ಅಕ್ರಮವಾಗಿ ನೆಲೆಸಿದ್ದ ಇರಾಕ್‌ ಪ್ರಜೆಗಳ ಬಂಧನ

489

Get real time updates directly on you device, subscribe now.

ಕೊರಟಗೆರೆ: ಪ್ರಕೃತಿ ಕಾಲೇಜ್‌ ಆಫ್‌ ಫಾರ್ಮಸಿಯಲ್ಲಿ 3 ವರ್ಷದ ಬಿ ಪಾರ್ಮಸಿ ಶಿಕ್ಷಣಕ್ಕಾಗಿ ಇರಾಕ್‌ ದೇಶದಿಂದ 2012ರಲ್ಲಿ ಭಾರತ ದೇಶಕ್ಕೆ ಆಗಮಿಸಿದ್ದ 3 ಜನ ಇರಾಕ್ ನ ವಿದ್ಯಾರ್ಥಿಗಳ ಪಾಸ್ ಪೋರ್ಟ್‌ ಮತ್ತು ವೀಸಾ ಮುಕ್ತಾಯವಾದ ಪರಿಣಾಮ ಅಕ್ರಮವಾಗಿ ನೆಲೆಸಿದ್ದ ಇಬ್ಬರನ್ನು ಕೊರಟಗೆರೆ ಪೊಲೀಸರ ತಂಡ ಬಂಧಿಸಿ ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಹನುಮಂತಪುರದ ಪ್ರಕೃತಿ ಕಾಲೇಜ್‌ ಆಫ್‌ ಫಾರ್ಮಸಿಯಲ್ಲಿ ಇರಾಕ್‌ ದೇಶದ ನಸ್ಮಾನ್‌ ಯಾಯ್ಯ ಮೀಬ್ಮಾಸ್‌, ಮುರ್ತಾದಾ ತೌಹೀರ್‌ ಸಲ್ಮಾನ್‌ ಮತ್ತು ಅಲ್ ಕುಬೈನ್‌ ಸಫಾಸಮಿ ರಹೀಂ ಎಂಬ ಮೂವರು ವಿದ್ಯಾರ್ಥಿಗಳು ಕೊರಟಗೆರೆ ಪಟ್ಟಣದ ಪಾರ್ಮಸಿ ಕಾಲೇಜಿನಲ್ಲಿ 2012 ರಿಂದ 2018ರ ಅವಧಿಗೆ ಬಿ ಪಾರ್ಮಸಿ ವ್ಯಾಸಂಗಕ್ಕಾಗಿ ದಾಖಲಾಗಿದ್ದಾರೆ.
ಇರಾಕ್‌ ದೇಶದ ನಸ್ಮಾನ್‌ ಯಾಯ್ಯ ಮೀಬ್ಮಾಸ್‌ ಎಂಬಾತನಿಗೆ 2012 ರಿಂದ 2018ರ ವರೆಗೆ ಶಿಕ್ಷಣ, ಮುರ್ತಾದಾ ತೌಹೀರ್‌ ಸಲ್ಮಾನ್‌ಗೆ 2012 ರಿಂದ 2016ರ ವರೆಗೆ ಮತ್ತು ಅಲ್ ಕುಬೈನ್‌ ಸಫಾಸಮಿ ರಹೀಂಗೆ 2012 ರಿಂದ 2019 ಕ್ಕೆ ಪ್ರಕೃತಿ ಕಾಲೇಜ್‌ ಆಫ್‌ ಫಾರ್ಮಸಿಯಲ್ಲಿ ಶಿಕ್ಷಣ ಪಡೆಯಲು ಭಾರತ ಸರಕಾರ ಪಾರ್ಸ್ ಪೋರ್ಟ್‌ ಮತ್ತು ವೀಸಾಗೆ ಅನುಮತಿ ನೀಡಿದೆ.
ಭಾರತ ದೇಶದ ಇರಾಕ್ ನ ವಿದ್ಯಾರ್ಥಿಗಳಿಗೆ ನೀಡಿದ ಪಾರ್ಸ್ ಪೋರ್ಟ್‌ ಮತ್ತು ವೀಸಾದ ಅವಧಿ ಹಾಗೂ ವಿದ್ಯಾರ್ಥಿಗಳ ವ್ಯಾಸಂಗ ಪೂರ್ಣವಾಗಿ 3 ವರ್ಷ ಕಳೆದರೂ ಕೊರಟಗೆರೆ ಪಟ್ಟಣದ ಪ್ರಕೃತಿ ಕಾಲೇಜ್‌ ಆಫ್‌ ಫಾರ್ಮಸಿ ಆಡಳಿತ ಮಂಡಳಿ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡುವಲ್ಲಿ ವಿಫಲವಾಗಿದೆ. ತುಮಕೂರು ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆಯ ಅನುಸಾರ ಕೊರಟಗೆರೆ ಪೊಲೀಸರ ತಂಡ ತನಿಖೆ ನಡೆಸಿ ವಿದೇಶಿ ಪ್ರಜೆಗಳ ಬಂಧನವಾಗಿದೆ.
