ಬೆಸ್ಕಾಂ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ

422

Get real time updates directly on you device, subscribe now.

ಗುಬ್ಬಿ: ಗುಬ್ಬಿಯ ಬೆಸ್ಕಾಂ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಅಧಿಕವಾಗಿದ್ದು ಯಾವುದೇ ರೀತಿಯ ಕೆಲಸ ನಡೆಯುತ್ತಿಲ್ಲ ಎಂದು ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂಜೇಗೌಡ ಆರೋಪಿಸಿದರು.
ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಸ್ಥಳೀಯ ಗುತ್ತಿಗೆದಾರರ ಕುಂದುಕೊರತೆ ಸಭೆ ಆಯೋಜನೆ ಮಾಡಲಾಗಿತ್ತು, ಇದೇ ಸಂದರ್ಭದಲ್ಲಿ ಮಾತನಾಡಿ, ಸ್ಥಳೀಯ ಗುತ್ತಿಗೆದಾರರಿಗೆ ಹಾಗೂ ಸಾರ್ವಜನಿಕರಿಗೆ, ಯಾವುದೇ ರೀತಿಯಲ್ಲೂ ಇಲ್ಲಿನ ಅಧಿಕಾರಿಗಳು ಸಹಕರಿಸುತ್ತಿಲ್ಲ, ಗೃಹಬಳಕೆ ಮತ್ತು ತತ್ಕಾಲ ಫೈಲುಗಳನ್ನ ಅಧಿಕಾರಿಗಳಿಗೆ ನೀಡಿದರೆ ಅದಕ್ಕೆ ಸರಿಯಾಗಿ ಸ್ಪಂದಿಸದೆ ಬಹಳಷ್ಟು ನಿಧಾನವಾಗಿ ಕೆಲಸ ಮಾಡುತ್ತಾರೆ ಹಾಗೂ ಗುತ್ತಿಗೆದಾರರಿಗೆ ಇದರಿಂದ ಸಾಕಷ್ಟು ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ನಿಟ್ಟೂರು ಬೆಸ್ಕಾಂ ಕಚೇರಿಯಲ್ಲಿ ಹಲವು ತಿಂಗಳಿನಿಂದ ಎಇಇ ಇಲ್ಲವಾಗಿದ್ದು, ಬಹಳ ದೊಡ್ಡದಾದ ಹೋಬಳಿಯಾಗಿದ್ದರೂ ಕೂಡ ಇದುವರೆಗೂ ನೇಮಕ ಮಾಡದೇ ಇರುವುದರಿಂದ ಸಾಕಷ್ಟು ಕೆಲಸ ಕಾರ್ಯ ಸ್ಥಗಿತಗೊಳ್ಳುತ್ತಿವೆ, ಇದರ ಬಗ್ಗೆ ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಮತ್ತು ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಬೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ್‌ ಮಾತನಾಡಿ ಇಂದಿನ ಸಭೆಯಲ್ಲಿ ನೇರವಾಗಿ ಗುತ್ತಿಗೆದಾರರೊಂದಿಗೆ ಮಾತುಕತೆ ಮಾಡಿದ್ದು ಇಲ್ಲಿರುವ ಸಮಸ್ಯೆ ಮನಗಂಡಿದ್ದೇನೆ ಹಾಗೂ ನಮ್ಮೆಲ್ಲ ಅಧಿಕಾರಿಗಳ ಜೊತೆಯಲ್ಲಿ ಮಾತುಕತೆ ಮಾಡಿ ಯಾವುದೇ ಕೆಲಸ ನಿಧಾನಗತಿಯಲ್ಲಿ ನಡೆಯದೆ ಶೀಘ್ರದಲ್ಲಿ ಅವರ ಕೆಲಸ ಮಾಡುವ ಮಾಡಿಕೊಡಬೇಕೆಂದು ಹಾಗೂ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದು ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಮತ್ತು ನಿಟ್ಟೂರು ಬೆಸ್ಕಾಂ ಕಚೇರಿಗೆ ಈ ಕೂಡಲೇ ಮೇಲಾಧಿಕಾರಿಗಳಿಗೆ ಮನವಿ ಮಾಡಿ ಕೂಡಲೇ ಅಲ್ಲಿಗೆ ಅಧಿಕಾರಿ ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಬ್ಬಿಯ ಬೆಸ್ಕಾಂನ ಅನಿಲ್‌ ಕುಮಾರ್‌ ಸೇರಿದಂತೆ ಇನ್ನಿತರೆ ಅಧಿಕಾರಿಗಳು, ಗುತ್ತಿಗೆದಾರರಾದ ಗುರುಲಿಂಗಪ್ಪ, ಶಿವರಾಜು, ಪಂಚಾಕ್ಷರಿ, ಮುತ್ತರಾಯಪ್ಪ, ಶಶಿಧರ್‌ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!