲ್ ಮತ್ತು ಹಣ ದೋಚಿರುವ ಪ್ರಕರಣ ಕೂಡ ಹೆಚ್ಚಾಗಿದ್ದು ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ ಮಾಡುವ ಪ್ರಯತ್ನ ಕೂಡ ನಡೆದಿದೆ. ಪೊಲೀಸ್ ಇಲಾಖೆ ಎಚ್ಚೆತ್ತು ನಾಗರಿಕರ ಆತಂಕ ದೂರ ಮಾಡಬೇಕಿದೆ.

Get real time updates directly on you device, subscribe now.

Comments are closed.

error: Content is protected !!