ಒಕ್ಕಲಿಗರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ

237

Get real time updates directly on you device, subscribe now.

ತುಮಕೂರು: ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಡಿಸೆಂಬರ್ 12 ರಂದು ನಡೆಯುವ ಚುನಾವಣೆಗೆ ತುಮಕೂರು ಜಿಲ್ಲೆಯಿಂದ ಆರ್. ಹನುಮಂತರಾಯಪ್ಪ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಕೋಳಾಲ ಮೂಲದವರಾದ ಆರ್.ಹನುಮಂತರಾಯಪ್ಪ ಅವರು ಕಳೆದ ಬಾರಿಯ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದು, ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಿಂದ ಮತ್ತೆ ಆಯ್ಕೆ ಬಯಸಿ ತಮ್ಮ ಪತ್ನಿ ನಾಗರತ್ನಮ್ಮ ಹಾಗೂ ಒಕ್ಕಲಿಗ ಸಮಾಜ ಬಾಂಧವರ ಜೊತೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಹಕಾರ ಇಲಾಖೆಯ ಉಪನಿಬಂಧಕರ ಕಚೇರಿಯಲ್ಲಿರುವ ಉಪನಿರ್ದೇಶಕ ಕಾಂತರಾಜು ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ಬಾರಿ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಿ, ಕೆಲವೇ ಮತಗಳ ಅಂತರದಿಂದ ಸೋಲು ಅನುಭವಿಸಿದ್ದೇ, ಆದರೆ ಈ ಬಾರಿ ಸಮಾಜ ಭಾಂದವರಿಗೆ ನನ್ನೊಂದಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ನಗರದ ಎಲ್ಲಾ ಕೌನ್ಸಿಲರ್ಸ್, ಮಾಜಿ ಡೆಪ್ಯೂಟಿ ಮೇಯರ್ಗಳು, ಚುನಾಯಿತ ಪ್ರತಿನಿಧಿಗಳು ನನಗೆ ಬೆಂಬಲ ಘೋಷಿಸಿ, ಜೊತೆಯಲ್ಲಿದ್ದಾರೆ. ಹಾಗಾಗಿ ಗೆಲ್ಲಲ್ಲಿದ್ದೇನೆ ಎಂಬ ನಂಬಿಕೆ ನನಗಿದೆ ಎಂದರು.
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ತುಮಕೂರಿನಲ್ಲಿ ಒಂದು ಸುಸಜ್ಜಿತ ಒಕ್ಕಲಿಗರ ಭವನ ನಿರ್ಮಾಣ ಮಾಡಬೇಕೆಂಬುದು ನನ್ನ ಗುರಿಯಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಒಂದು ಒಕ್ಕಲಿಗರ ವಿಶ್ವವಿದ್ಯಾಲಯ ತೆರೆಯಬೇಕೆಂಬುದು ನನ್ನ ಮಹಾತ್ವಾಕಾಂಕ್ಷೆಯಾಗಿದೆ. ಇದಕ್ಕೆ ಎಲ್ಲರೂ ಸಹಕರಿಸುತ್ತಾರೆ ಎಂಬ ನಂಬಿಕೆ ನನ್ನದು. ನನ್ನೊಂದಿಗೆ ಇರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಆರ್. ಹನುಮಂತರಾಯಪ್ಪ ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!