ಶಾಲೆಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ

169

Get real time updates directly on you device, subscribe now.

ಕುಣಿಗಲ್‌: ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜಯ್ಯ ಹೇಳಿದರು.
ಹುಲಿಯೂರುದುರ್ಗ ಹೋಬಳಿಯ ಹೊಸಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಶಾಲೆಯ ಹಳೆಯ ವಿದ್ಯಾರ್ಥಿ ಶಾಹಿ ಎಕ್ಸ್ಪೋರ್ಟ್ಸ್ ಪ್ರೈವೇಟ್‌ ಲಿಮಿಟೆಡ್‌, ಬೆಂಗಳೂರಿನ ಬಾಲಕೃಷ್ಣಶೆಟ್ಟಿಯವರು ನಾಲ್ಕು ಲಕ್ಷ ರೂ. ವೆಚ್ಚದಲ್ಲಿ 191 ಮಕ್ಕಳು ಕುಳಿತು ಬಿಸಿಯೂಟ ಮಾಡಲು ನಿರ್ಮಿಸಿದ್ದ ಸಭಾಂಗಣ, ಭೋಜನಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿ ನಿಟ್ಟಿನಲ್ಲಿ ಎಲ್ಲರ ಪಾತ್ರವೂ ಪ್ರಮುಖವಾಗಿದೆ. ಸರ್ಕಾರದ ನೆರೆವಿನ ಜೊತೆಗೆ ಸಾರ್ವಜನಿಕರ, ಶಾಲೆಯ ಹಳೆಯ ವಿದ್ಯಾರ್ಥಿಗಳು, ಖಾಸಗಿಯವರ ಸಹಭಾಗಿತ್ವವೂ ಸೇರಿದಾಗ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ ಎಂದರು.
ಶಾಹಿ ಎಕ್ಸ್ಪೋರ್ಟ್ಸ್ ಪ್ರೈವೇಟ್‌ ಲಿಮಿಟೆಡ್ ನ ಸಿಇಒ, ಹಳೆಯ ವಿದ್ಯಾರ್ಥಿ ಬಾಲಕೃಷ್ಣಶೆಟ್ಟಿ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ರೂಡಿಸಿಕೊಂಡ ಶಿಸ್ತು ಮತ್ತು ಸಮಯಪಾಲನೆ, ಜೀವನದಲ್ಲಿ ಉತ್ತಮ ಗುರಿಯನ್ನು ತಲುಪಲು ಭದ್ರಬುನಾದಿ ಆಗುತ್ತದೆ ಎಂಬ ವಿಷಯ ವಿದ್ಯಾರ್ಥಿಗಳು ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಲಕ್ಷ್ಮಣ್ ರವಿ, ಮಹೇಶ್‌, ನಂಜುಂಡಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶಿವರಾಮಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ, ಶೃತಿ, ಹುಲಿಯೂರುದುರ್ಗ ಗೆಳೆಯರ ಬಳಗ ಕನ್ನಡ ರಾಜ್ಯೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಗಂಗಣ್ಣ, ಸಿ ಆರ್ ಪಿ ನಟರಾಜು, ಶಾಲೆಯ ಮುಖ್ಯಶಿಕ್ಷಕಿ ಶಿವಮ್ಮ,ಸಹ ಶಿಕ್ಷಕರಾದ ಗೋವಿಂದಯ್ಯ, ರಾಜಣ್ಣ, ಪದ್ಮಾವತಮ್ಮ, ಸಮೀನಾ ಬಾನು ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!