ಟ್ರಾಕ್ಟರ್‌ ಹರಿದು ಮಹಿಳೆ ಸಾವು

311

Get real time updates directly on you device, subscribe now.

ಕೊಡಿಗೇನಹಳ್ಳಿ: ಕೃಷಿಯಲ್ಲಿ ತೊಡಗಿದ್ದ ಮಹಿಳೆಯ ಮೇಲೆ ಏಕಾಏಕಿ ಟ್ರಾಕ್ಟರ್‌ ಹರಿದು ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಹೋಬಳಿಯ ತೆರಿಯೂರು ಗ್ರಾಮದ ವೆಂಕಟೇಶಯ್ಯ ಎಂಬುವವರ ಜಮೀನಿನಲ್ಲಿ ಕೂಲಿ ಕೆಲಸದಲ್ಲಿ ತೊಡಗಿದ್ದ ಮಹಿಳೆಯ ಮೇಲೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್‌ ಸಾಕಮ್ಮ ಎಂಬ ಮಹಿಳೆಯ ಮೇಲೆ ಹರಿದಿದ್ದು ತಕ್ಷಣ ಸ್ಥಳದಲ್ಲಿದ್ದವರು ದೌಡಾಯಿಸಿ ಹಿಂದೂಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗಿದೆ ಸಾಕಮ್ಮ ಮೃತಪಟ್ಟಿದ್ದು ಕುಟುಂಬದ ಆಕ್ರಂದ ಮುಗಿಲು ಮುಟ್ಟಿತ್ತು, ಸ್ಥಳಕ್ಕೆ ಎಎಸೈ ಮೆಹಬೂಬ್‌ ಖಾನ್‌ ಎಸ್‌.ಬಿ ಮಂಜುನಾಥ್‌ ಭೇಟಿ ನೀಡಿದ್ದು ಕೊಡಿಗೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!