ಪತ್ರಕರ್ತರು ಅಧ್ಯಯನಶೀಲರಾಗಲಿ

491

Get real time updates directly on you device, subscribe now.

ಕುಣಿಗಲ್‌: ಪತ್ರಕರ್ತರು ಸದಾ ಅಧ್ಯಯನಶೀಲರಾಗಿ ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಶುಕ್ರವಾರ ತಾಲೂಕಿನ ಕಗ್ಗರೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿ, ಪತ್ರಕರ್ತರು ಅಧ್ಯಯನಶೀಕರಾಗದೆ ಎಲ್ಲಾ ತಿಳಿದವರೆಂಬ ಭ್ರಮೆ ಬೇಡ,ಯಾವುದೆ ವಿಷಯದಲ್ಲಿ ಸತತ ಸಂಶೋಧನೆ ನಡೆಸಿ ವಸ್ತುನಿಷ್ಠ ವರದಿ ನೀಡುವ ಮೂಲಕ ವೃತ್ತಿಬದ್ಧತೆ ಮೆರೆಯಬೇಕು, ಎಲೆಕ್ಟ್ರಾನಿಕ್‌ ಮಾಧ್ಯಮದ ನಡುವೆಯೂ ಮುದ್ರಣ ಮಾಧ್ಯಮ ಇನ್ನು ಜನರ ವಿಶ್ವಾಸ ಉಳಿಸಿಕೊಂಡಿದೆ ಎಂದರೆ ಮುದ್ರಣ ಮಾಧ್ಯಮದ ವಸ್ತುನಿಷ್ಠ ವರದಿಗಳೇ ಕಾರಣ ಎಂದರು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸದಾ ಒತ್ತಡದಿಂದ ಕೆಲಸ ಮಾಡುವ ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ನಿರ್ಲಕ್ಷ್ಯ ಮನೋಭಾವ ಸರಿಯಲ್ಲ, ನಕಲಿ ಪತ್ರಕರ್ತರ ನಡುವೆ ವೃತ್ತಿ ಬದ್ಧತೆ ಮೆರೆಯುವ ಮೂಲಕ ತಮ್ಮ ತನ ಉಳಿಸಿಕೊಳ್ಳಬೇಕು, ಸಮಾಜ ಎಲ್ಲಾ ಪತ್ರಕರ್ತರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಎಂಬುದ ಮರೆಯಬಾರದು. ಪತ್ರಕರ್ತರಿಗೆ ಆರೋಗ್ಯ ಕಾರ್ಡ್‌ ಯೋಜನೆ ದೊರಕಿಸಿಕೊಡುವ ಬಗ್ಗೆ ಕಾರ್ಮಿಕ ಇಲಾಖಾ ಸಚಿವರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ರಂಗನಾಥ್‌ ಮಾತನಾಡಿ, ಗ್ರಾಮಾಂತರ ಪ್ರದೇಶದ ಪತ್ರಕರ್ತರ ಸ್ಥಿತಿ ಕಷ್ಟಕರವಾಗಿದೆ, ಕೊವಿಡ್‌ ಸಮಯದಲ್ಲಿ ಪತ್ರಕರ್ತರ ಪಾತ್ರ ಪ್ರಮುಖ, ಪತ್ರಕರ್ತರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ವಿಮೆ ಸೌಲಭ್ಯ ಕಲ್ಪಿಸಲು ಸಂಘ ಮನಸು ಮಾಡಬೇಕು, ಕುಣಿಗಲ್‌ ತಾಲ್ಲೂಕು ಪತ್ರಕರ್ತರಿಗೆ ವೈಯಕ್ತಿಕವಾಗಿ ತಾವೇ ವಿಮೆ ಮಾಡಿಸುವುದಾಗಿ ಹೇಳಿದರು.
ಪತ್ರಕರ್ತರ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪತ್ರಕರ್ತ ಹಮೀದ್‌ ಪಾಳ್ಯ, ಪಿ ಎಲ್ ಡಿ ಬ್ಯಾಂಕ್‌ ಅಧ್ಯಕ್ಷ ಡಿ.ಕೃಷ್ಣಕುಮಾರ್‌, ಬಿಜೆಪಿ ಮುಖಂಡ ರಾಜೇಶ್ ಗೌಡ, ಸಂಘದ ಜಿಲ್ಲಾಧ್ಯಕ್ಷ ಪುರುಷೋತ್ತಮ್‌ ಮತ್ತು ಪದಾಧಿಕಾರಿಗಳು, ತಾಲೂಕು ಅಧ್ಯಕ್ಷ ರವೀಂದ್ರಕುಮಾರ್‌ ಮತ್ತು ಪದಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!