ಜೆಡಿ ಮಳೆಗೆ ನೆಲ ಕಚ್ಚಿದ ರಾಗಿ ಪೈರು

110

Get real time updates directly on you device, subscribe now.

ಕುಣಿಗಲ್‌: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಗುರುವಾರ ಬೆಳಗಿನಿಂದ ಎಡಬಿಡೆದೆ ಸುರಿಯುತ್ತಿರುವ ಜೆಡಿ ಮಳೆಗೆ ಬಹುತೇಕರ ಬದುಕು ಜರ್ಝಿತವಾಗಿ ಜೆಡಿ ಮಳೆಗೆ ಜನ ಹಿಡಿ ಶಾಪ ಹಾಕುವಂತಾಯಿತು.
ಗುರುವಾರ ಬೆಳ್ಳಂಬೆಳಗ್ಗೆ ಅತೀವ ತಂಪಿನಿಂದ ಕೂಡಿದ ತುಂತುರು ಮಳೆ ಕಾಲ ಕ್ರಮೇಣ ಸತತ ಜೆಡಿ ಮಳೆಯ ರೂಪಕ್ಕೆ ತಿರುಗಿತು. ಇಡೀ ವಾತವಾರಣ ತಂಪಾಗಿದ್ದು, ಬೆಳಗ್ಗೆ ಆರುಗಂಟೆ ವೇಳೆಗೆ 19 ಡಿಗ್ರಿ ತಾಪಮಾನ ದಾಖಲಾಗಿ ಸಂಜೆವರೆಗೂ ಇದೆ ತಾಪಮಾನ ಮುಂದುವರೆಯಿತು. ಶಾಲೆಗೆ ತೆರಳುವ ಮಕ್ಕಳು ಬೆಚ್ಚನೆ ಉಡುಪು, ಕೊಡೆಯ ಮೊರೆ ಹೋದರೆ, ಬೀದಿಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಕತ್ತರಿ ಬಿದ್ದಂತಾಗಿ ಜೆಡಿ ಮಳೆಗೆ ಹಿಡಿಶಾಪ ಹಾಕಿದರು. ಬೈಕ್‌ ಸವಾರರು ಪರದಾಡುವಂತಾಗಿ ಕೆಲವರು ಮಳೆಯಲ್ಲಿ ನೆಂದುಕೊಂಡು ಹೋದರೆ ಇನ್ನು ಕೆಲವರು ಬೈಕ್‌ ಬಿಟ್ಟು ಆಟೋ ರಿಕ್ಷಾ ಮೊರೆ ಹೋದರು. ತಾಲೂಕಿನ ವಿವಿಧೆಡೆ ಇದೆ ಸ್ಥಿತಿ ಮುಂದುವರೆದಿದ್ದು ರಾಗಿ ಬೆಳೆ ಇಟ್ಟಿರುವ ರೈತರು ಜೆಡಿ ಮಳೆಗೆ ಪೈರು ನೆಲಕ್ಕೆ ಒರಗುವ ಭೀತಿಯಲ್ಲಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ಇತರೆ ವರ್ಗದ ಕಾರ್ಮಿಕರು ಜೆಡಿ ಮಳೆಯಿಂದ ಕೆಲಸ ಸಿಗದೆ ಅನಿವಾರ್ಯವಾಗಿ ರಜೆ ಹಾಕುವಂತಾಯಿತು. ನಿರ್ಮಾಣ ಹಂತದ ಕಟ್ಟಡ ಮಾಲೀಕರು ಮಳೆ ನೀರಿನಿಂದ ಕಟ್ಟಡ ರಕ್ಷಣೆಗೆ ಪರದಾಡಿದರು. ಬೀದಿ ಬದಿ ತಿಂಡಿ, ಪಾನಿಪೂರಿ ಮಾರಾಟಗಾರರು ಸತತ ಮಳೆಯ ಅಬ್ಬರಕ್ಕೆ ಗ್ರಾಹಕರು ಇಲ್ಲದೆ ನಷ್ಟ ಅನುಭವಿಸುಂತಾಯಿತು. ಪಟ್ಟಣದ ವಿವಿಧ ರಸ್ತೆಗಳು ಮಳೆ ನೀರಿನಿಂದ ಕೆಸರು ಗದ್ದೆಯಂತಾಗಿ ನಾಗರಿಕರು ಪರದಾಡಿದರು.

Get real time updates directly on you device, subscribe now.

Comments are closed.

error: Content is protected !!