ಪ್ರತಿಯೊಬ್ಬರ ಮನದಲ್ಲಿ ಕನ್ನಡ ಜೀವಂತವಾಗಿರಲಿ

727

Get real time updates directly on you device, subscribe now.

ಮಧುಗಿರಿ: ಕರುನಾಡಿನ ಮಣ್ಣಿನಲ್ಲಿ ಜನಿಸಲು ಪ್ರತಿಯೊಬ್ಬರೂ ಪುಣ್ಯ ಮಾಡಿರಬೇಕು ಎಂದು ತಹಶೀಲ್ದಾರ್‌ ವೈ.ರವಿ ತಿಳಿಸಿದರು.
ತಾಲೂಕಿನ ಪುರವರ ಹೋಬಳಿಯ ಪುರವರದ ಸರ್ಕಲ್‌ ನಲ್ಲಿರುವ ಆಟೋಚಾಲಕರ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡಿಗರು ಕನ್ನಡ ನಾಡಿನ ಮಣ್ಣಿನಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು. ಆದರಿಂದಲೇ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತೆ ಜನಜನಿತವಾಗಿದೆ. ಇಂತಹ ಕರ್ನಾಟಕದ ಕಪ್ಪು ಮಣ್ಣಿನ ಜನರಾದ ನಾವುಗಳು ಸುಂದರವಾದ ಕರ್ನಾಟಕ ಭೂಪಟದಲ್ಲಿ ಇರುವುದಕ್ಕೆ ಹೆಮ್ಮೆಪಡುತ್ತೇವೆ ಎಂದರು.
ಸಿಪಿಐ ಎಂ.ಸರ್ದಾರ್‌ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ವಿಶ್ವ ಲಿಪಿಗಳ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ ಕಸ್ತೂರಿಯಂತಿದ್ದು ಹೂವಿನಂತೆ ಮೃದು ಭಾಷೆ ಹೊಂದಿದೆ. ಕರ್ನಾಟಕದಲ್ಲಿ ಹುಟ್ಟಿದ ನಾವುಗಳು ಕೇವಲ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದು ಆಡಂಬರವಾಗಿರಬಾರದು, ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ಕನ್ನಡ ಜೀವಂತವಾಗಿರಬೇಕು ಎಂದ ಅವರು, ಕನ್ನಡ ರಾಜ್ಯೋತ್ಸವವನ್ನು ನವೆಂಬರ್‌ ಒಂದಕ್ಕೆ ಮಾತ್ರ ಸೀಮಿತ ಮಾಡದೇ ಇದು ನಿತ್ಯೋತ್ಸವ ವಾಗಬೇಕೆಂದು ತಿಳಿಸಿದರು.
ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್‌ ಮಾತನಾಡಿ, ಕರ್ನಾಟಕವನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಬೆಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುತ್ತದೆ. ಇಲ್ಲಿ ಸಾಧು, ಸಂತರು, ದಾಸರು, ಶಿವಶರಣರು ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಧೀಮಂತ ಶಕ್ತಿ ಎಂದರು.
ರಕ್ತದಾನಿ ಬಳಗದ ಶಶಿಕುಮಾರ್‌ ಮಾತನಾಡಿ ಕನ್ನಡ ಭಾಷೆ ಬಳಸಬೇಕು ಹಾಗೆಯೇ ಬೆಳೆಸಬೇಕು. ಯಾವ ಭಾಷೆ ಬಳಸುವುದಿಲ್ಲವೋ ಆ ಭಾಷೆ ಕಂಡಿತವಾಗಿಯೂ ಬೆಳೆಯುವುದಿಲ್ಲ. ಕಾಲ ಕ್ರಮೇಣ ಆ ಭಾಷೆ ಅವನತಿ ಹೊಂದುತ್ತದೆ ಎಂದರು.
ಈ ವೇಳೆಯಲ್ಲಿ ಜಿಲ್ಲಾ ಶಿಕ್ಷಣ ದೈಹಿಕ ಅಧಿಕಾರಿ ಬಿ.ಎಸ್‌.ಹನುಮಂತರಾಯಪ್ಪ, ಮುಖ್ಯ ಶಿಕ್ಷಕರಾದ ವೆಂಕಟರವಣಪ್ಪ, ಬಿ.ಎಸ್‌.ಹನುಮಂತರಾಯಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಹನುಮಂತರಾಯಪ್ಪ, ಕಾಂತರಾಜು, ನಾರಾಯಣಸ್ವಾಮಿ, ನರಸಿಂಹಮೂರ್ತಿ, ಸಂಜೀವಪ್ಪ, ರವಿ, ಮುಖಂಡರಾದ ಅಜಯ, ಸಿದ್ದನಹಳ್ಳಿ ರಂಗನಾಥ ಪುರುವರದ ರಂಗನಾಥ ಹಾಗೂ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!