ಪಾಸ್ ಪೋರ್ಟ್‌ ಮತ್ತು ವೀಸಾದ ಅವಧಿ ಮುಕ್ತಾಯದ ಬಳಿಕವು ಅಕ್ರಮವಾಗಿ ಬೆಂಗಳೂರು ನಗರದಲ್ಲಿ ನೆಲೆಸಿದ್ದ ಅಲ್ ಕುಬೈನ್‌ ಸಫಾಸಮಿ ರಹೀಂ ಎಂಬಾತನನ್ನು ಬಂಧಿಸಿ ಈಗಾಗಲೇ ಇರಾಕ್‌ ದೇಶಕ್ಕೆ ಕಳುಹಿಸಲಾಗಿದೆ. ನಸ್ಮಾನ್‌ ಯಾಯ್ಯ ಮೀಬ್ಮಾಸ್‌ ಎಂಬಾತ ಬೆಂಗಳೂರಿನ ವಿದೇಶಿ ವಿನಿಮಯ ಕೇಂದ್ರದಲ್ಲಿ ಇರಿಸಲಾಗಿದೆ. ಮತ್ತೋರ್ವ ಮುರ್ತಾದಾ ತೌಹೀರ್‌ ಸಲ್ಮಾನ್‌ ಹಿಡಿಯಲು ಈಗಾಗಲೇ ಪೊಲೀಸರ ತಂಡ ಕಾರ್ಯಾಚರಣೆ ಪ್ರಾರಂಭಿಸಿದೆ.
ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಪಾಸ್ ಪೋರ್ಟ್‌ ಹಾಗೂ ವೀಸಾ ಅವಧಿ ಮುಕ್ತಾಯದ ಬಳಿಕ ಭಾರತ ದೇಶದಲ್ಲಿ ನೆಲೆಸಲು ಅವಕಾಶವಿಲ್ಲ. ಕರ್ನಾಟಕ ಆರೋಗ್ಯ ವಿಜ್ಞಾನ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಕೊರಟಗೆರೆ ಪಟ್ಟಣದ ಪ್ರಕೃತಿ ಕಾಲೇಜ್‌ ಆಫ್‌ ಫಾರ್ಮಸಿ ಆಡಳಿತ ಮಂಡಳಿ ವಿದೇಶಿ ವಿದ್ಯಾರ್ಥಿಗಳ ಮಾಹಿತಿ ಭದ್ರತೆಯ ಹಿತದೃಷ್ಟಿಯಿಂದ ಪೊಲೀಸ್‌ ಇಲಾಖೆಗೆ ನೀಡದಿರಲು ಕಾರಣವೇನು ಎಂಬುದನ್ನು ತನಿಖೆ ಮಾಡಬೇಕಿದೆ.
ತುಮಕೂರು ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್ ಕುಮಾರ್‌ ಮತ್ತು ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಮಾರ್ಗದರ್ಶನದಂತೆ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ಮತ್ತು ಪಿಎಸೈ ನಾಗರಾಜು ನೇತೃತ್ವದ ಪೊಲೀಸ್‌ ತಂಡ ಕಾರ್ಯಚರಣೆ ನಡೆಸಿ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬನ ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!