ಜಾಲಿಹಳ್ಳಿ ರಸ್ತೆಯಲ್ಲಿ ಪೈರು ನಾಟಿ ಮಾಡಿ ಆಕ್ರೋಶ

479

Get real time updates directly on you device, subscribe now.

ಕೊಡಿಗೇನಹಳ್ಳಿ: ಸ್ವಾತಂತ್ರ್ಯ ಬಂದರೂ ಈ ಗ್ರಾಮಕ್ಕೆ ಡಾಂಬರು ರಸ್ತೆ ಕಂಡಿಲ್ಲಾ ಎಂದು ಕೆಸರು ಗದ್ದೆಯಾದ ರಸ್ತೆಯಲ್ಲಿ ಪೈರು ನಾಟಿ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕೊಡಿಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗುಟ್ಟೆ ಜಾಲಿಹಳ್ಳಿ ರಸ್ತೆಯನ್ನು ಇದುವರೆಗೂ ಅಭಿವೃದ್ಧಿ ಪಡಿಸಿಲ್ಲಾ ಇದು ದೌರ್ಭಾಗ್ಯ, ಕ್ಷೇತ್ರದ ಶಾಸಕರಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಇದುವರೆಗೂ ಯಾವುದೆ ಪ್ರಯೋಜನವಾಗಿಲ್ಲಾ.
ಚುನಾವಣೆ ಸಮಯದಲ್ಲಿ ಕೇವಲ ಭಾಷಣಕ್ಕೆ ಸೀಮಿತವಾಗುವ ಈ ಗ್ರಾಮಕ್ಕೆ ಕನಿಷ್ಠ ರಸ್ತೆಯನ್ನು ಕಂಡಿಲ್ಲ. ಕೇವಲ ಒಂದು ಕಿಮಿ ರಸ್ತೆ ಅಭಿವೃದ್ಧಿಪಡಿಸಲು ಮೀನಾಮೇಶ ಏಣಿಸಲಾಗುತ್ತಿದೆ ಕಳೆ ಬಂದರೆ ಅಕ್ಷರಶಃ ಈ ರಸ್ತೆಯಲ್ಲಿ ಸಂಚರಿಸುವುದು ದುಸ್ಥರವಾಗಿದೆ.
ಮಳೆ ಬಂದರೆ ಶಾಲಾ ಕಾಲೇಜು ಮಕ್ಕಳು ವೃದ್ಧರು ಈ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆಯಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತುರ್ತಾಗಿ ಸೂಕ್ತ ರಸ್ತೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು ಈ ಬಾರಿ ಬರುವ ಅನುದಾನದಲ್ಲಿ ಆದ್ಯತೆ ಮೇರೆಗೆ ತುರ್ತಾಗಿ ರಸ್ತೆ ಅಭಿವೃದ್ಧಿಪಡಿಸುತ್ತೇವೆ ಎಂದು ಜಿಪಂ ಎಇಇ ಸುರೇಶ್‌ ರೆಡ್ಡಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!