ಕಸಾಪ ಅಧ್ಯಕ್ಷನಾದ್ರೆ ಕನ್ನಡ ಮೀಸಲಾತಿಗೆ ಹೋರಾಡುವೆ: ಆರ್.ವಿ.ಪಿ

483

Get real time updates directly on you device, subscribe now.

ಮಧುಗಿರಿ: ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದರೆ ಸರ್ಕಾರ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗದ ಮೀಸಲಾತಿಗಾಗಿ ಹೋರಾಟ ಮಾಡಲಾಗುವುದೆಂದು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಆರ್‌.ವಿ.ಪುಟ್ಟಕಾಮಣ್ಣ ತಿಳಿಸಿದರು.
ಪಟ್ಟಣದಲ್ಲಿ ಕಸಾಪ ಮತದಾರರು ಉದ್ದೇಶಿಸಿ ಮಾತನಾಡಿ, ರಾಜ್ಯ ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ ಮಹಿಳೆಯರನ್ನು ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ನಾಮಕರಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದ ಅವರು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯದ ಚಟುವಟಿಕೆ ನಡೆಸಿ ಸಾಹಿತ್ಯದ ಕಂಪನ್ನು ಹರಡುವ ಕೆಲಸ ಮಾಡಲಾಗುವುದು. ಈ ಹಿಂದೆ ಶಿರಾ ಕಸಾಪ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಶಿರಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕಾರಣಕರ್ತನಾಗಿದ್ದೇನೆ, ಶಿಕ್ಷನಾಗಿದ್ದ ಹಿನ್ನೆಲೆಯಲ್ಲಿ ಅನುದಾನಿತ ಶಾಲೆಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆದೇಶ ಕಾಲಮಿತಿ ಆದೇಶ ಸಹ ಶಿಕ್ಷಕರ ವೇತನ ತಾರತಮ್ಯ ಕಾರಣಕರ್ತನಾಗಿದ್ದೇನೆ. ಇದೇ ಅಲ್ಲದೇ ಸಾಮಾಜಿಕ ಕಾರ್ಯಕರ್ತನಾಗಿ ದಶಕಗಳಿಂದ ನೆಲೆಗುದಿಗೆ ಬಿದ್ದಿದ್ದ ಜಿಲ್ಲೆಯ ನೀರಾವರಿ, ರೈಲ್ವೆಗಳ ಯೋಜನೆಗಳ ಮಂಜುರಾತಿ ಮತ್ತು ಅನುಷ್ಠಾನಗೊಳಿಸಲು ಕಾರಣಕರ್ತನಾಗಿದ್ದೇನೆ. ಇದೇ ಅಲ್ಲದೇ ಜಿಲ್ಲಾದ್ಯಂತ ಶಾಲಾ ಕಾಲೇಜಿನ 350 ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಶೈಕ್ಷಣಿಕ ಬೆಳವಣಿಗೆಗಳಿಗೆ ಕಾರಣಿಭೂತನಾಗಿದ್ದೇನೆ. ನನಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕುಂಚಾ ಶ್ರೀ ಪ್ರಶಸ್ತಿ, ಸರ್ವೋದಯ ಪ್ರಶಸ್ತಿ ಬಂದಿದೆ ಎಂದರು.
ಮಧುಗಿರಿ ಉಪವಿಭಾಗದಿಂದ ಇದುವರೆವಿಗೂ ಯಾರು ಕಸಾಪಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿಲ್ಲ, ಆದ್ದರಿಂದ ಶಿರಾ, ಮಧುಗಿರಿ ಕೊರಟಗೆರೆ, ಪಾವಗಡ ತಾಲ್ಲೂಕಿನ ಮತದಾರರು ಹೆಚ್ಚಾಗಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಶಿವಲಿಂಗಪ್ಪ, ಕಾಳೇಗೌಡ, ರವಿಕುಮಾರ್‌, ರಾಮಚಂದ್ರಪ್ಪ, ಪದ್ಮಾವತ್ತಮ್ಮ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!