ಅಧ್ಯಕ್ಷನಾದರೆ ವ್ಯವಸ್ಥಿತವಾಗಿ ಕಸಾಪ ಕಟ್ಟಿ ಬೆಳೆಸುವೆ: ಸಿದ್ದಲಿಂಗಪ್ಪ

ಕನ್ನಡ ಕಲಾಗ್ರಾಮ ಸ್ಥಾಪಿಸುವ ಗುರಿ ನನ್ನದು

342

Get real time updates directly on you device, subscribe now.

ತುಮಕೂರು: ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕನ್ನಡ ಉಪನ್ಯಾಸಕನಾಗಿ, ಕನ್ನಡ ಓದಿ, ಓದಿಸುವ ಕೆಲಸದ ಜೊತೆಗೆ, ಬೋಧನೆ ಮಾಡಿಕೊಂಡು ಬಂದಿದ್ದು, ನವೆಂಬರ್‌ 21 ರಂದು ನಡೆಯುವ ಕಸಾಪದ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದಾಗಿ ಪಿಯು ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶನ ಕೆ.ಎಸ್‌.ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರಕಾರದ ಪಿಯು ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷನಾಗಿ, ಗುಬ್ಬಿ ತಾಲೂಕು ಕಸಾಪ ಅಧ್ಯಕ್ಷನಾಗಿ ಕೆಲಸ ಮಾಡಿದ್ದು, ಕಸಾಪ ಮುಂದಿನ ಬೆಳವಣಿಗೆಗಳ ಕುರಿತು ರೂಪರೇಷೆ ಸಿದ್ಧಪಡಿಸಿಕೊಂಡಿದ್ದು, ತನ್ನದೇ ಆದ ಆಶಯ ಹೊಂದಿದ್ದು, ಅವಕಾಶ ಮಾಡಿಕೊಟ್ಟರೆ ವ್ಯವಸ್ಥಿತವಾಗಿ ಕಸಾಪ ಕಟ್ಟಿ ಬೆಳೆಸುವ ಆಶಯ ನಮ್ಮದು ಎಂದರು.
ಕಸಾಪ ಅಧ್ಯಕ್ಷರ ಅಧಿಕಾರವಧಿ ಬೈಲಾ ತಿದ್ದುಪಡಿ ಮಾಡಿರುವುದು ತಪ್ಪಾಗಿದ್ದು, ಅದನ್ನು ಮುಂದಿನ ಸರ್ವ ಸದಸ್ಯರ ಸಭೆಯಲ್ಲಿಟ್ಟು ಮರು ತಿದ್ದುಪಡಿ ಮಾಡಬೇಕಾದ ಅವಶ್ಯಕತೆ ಇದೆ, ಬೈಲಾ ತಿದ್ದುಪಡಿಯಿಂದ ಹಲವಾರು ಲೋಪದೋಷ ಉಂಟಾಗಿದ್ದು, ಇವುಗಳನ್ನು ಮೂಲ ಬೈಲಾಕ್ಕೆ ತಕ್ಕಂತೆ ಪರಿಷ್ಕರಿಸುವ ಅಗತ್ಯವಿದೆ, ಕಸಾಪವನ್ನು ಭವಿಷ್ಯದಲ್ಲಿ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ನನ್ನದೆ ಆದ ಆಶಯ ಹೊಂದಿದ್ದು, ವಾರ್ಷಿಕವಾಗಿ ಅಜೀವ ಸದಸ್ಯರ ಸಮ್ಮೇಳನ ನಡೆಸುವುದರೊಂದಿಗೆ ಕನ್ನಡ ವಿದ್ಯಾರ್ಥಿಗಳು, ಉಪನ್ಯಾಸಕರನ್ನು ಜೋಡಿಸಿ ಪ್ರತಿ ಗ್ರಾಮದಲ್ಲಿ ಕನ್ನಡ ನಿತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವುದರೊಂದಿಗೆ ಹೋಬಳಿ, ತಾಲೂಕು ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದ್ದು, ಕಾವ್ಯ ಕಮ್ಮಠ ಏರ್ಪಡಿಸಲು ಶ್ರಮಿಸುವುದಾಗಿ ತಿಳಿಸಿದರು.
ರಾಮನಗರದಲ್ಲಿರುವ ಜಾನಪದ ಲೋಕದಂತೆ ತುಮಕೂರು ಜಿಲ್ಲೆಯಲ್ಲಿ ಕನ್ನಡ ಕಲಾಗ್ರಾಮ ಸ್ಥಾಪಿಸುವ ಮೂಲಕ ಜಿಲ್ಲೆಯ ಸಾಹಿತಿಗಳು, ಚಿತ್ರ ನಟರನ್ನು ನೆನಪಿಸುವ ಕಾರ್ಯ ಚಟುವಟಿಕೆಯ ಯೋಜನೆ ರೂಪಿಸಲಾಗುವುದು ಎಂದು ಕೆ.ಎಸ್‌.ಸಿದ್ದಲಿಂಗಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಸ್‌.ಸಿದ್ದಲಿಂಗಪ್ಪ ಅವರ ಬೆಂಬಲಿಗರಾದ ರೇವಣಸಿದ್ದಪ್ಪ, ಬ್ಯಾಡನೂರು ನಾಗಭೂಷಣ್‌, ಪದ್ಮಪ್ರಸಾದ್‌, ಡಾ.ಯೋಗೀಶ್ವರಪ್ಪ, ಬೆಳ್ಳಾವಿ ಶಿವಕುಮಾರ್‌, ಹೊಸಕೆರೆ ರಿಜ್ವಾನ್‌ ಪಾಷಾ, ನಿವೃತ್ತ ಡಿಡಿಪಿಐ ನರಸಿಂಹಮೂರ್ತಿ, ಸಣ್ಣಹೊನ್ನಯ್ಯ ಕಂಟಲಗೆರೆ, ಎಂ.ಎಚ್‌.ನಾಗರಾಜು, ಶಿವರುದ್ರಯ್ಯ, ಬಾಣಸಂದ್ರ ರಂಗಪ್ಪ, ಶಂಕರಾನಂದ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!