ಕುಣಿಗಲ್: ನ್ಯಾಯಾಲಯಕ್ಕೆ ಹಾಜರಾಗಿದ್ದ ಮಹಿಳೆಯೊಬ್ಬರಿಗೆ ಅಸಂಬದ್ದ ಪದ ಬಳಸಿದ ನ್ಯಾಯಾಲಯ ಅಟೆಂಡರ್ ಮೇಲೆ ಬಾದಿತ ಮಹಿಳೆ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.
ಭೂಮಿ (ಹೆಸರು ಬದಲಿಸಿದೆ) ಎಂಬುವರು ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಪಟ್ಟಣದ ನ್ಯಾಯಾಲಯದಲ್ಲಿ ಹಾಜರಾಗಿದ್ದು, ವಿಚಾರಣೆ ಸರದಿ ಬಂದಾಗ ಅವರ ಹೆಸರು ಕೂಗಿದ್ದು, ನ್ಯಾಯಾಲಯ ಕೊಠಡಿಯ ಪ್ರವೇಶ ದ್ವಾರದಲ್ಲಿ ನಿಂತಿದ್ದ ಬಿಳಿ ಸಮವಸ್ತ್ರ ಧರಿಸಿದ್ದ ಅಟೆಂಡರ್ ಒಬ್ಬರು ಸದರಿ ಮಹಿಳೆ ಕುರಿತು ಅಸಂಬದ್ದ ಪದ ಬಳಕೆ ಮಾಡಿದ್ದು, ಇದನ್ನು ಮಹಿಳೆ ಹಾಗೂ ಆಕೆಯ ಜೊತೆಯಲ್ಲಿ ಬಂದಿದ್ದ ಅವರ ತಂದೆ ತೀವ್ರವಾಗಿ ಖಂಡಿಸಿದರು. ವಿಷಯ ಗಮನಿಸಿದ ನ್ಯಾಯಾಧೀಶರು ವಿಚಾರಿಸಿ, ಮಹಿಳೆಯ ಬಗ್ಗೆ ಅಸಂಬದ್ದ ಪದ ಬಳಕೆ ಮಾಡಿದ್ದ ಅಟೆಂಡರ್ ಬಗ್ಗೆ ದೂರು ನೀಡುವಂತೆ ಸೂಚಿಸಿದ ಮೇರೆಗೆ ಬಾದಿತ ಮಹಿಳೆ ಪೊಲೀಸರಿಗೆ ಅಟೆಂಡರ್ ಬಸವರಾಜು ಎಂಬಾತನ ಮೇಲೆ ದೂರು ನೀಡಿದ್ದಾರೆ.
ಮಹಿಳೆಗೆ ನಿಂದನೆ- ದೂರು ದಾಖಲು
Get real time updates directly on you device, subscribe now.
Prev Post
Comments are closed.