ಚಿಕ್ಕನಾಯಕನಹಳ್ಳಿ: ಸರಳ, ಸಜ್ಜನ ಅಧಿಕಾರಿಯಾಗಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಪ್ರೀತಿಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ತಾಲೂಕಿನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ ಕಾತ್ಯಾಯಿನಿ ಅವರು ತಾಲೂಕಿನಿಂದ ವರ್ಗಾವಣೆಯಾಗಿದ್ದು ಸಿಬ್ಬಂದಿ ವರ್ಗದವರು ಇವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.
ತಾಲೂಕಿನಲ್ಲಿ ಸತತ ಮೂರು ವರ್ಷಗಳ ಕಾಲ ದಕ್ಷವಾಗಿ ಶಿಕ್ಷಣ ಇಲಾಖೆ ಮುನ್ನಡೆಸಿಕೊಂಡು ಬಂದಿದ್ದ ಇವರು ಕೋವಿಡ್ ಸಂದರ್ಭದಲ್ಲಿ ನಡೆದ 10ನೇ ತರಗತಿ ಪರೀಕ್ಷೆಗಳನ್ನು ಯಶಸ್ವಿಗೊಳಿಸಿದ್ದರು, ಸರ್ಕಾರಿ ಶಾಲೆಗಳಿಗೆ ಹೆಚ್ಚು ವಿದ್ಯಾರ್ಥಿಗಳು ದಾಖಲು ಮಾಡಿಸುವಲ್ಲಿ ಶ್ರಮ ಹಾಕಿದ್ದರು, ತಾಲೂಕಿನ ಶಿಕ್ಷಕರು ಹಾಗೂ ಮಕ್ಕಳ ಸ್ನೇಹಿ ಬಿಇಓ ಆಗಿದ್ದ ಕಾತ್ಯಾಯಿನಿಯವರು ಚಾಮರಾಜನಗರ ಡಯಟ್ಗೆ ವರ್ಗಾವಣೆಯಾದರು. ಪಟ್ಟಣದ ಬಿಇಓ ಕಚೇರಿಯಲ್ಲಿ ಶಿಕ್ಷಕರು ಬೀಳ್ಕೋಡುಗೆ ಸಮಾರಂಭ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಸಂಗಮೇಶ್ ಸೇರಿದಂತೆ ಶಿಕ್ಷಕರು ಹಾಜದ್ದರು.
ಬಿಇಓ ವರ್ಗಾವಣೆ- ಆತ್ಮೀಯ ಬೀಳ್ಕೊಡುಗೆ
Get real time updates directly on you device, subscribe now.
Prev Post
Next Post
Comments are closed.