ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಬಿ.ಎನ್‌.ಲೋಕೇಶ್‌ ಆಯ್ಕೆಗೆ ಶ್ರಮಿಸಿ

382

Get real time updates directly on you device, subscribe now.

ಕುಣಿಗಲ್‌: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ತುಮಕೂರು ಜಿಲ್ಲೆಯಿಂದ ಬಿ.ಎನ್‌.ಲೋಕೇಶರವರನ್ನು ಅಯ್ಕೆ ಮಾಡುವ ಮೂಲಕ ತಾಲೂಕು ಸೇರಿದಂತೆ ಜಿಲ್ಲೆಯ ಒಕ್ಕಲಿಗ ಸಮುದಾಯದ ಧ್ವನಿಯಾಗಲು ಸಹಕರಿಸಬೇಕೆಂದು ಮಾಜಿಸಚಿವ ಡಿ.ನಾಗರಾಜಯ್ಯ ಮನವಿ ಮಾಡಿದರು.
ಶನಿವಾರ, ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಯುತ್ತಿದ್ದು ತುಮಕೂರು ಜಿಲ್ಲೆಯಿಂದ ಅನುಭವಿಯೂ ಅದ ತಾಪಂ ಮಾಜಿ ಸದಸ್ಯ, ಶಿಕ್ಷಣಸಂಸ್ಥೆ ಉಪಾಧ್ಯಕ್ಷರು, ಭಾರತ್‌ ಕೋ-ಅಪರೇಟಿವ್‌ ಬ್ಯಾಂಕ ನಿರ್ದೇಶಕ ಬಿ.ಎನ್‌.ಲೋಕೇಶ್‌ ಜಿಲ್ಲೆಯಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ತಾಲೂಕಿನಲ್ಲಿ ಹನ್ನೊಂದು ಸಾವಿರ ಮತದಾರರಿದ್ದಾರೆ. ಈ ಹಿಂದೆ ಅಯ್ಕೆಯಾದವರು ಜನಾಂಗದ ಬಾದಿತರಿಗೆ ಧ್ವನಿಯಾಗಿ ಕೆಲಸಮಾಡುವಲ್ಲಿ ವಿಫಲರಾಗಿದ್ದಾರೆ. ಜನಾಂಗದ ಬಡವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಉಚಿತವಾಗಿ ಕೊಡಿಸಲು, ಜನಾಂಗದ ಬಾಂಧವರಿಗೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಇರುವ ಸೇವೆ ಕೊಡಿಸಲು, ಜನಾಂಗದಲ್ಲಿ ಅರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದೊಂದಿಗೆ ಉಚಿತ ಶಿಕ್ಷಣ, ಅರೋಗ್ಯ ಮತ್ತು ವೈದ್ಯಕೀಯ ವೆಚ್ಚದಲ್ಲಿ ರಿಯಾಯಿತಿ ದರದ ಸೌಲಭ್ಯ ಕೊಡಿಸಲು ಯೋಜನೆ ರೂಪಿಸಿದ್ದಾರೆ. ಉತ್ತಮ, ಅನುಭವಿ ವ್ಯಕ್ತಿಯನ್ನು ಅಯ್ಕೆ ಮಾಡಿದರೆ ಸಂಘದ ಸವಲತ್ತನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ ಅದ್ದರಿಂದ ಬಿ.ಎನ್ ಲೋಕೇಶ್ ಅವರ ಆಯ್ಕೆಗೆ ಅದ್ಯತೆ ನೀಡಬೇಕೆಂದರು. ಅಭ್ಯರ್ಥಿ ಬಿ.ಎನ್‌.ಲೋಕೇಶ್‌, ಜೆಡಿಎಸ್ ತಾಲೂಕು ಮಾಜಿ ಅಧ್ಯಕ್ಷ ಕೆ.ಎಲ್‌.ಹರೀಶ್‌, ಪ್ರಮುಖರಾದ ಕೃಷ್ಣೆಗೌಡ, ಗಂಗಾಧರ, ಧನಂಜಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!