ಕಸಾಪಗೆ ಹೊಸ ಕಾಯಕಲ್ಪ ನೀಡುವೆ: ಮಾಯಣ್ಣ

166

Get real time updates directly on you device, subscribe now.

ಕುಣಿಗಲ್‌: ಕನ್ನಡ ಸಾಹಿತ್ಯ ಪರಿಷತ್‌ ಅಕ್ಷರಶಃ ಕನ್ನಡ ಶಕ್ತಿಕೇಂದ್ರವನ್ನಾಗಿಸಿ, ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ಕನ್ನಡದ ಕೆಲಸ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಯಣ್ಣ ಹೇಳಿದರು.
ಶನಿವಾರ, ಪಟ್ಟಣದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಕಸಾಪ ಮೂಲಕ ನಾಡು, ನುಡಿಯ ಸರ್ವತೋಮುಖ ಬೆಳವಣಿಗೆಗೆ ಅರ್ಥಿಕ ಬಲ ಅತ್ಯವಶ್ಯಕವಾಗಿದೆ. ಕನ್ನಡನಾಡು, ನುಡಿ, ಸಂಸ್ಕಾರ, ಸಂಸ್ಕೃತಿ ಏಳಿಗೆ ನಿಟ್ಟಿನಲ್ಲಿ ಸಮ್ಮೇಳನಗಳು ನಡೆಸಲು, ಕನ್ನಡ ಭಾಷೆಯ ಹೊಸ ಹೊಸ ಪುಸ್ತಕ ಮುದ್ರಿಸಲು ಹೊಸ ಮುದ್ರಣಾಲಯ ಸ್ಥಾಪನೆ ಸೇರಿದಂತೆ ಹಲವು ಕನ್ನಡದ ಕಾರ್ಯಕ್ರಮಗಳಿಗೆ ಶಾಶ್ವತನಿಧಿಯಾಗಿ ಒಂದು ಸಾವಿರ ಕೋಟಿ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಈ ಶಾಶ್ವತ ನಿಧಿಯ ಬಡ್ಡಿಯಿಂದ ಬರುವ ಸುಮಾರು 45 ಕೋಟಿ ವೆಚ್ಚದಲ್ಲಿ ಕಸಾಪ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅಯೋಜಿಸುವ ದೂರದೃಷ್ಟಿ ಇರುವುದಾಗಿ ತಿಳಿಸಿದರು.
ಕಸಾಪದ ಎಲ್ಲಾ ಸದಸ್ಯರಿಗೂ ಸ್ಮಾರ್ಟ್ ಕಾರ್ಡ್‌ ಗುರುತಿನಚೀಟಿ, ಎಲ್ಲಾ ಜಿಲ್ಲೆ, ತಾಲೂಕುಗಳಲ್ಲೂ ಕಸಾಪ ಭವನ ನಿರ್ಮಾಣಕ್ಕೆ ಒತ್ತು, ಅಖಿಲ ಭಾರತ ಸಮ್ಮೇಳನಕ್ಕೆ ಐದು ಕೋಟಿ, ಗಡಿನಾಡು, ಜಿಲ್ಲಾಸಮ್ಮೇಳನಕ್ಕೆ 10 ಲಕ್ಷ, ತಾಲೂಕು ಸಮ್ಮೇಳನಕ್ಕೆ 2ಲಕ್ಷ, ನಗರಸಭೆ ವಾರ್ಡ್‌ ಸೇರಿದಂತೆ ಎಲ್ಲಾ ಹೋಬಳಿ ಸಮಾವೇಶಕ್ಕೆ 1ಲಕ್ಷರೂ ಅನುದಾನ ಒದಗಿಸಲು ಶ್ರಮಿಸುವುದು ಸೇರಿದಂತೆ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯೆ ಸಾರ್ವಭೌಮ ಗೊಳಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲು ರಾಜ್ಯಾಧ್ಯಕ್ಷನನ್ನಾಗಿ ಅಯ್ಕೆ ಮಾಡುವಂತೆ ಮನವಿ ಮಾಡಿದರು. ತಾಲೂಕು ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಶಿವರಾಮಯ್ಯ, ಪ್ರಮುಖರಾದ ತೋಪನಯ್ಯ, ಕರಿಗೌಡ, ಕೃಷ್ಣಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!